Home> India
Advertisement

ಇಂದು National Umbrella Day! ಛತ್ರಿಯ ಬಗೆಗಿನ ಕೆಲವು ಆಸಕ್ತಿದಾಯಕ ವಿಷಯಗಳು ಇಲ್ಲಿವೆ !

National Umbrella Day : ಛತ್ರಿಯನ್ನು 4,000 ವರ್ಷಗಳ ಹಿಂದೆ ಕಂಡುಹಿಡಿಯಲಾಯಿತು. ಈಜಿಪ್ಟ್, ಅಸಿರಿಯಾ, ಗ್ರೀಸ್ ಮತ್ತು ಚೀನಾದ ಆರಂಭಿಕ ನಾಗರಿಕತೆಗಳಲ್ಲಿ ಇದನ್ನೂ ಬಳಸಲಾಗಿದೆ. 

ಇಂದು National Umbrella Day! ಛತ್ರಿಯ ಬಗೆಗಿನ ಕೆಲವು ಆಸಕ್ತಿದಾಯಕ ವಿಷಯಗಳು ಇಲ್ಲಿವೆ !

National Umbrella Day : ಮಳೆಯೇ ಇರಲಿ, ಬಿಸಿಲೇ ಇರಲಿ ಕೈಯಲ್ಲೊಂದು ಕೊಡ ಇರಲಿ. ವಿಶ್ವದ ಅತ್ಯಂತ ಅನುಕೂಲಕರ ಆವಿಷ್ಕಾರಗಳಲ್ಲಿ ಛತ್ರಿ ಕೂಡಾ ಒಂದಾಗಿದೆ. ಛತ್ರಿ ಮಳೆಗಾಲದಲ್ಲಿ ಮಳೆಯಿಂದ ರಕ್ಷಿಸಿದರೆ ಬಿರು ಬಿಸಿಲಿನಲ್ಲಿ ಸೂರ್ಯನ ತಾಪದಿಂದ ಕಾಪಾಡುತ್ತದೆ. ಛತ್ರಿಯನ್ನು 4,000 ವರ್ಷಗಳ ಹಿಂದೆ ಕಂಡುಹಿಡಿಯಲಾಯಿತು. ಈಜಿಪ್ಟ್, ಅಸಿರಿಯಾ, ಗ್ರೀಸ್ ಮತ್ತು ಚೀನಾದ ಆರಂಭಿಕ ನಾಗರಿಕತೆಗಳಲ್ಲಿ ಇದನ್ನು ಬಳಸಲಾಗಿದೆ.  ಇಂದು ಅಂದರೆ  ಫೆಬ್ರವರಿ 10 ರಂದು ರಾಷ್ಟ್ರೀಯ  ಛತ್ರಿಯ ದಿನವನ್ನು (National Umbrella Day) ದೇಶಾದ್ಯಂತ ಆಚರಿಸಲಾಗುತ್ತದೆ.

16ನೇ ಶತಮಾನದಿಂದಲೇ ಛತ್ರಿಯ ಬಳಕೆ : 

ಆರಂಭದಲ್ಲಿ ಸೂರ್ಯನ ಪ್ರಖರ ಕಿರಣಗಳಿಂದ ನೆರಳು ಪಡೆಯುವ ಉದ್ದೇಶಕ್ಕಾಗಿ ಛತ್ರಿಗಳನ್ನು ಬಳಸಲಾಯಿತು. ನಂತರ ಮೇಣ ಮತ್ತು ಎಣ್ಣೆಯನ್ನು ಬಳಸಿ ವಾಟರ್ ಪ್ರೂಫ್ ಛತ್ರಿಯನ್ನು ಚೀನಿಯರು ಕಂಡು ಹಿಡಿದರು. 16ನೇ ಶತಮಾನದಷ್ಟು ಹಿಂದೆಯೇ ಯೂರೋಪಿನಲ್ಲಿ  ಮಹಿಳೆಯರು  ಛತ್ರಿಗಳನ್ನು ಬಳಸುತ್ತಿದ್ದರು ಎನ್ನುತ್ತದೆ ಇತಿಹಾಸ. ಪರ್ಷಿಯನ್ ಪ್ರವಾಸಿಗ ಮತ್ತು ಬರಹಗಾರ ರೋನಾಸ್ ಹಾನ್ವೇ  30 ವರ್ಷಗಳ ಕಾಲ ಇಂಗ್ಲೆಂಡ್‌ನಲ್ಲಿ ಸಾರ್ವಜನಿಕವಾಗಿ ಒಂದೇ ಛತ್ರಿಯನ್ನು  ಬಳಸಿದ ನಂತರ ಛತ್ರಿಯ ರೂಪವೇ ಬದಲಾಯಿತು. ಛತ್ರಿಯ ಶೈಲಿಯಲ್ಲಿ  ಪ್ರಾರಂಭದಿಂದಲೂ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅದರ ತೂಕದಲ್ಲಿ ಹೆಚ್ಚು ಕಮ್ಮಿ ಮಾಡಲಾಗಿದೆ. 2000 ನೇ ಶತಮಾನದಲ್ಲಿ, ಮಹಿಳೆಯರಿಗಾಗಿ ಭಿನ್ನವಾದ ಕಲರ್ ಕಲರ್ ಛತ್ರಿಗಳನ್ನು ಪರಿಚಯಿಸಲಾಯಿತು. 

