Home> India
Advertisement

Packaged Drinking Water: ಜನವರಿ 1 ರಿಂದ ಬದಲಾಗಲಿದೆ ನೀರಿನ ಬಾಟಲ್ ಗಳ ನಿಯಮ, Taste ಕೂಡ ಬದಲಾವಣೆ

ಪ್ಯಾಕೇಜ್ ಮಾಡಿದ ನೀರಿನ ರುಚಿ ಜನವರಿ 1 ರಿಂದ ಸ್ವಲ್ಪ ಬದಲಾಗಲಿದೆ. ಏಕೆಂದರೆ ಕಂಪನಿಗಳು ಅದರಲ್ಲಿ ಕೆಲವು ಪ್ರಮುಖ ಖನಿಜಾಂಶಗಳನ್ನು ಸೇರಿಸುತ್ತಿವೆ. ಈ ಕಂಪನಿಗಳು ಈ ಕೆಲಸವನ್ನು ಬಹಳ ಹಿಂದೆಯೇ ಮಾಡಬೇಕಾಗಿತ್ತು, ಆದರೆ ಎರಡು ಬಾರಿ ಅದನ್ನು ಸ್ಥಗಿತಗೊಳಿಸಿದ ನಂತರ ಅದನ್ನು ಪುನಃ ಕಾರ್ಯಗತಗೊಳಿಸಲಾಗುತ್ತಿದೆ.

Packaged Drinking Water: ಜನವರಿ 1 ರಿಂದ ಬದಲಾಗಲಿದೆ ನೀರಿನ ಬಾಟಲ್ ಗಳ ನಿಯಮ, Taste ಕೂಡ ಬದಲಾವಣೆ

ನವದೆಹಲಿ: ಬಾಟಲ್ ನೀರಿನ (Packaged Drinking Water) ರುಚಿ ಬದಲಾಗಲಿದೆ. ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರ (Food Safety Standards Authority of India) ನೀರಿನ ಬಾಟಲಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರಿಂದ ಪ್ಯಾಕ್ ಮಾಡಿದ ನೀರನ್ನು ತಯಾರಿಸುವ ವಿಧಾನ ಬದಲಾಯಿಸಲಾಗುತ್ತದೆ.

ಇದನ್ನು ಓದಿ-ಅಕ್ಟೋಬರ್ 1ರಿಂದ ಸಂಭವಿಸಲಿರುವ ಈ ಬದಲಾವಣೆಗಳಿಂದ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ
fallbacks

ಬಾಟಲ್ ನೀರಿನಲ್ಲಿ ಮಿನರಲ್ ಸೇರಿಸುವುದು ಕಡ್ಡಾಯ
ಅಂಗ್ಲ ಭಾಷೆಯ ವೆಬ್ ಸೈಟ್ moneycontrol.com ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ FSSAI ನೂತನ ಮಾರ್ಗಸೂಚಿಗಳು ಜಾರಿಗೆ ಬಂದ ಬಳಿಕ ಪ್ಯಾಕೆಜ್ಡ್ ನೀರನ್ನು ತಯಾರಿಸುವ ಕಂಪನಿಗಳಿಗೆ ಒಂದು ಲೀಟರ್ ನೀರಿನ ಬಾಟಲಿಯಲ್ಲಿ 20 ಮಿಲಿ.ಗ್ರಾಂ ಕ್ಯಾಲ್ಸಿಯಂ ಹಾಗೂ 10 ಮಿಲಿ.ಗ್ರಾಂ. ಮೆಗ್ನೀಸಿಯಮ್ ಬೆರೆಸುವುದು ಕಡ್ಡಾಯವಾಗಲಿದೆ.

ಇದನ್ನು ಓದಿ-ಇನ್ಮುಂದೆ ಖಾದ್ಯ ತೈಲದಲ್ಲಿಯೇ ಸಿಗಲಿವೆ Vitamin A ಹಾಗೂ D
fallbacks

NGT ನೀಡಿದೆ ಆದೇಶ 
ಖನಿಜಗಳು ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಪ್ಯಾಕೇಜಿಂಗ್ ನೀರಿನಲ್ಲಿ ಕೆಲವು ಖನಿಜಗಳನ್ನು ಬೆರೆಸುವ ಸಾಧ್ಯತೆಗಳನ್ನು ಅನ್ವೇಷಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) FSSAIಗೆ ಸೂಚನೆ ನೀಡಿತ್ತು. ನೀರನ್ನು ಫಿಲ್ಟರ್ ಮಾಡುವ ಪ್ರಕ್ರಿಯೆಯಲ್ಲಿ ಖನಿಜಗಳನ್ನು ತೆಗೆಯುವುದು ಅಗತ್ಯವಾಗಿದೆ, ಇದರಿಂದ ಅವುಗಳನ್ನು ಕುಡಿಯಲು ಸುರಕ್ಷಿತವಾಗಿಸಬಹುದು, ಗ್ರಾಹಕರ ಅನುಕೂಲಕ್ಕಾಗಿ ಅವುಗಳನ್ನು ಮತ್ತೆ ಬೆರೆಸಬೇಕು ಎಂದು NGT ಹೇಳಿದೆ.

