Home> India
Advertisement

Bharat Biotech ನ ಮೂಗಿನ ಮೂಲಕ ನೀಡಲಾಗುವ Covid-19 ಲಸಿಕೆಯ 2ನೇ ಹಾಗೂ 3ನೇ ಹಂತದ ಪರೀಕ್ಷೆಗೆ ಅನುಮತಿ

Nasal Vaccine: ಭಾರತ್ ಬಯೋಟೆಕ್ ನ ಮೂಗಿನ ಮೂಲಕ ನೀಡಲಾಗುವ ಲಸಿಕೆಯ ಹಂತ II ಮತ್ತು IIIರ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ನೀಡಲಾಗಿದೆ.

Bharat Biotech ನ ಮೂಗಿನ ಮೂಲಕ ನೀಡಲಾಗುವ Covid-19 ಲಸಿಕೆಯ 2ನೇ ಹಾಗೂ 3ನೇ ಹಂತದ ಪರೀಕ್ಷೆಗೆ ಅನುಮತಿ

Nasal Vaccine: ಕೋವಿಡ್ -19 (Covid-19) ವಿರುದ್ಧ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಮೊದಲ ಮೂಗಿನ (Nasel Spray Vaccine) ಲಸಿಕೆಯ ಹಂತ II ಮತ್ತು IIIರ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ನೀಡಲಾಗಿದೆ. ಜೈವಿಕ ತಂತ್ರಜ್ಞಾನ ಇಲಾಖೆ ಈ ಮಾಹಿತಿಯನ್ನು ನೀಡಿದೆ. ಮೊದಲ ಹಂತದ ಪ್ರಯೋಗವನ್ನು 18 ರಿಂದ 60 ವರ್ಷದೊಳಗಿನ ಜನರ ಮೇಲೆ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಂಟ್ರಾನೆಸಲ್ ಲಸಿಕೆ ಬಿಬಿವಿ154 (BBV154) ಆಗಿದ್ದು, ಇದರ ತಂತ್ರಜ್ಞಾನವನ್ನು ಭಾರತ್ ಬಯೋಟೆಕ್ ಸೆಂಟ್ ಲೂಯಿಸ್ ನಲ್ಲಿರುವ ವಾಷಿಂಗ್ಟನ್ ಯುನಿವರ್ಸಿಟಿಯಿಂದ (Washington University)ಪಡೆದುಕೊಂಡಿದೆ. ಇದು ಈ ರೀತಿಯ ಮೊದಲ ವ್ಯಾಕ್ಸಿನ್ ಆಗಿದ್ದು, ಭಾರತದಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗುವುದು.

ಈ ಕುರಿತು ಹೇಳಿಕೆ ನೀಡಿರುವ ಭಾರತ್ ಬಯೋಟೆಕ್ (Bharat Biotech)
"ಹಂತ Iರ  ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸುವವರಿಗೆ ಆರೋಗ್ಯವಂತರಿಗೆ ನೀಡಲಾಗುವ ಲಸಿಕೆ ಪ್ರಮಾಣವನ್ನು ಭಾಗವಹಿಸಿದವರ ದೇಹ ಚೆನ್ನಾಗಿ ಸ್ವೀಕರಿಸಿದೆ. ಯಾವುದೇ ಗಂಭೀರ ಅಡ್ಡಪರಿಣಾಮಗಳು ಕಂಡುಬಂದಿಲ್ಲ" ಎಂದು ಹೇಳಿದೆ. ಲಸಿಕೆ ಹಿಂದಿನ ವೈದ್ಯಕೀಯ ಅಧ್ಯಯನಗಳಲ್ಲಿಯೂ ಇದು  ಸುರಕ್ಷಿತವೆಂದುಸಾಬೀತಾಗಿದೆ. ಪ್ರಾಣಿಗಳ ಅಧ್ಯಯನದಲ್ಲಿ, ಲಸಿಕೆ ಹೆಚ್ಚಿನ ಮಟ್ಟದ ಪ್ರತಿಕಾಯಗಳನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. 

ಇದನ್ನೂ ಓದಿ-Corona Vaccine: ಈ ದೇಶದಲ್ಲಿ ಲಸಿಕೆ ಪಡೆಯದವರಿಗೆ ರೈಲು ಪ್ರಯಾಣ ನಿಷೇಧ

ಪ್ರಸ್ತುತ, ದೇಶದಲ್ಲಿ ಮೂರು ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ.  ಇವುಗಳಲ್ಲಿ  ಭಾರತ್ ಬಯೋಟೆಕ್‌ನ ಕೊವಾಕ್ಸಿನ್, ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ. ಶಾಮೀಲಾಗಿವೆ. ಮೊಡೆರ್ನಾದ ಎಂಆರ್‌ಎನ್‌ಎ ಲಸಿಕೆ ಮತ್ತು ಜಾನ್ಸನ್ ಆಂಡ್ ಜಾನ್ಸನ್‌ನ ಸಿಂಗಲ್ ಡೋಸ್ ಲಸಿಕೆಗಳಿಗೂ ಕೂಡ  ಸರ್ಕಾರವು ಅನುಮೋದಿಸಿದೆ.

ಇದನ್ನೂ ಓದಿ-Vaccine Mixing And Matching - Covishield ಹಾಗೂ Covaxin ಮಿಕ್ಸ್ ಲಸಿಕೆ ಹಾಕಿಸಿಕೊಂಡವರಲ್ಲಿ ಉತ್ತಮ ಪರಿಣಾಮ ಗಮನಿಸಲಾಗಿದೆ: ICMR

ದೇಶದಲ್ಲಿ ಇದುವರೆಗೆ 52.95 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಗುರುವಾರ, 18 ರಿಂದ 44 ವರ್ಷ ವಯಸ್ಸಿನ 27,83,649 ಜನರಿಗೆ ಮೊದಲ ಡೋಸ್ ಮತ್ತು 4,85,193 ಜನರಿಗೆ ಎರಡನೇ ಡೋಸ್ ನೀಡಲಾಗಿದೆ.

ಇದನ್ನೂ ಓದಿ-Corona Vaccine: ಲಸಿಕೆಯ ಕೊರತೆ ನೀಗಿಸಲು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಸಲಹೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More