ಇದನ್ನೂ ಓದಿ : ಎಸ್‌ಎಸ್‌ಸಿ ಸಿಜಿಎಲ್ ಟೈರ್ ಫಲಿತಾಂಶ ಪ್ರಕಟ ! ನೇರ ಲಿಂಕ್ ಮೂಲಕ ಚೆಕ್ ಮಾಡಿ

ಛತ್ರಿಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ : 
1. ಪ್ರಾಚೀನ ಕಾಲದಲ್ಲಿ, ಛತ್ರಿಗಳನ್ನು ಮರ ಮತ್ತು ಮೂಳೆಗಳಿಂದ ಮಾಡಲಾಗುತ್ತಿತ್ತು.
 2. ಅಂಬ್ರೆಲ್ಲಾ ಎಂಬ ಪದವು ಲ್ಯಾಟಿನ್ ಪದ umbera ನಿಂದ ಬಂದಿದೆ, ಇದರ ಅರ್ಥ ನೆರಳು.
3. ಪ್ರಾಚೀನ ಕಾಲದಲ್ಲಿ ಸೂರ್ಯನ ತಾಪದಿಂದ ರಕ್ಷಿಸಲು ಛತ್ರಿಗಳನ್ನು ಬಳಸಲಾಗುತ್ತಿತ್ತು. ನಂತರ ಪ್ರಾಚೀನ ರೋಮ್ ನಲ್ಲಿ ಮಳೆಗಾಗಿ ಛತ್ರಿಗಳನ್ನು ಬಳಸಲಾಗುತ್ತಿತ್ತು.
4. 1800 ರ ದಶಕದಲ್ಲಿ ಛತ್ರಿಗಳನ್ನು ಮಹಿಳೆಯರ ಸೌಂದರ್ಯ ಸಾಧನವಾಗಿ ಬಳಸಲಾಯಿತು. 
5. ಫೆಬ್ರವರಿ 10 ರಂದು ಪ್ರಪಂಚದಾದ್ಯಂತ ಅಂಬ್ರೆಲಾ ದಿನವನ್ನು ಆಚರಿಸಲಾಗುತ್ತದೆ.
6. ಪ್ರಾಚೀನ ಚೀನಾದ ಜನರು ಛತ್ರಿಯ ಮೇಲೆ ಮೇಣದ ಪದರವನ್ನು ಹಾಕಿ, ಇದನ್ನು ಮಳೆಯಿಂದ ರಕ್ಷಿಸಲು ಬಳಸಳು ಆರಂಭಿಸಿದರು. 
7.  ಒಂದು ಕಾಲದಲ್ಲಿ ಛತ್ರಿ ಯುರೋಪಿನಾದ್ಯಂತ ಸಜ್ಜನಿಕೆಯ ಸಂಕೇತವಾಗಿತ್ತು. 
8. ಜೇಮ್ಸ್ ಸ್ಮಿತ್ ಮತ್ತು ಸನ್ಸ್ ಛತ್ರಿಗಳನ್ನು ಮಾರಾಟ ಮಾಡಲು ತೆರೆದ ವಿಶ್ವದ ಮೊದಲ ಅಂಗಡಿಯಾಗಿದೆ. 

ಇದನ್ನೂ ಓದಿ : Video : ಸಂಸತ್ತಿನಲ್ಲಿ ಅವಾಚ್ಯ ಶಬ್ದ ಬಳಿಸಿ ಟೀಕೆಗೆ ಗುರಿಯಾದ ಟಿಎಂಸಿ ಸಂಸದೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More