ಇದನ್ನು ಓದಿ- Sweets ಅಂಗಡಿಯವರು ಅಕ್ಟೋಬರ್ 1ರಿಂದ ಈ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು
fallbacks

ಡಿಸೆಂಬರ್ 31  ಅಂತಿಮ ಡೆಡ್ಲೈನ್ 
NGTಯ ಮೂಲ ಆದೇಶ 29 ಮೇ 2019 ರಂದು ಬಂದಿತು. ಇದನ್ನು ಕಾರ್ಯಗತಗೊಳಿಸಲು ಕಂಪನಿಗಳಿಗೆ ಎರಡು ಬಾರಿ ಅನುಮತಿ ನೀಡಲಾಗಿತ್ತು. ಆದರೆ ಈಗ ಈ ಆದೇಶವನ್ನು ಜಾರಿಗೆ ತರಲು ಸರ್ಕಾರವು ಡಿಸೆಂಬರ್ 31, 2020 ರ ಅಂತಿಮ ಗಡುವನ್ನು ನಿಗದಿಪಡಿಸಿದೆ.

ಇದನ್ನು ಓದಿ-ವೋಕ್ಸವ್ಯಾಗನ್ ಗೆ 100 ಕೋಟಿ ರೂ ದಂಡ ವಿಧಿಸಿದ ಎನ್.ಜಿ.ಟಿ
fallbacks

ಹೆಚ್ಚಿನ ಕಾಲಾವಕಾಶ ನೀಡಲಾಗುವುದಿಲ್ಲ
ಆದ್ದರಿಂದ, ಹೊಸ ನಿಯಮವು ನೂತನ ವರ್ಷ ಅಂದರೆ 1 ಜನವರಿ 2021ಕ್ಕೆ  ಜಾರಿಗೆ ಬರಲಿದೆ. ಹೊಸ ಪದ್ಧತಿಯಲ್ಲಿ ಉತ್ಪನ್ನಗಳನ್ನು ತಯಾರಿಸಲು FSSAI ಈಗಾಗಲೇ ಕಂಪನಿಗಳಿಗೆ ಸೂತ್ರವನ್ನು ನೀಡಿದೆ. ಇದರ ನಂತರ ಪ್ಯಾಕೇಜ್ ಮಾಡಿದ ನೀರಿನ ಕಂಪನಿಗಳಿಗೆ ಹೆಚ್ಚಿನ ಸಮಯವನ್ನು ನೀಡಲಾಗುವುದಿಲ್ಲ ಎಂದು NGT ಸ್ಪಷ್ಟಪಡಿಸಿದೆ.

ಇದನ್ನು ಓದಿ-ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 30ರವರೆಗೆ ಪಟಾಕಿ ನಿಷೇಧಿಸಿ NGT ಆದೇಶ
fallbacks

ನೂತನ ಪದ್ಧತಿಯಲ್ಲಿ ನೀರಿನ ಬಾಟಲಿ ತಯಾರಿಸುವ ಕಾರ್ಯ ಆರಂಭ
ಸದ್ಯ ಭಾರತದಲ್ಲಿ  Kinley, Bailey, Aquafina, Himalayan, Rail Neer, Oxyrich, Vedica ಹಾಗೂ Tata Water Plus ಕಂಪನಿಗಳು ಮಾರುಕಟ್ಟೆಯಲ್ಲಿ ಪ್ಯಾಕ್ ಮಾಡಿದ ನೀರಿನ ವ್ಯವಹಾರ ನಡೆಸುತ್ತವೆ. ಹೊಸ ನಿಯಮದ ಪ್ರಕಾರ ನೀರು ತಯಾರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಎಲ್ಲಾ ಕಂಪನಿಗಳು ತಮ್ಮ ನೀರಿನ ಬಾಟಲಿಗಳಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿ ಮಾರಾಟ ಮಾಡಲಿವೆ. ಭಾರತದಲ್ಲಿ ಪ್ಯಾಕೇಜ್ ಮಾಡಲಾದ ನೀರಿನ ಒಟ್ಟು ವ್ಯವಹಾರ 3000 ಕೋಟಿ ರೂ.ತಲುಪಿದೆ.  ವಿವಿಧ ಕಂಪನಿಗಳು 500 ಮಿಲಿ, 250 ಮಿಲಿ, 1 ಲೀಟರ್, 15-20 ಲೀಟರ್ ಬಾಟಲಿಗಳನ್ನು ಮಾರಾಟ ಮಾಡುತ್ತದೆ. ಆದರೆ 42% ಮಾರುಕಟ್ಟೆ 1 ಲೀಟರ್ ಬಾಟಲಿಗಳಿಂದ ಕೂಡಿದೆ.

Read More