Home> India
Advertisement

NASA Alert!... London Eye ಗಿಂತ ಗಾತ್ರದಲ್ಲಿ ವಿಶಾಲವಾದ Asteroid ಭೂಮಿಯೆಡೆಗೆ ಶರವೇಗದಲ್ಲಿ ಧಾವಿಸುತ್ತಿದೆಯಂತೆ

ಗಾತ್ರದಲ್ಲಿ London Eyeಗಿಂತ ವಿಶಾಲವಾದ Asteroidವೊಂದು ಭೂಮಿಯತ್ತ ಶರವೇಗದಿಂದ ಧಾವಿಸುತ್ತಿದೆ.

NASA Alert!... London Eye ಗಿಂತ ಗಾತ್ರದಲ್ಲಿ ವಿಶಾಲವಾದ Asteroid ಭೂಮಿಯೆಡೆಗೆ ಶರವೇಗದಲ್ಲಿ ಧಾವಿಸುತ್ತಿದೆಯಂತೆ

ನವದೆಹಲಿ: ವರ್ಷ 2020 ದೇಶ ಮತ್ತು ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಯಾಗಿರುವುದು ನಿಮ್ಮೆಲ್ಲರಿಗೂ ತಿಳಿದ ವಿಷಯವೆ. ಆದ್ರೆ ಇದನ್ನೆಲ್ಲಾ ಪಕ್ಕಕ್ಕಿಟ್ಟು, ವಿಜ್ಞಾನದ ಕುರಿತು ಹೇಳುವುದಾದರೆ, ವರ್ಷ 2020ರಲ್ಲಿ ಖಗೋಳದಲ್ಲಿಯೂ ಕೂಡ ಕೋಲಾಹಲವೇ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಈ ಕುರಿತು ನಾಸಾ ನಿರಂತರವಾಗಿ ತನ್ನ ಫ್ಯಾಕ್ಟ್ ಹಾಗೂ ಎಚ್ಚರಿಕೆಯನ್ನು ಜಾರಿಗೊಳಿಸುತ್ತಲೇ ಇದೆ. ಈ ವರ್ಷ ಖಗೋಳದಲ್ಲಿ ಹಲವು ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಗಳ ಜೊತೆಗೆ, ಬಾಹ್ಯಾಕಾಶದಲ್ಲಿ ಸಾಕಷ್ಟು ಹಲ್-ಚಲ್ ಸೃಷ್ಟಿಯಾಗಿದೆ. ದಿನನಿತ್ಯ ಹಲವು ಚಿತ್ರ ವಿಚಿತ್ರ ಸಂಗತಿಗಳು ಬಾಹ್ಯಾಕಾಶದಿಂದ ವರದಿಯಾಗುತ್ತಲೇ ಇವೆ.

NASA ನೀಡಿರುವ ನೂತನ ಎಚ್ಚರಿಕೆ ಏನು?

ಬಾಹ್ಯಾಕಾಶ ಸಂಸ್ಥೆ ನಾಸಾ ಜಗತ್ತಿಗೆ ಹೊಸ ಎಚ್ಚರಿಕೆ ನೀಡಿದೆ. ನಾಸಾ ಪ್ರಕಾರ, ಬೃಹದಾಕಾರದ ಕ್ಷುದ್ರಗ್ರಹವೊಂದು ಶರವೇಗದಲ್ಲಿ ಭೂಮಿಯೆಡೆಗೆ ಬರುತ್ತಿದೆ. ಈ ಕ್ಷುದ್ರಗ್ರಹವು ಲಂಡನ್ ಐಗಿಂತ ಗಾತ್ರದಲ್ಲಿ ಒಂದೂವರೆ ಪಟ್ಟು ದೊಡ್ಡದಾಗಿದೆ. ಯುನೈಟೆಡ್ ಕಿಂಗ್‌ಡಂನ ಹೆಗ್ಗುರುತು ಲಂಡನ್ ಐನ ಎತ್ತರವು ಸುಮಾರು 443 ಅಡಿಗಳಷ್ಟಿದೆ ಮತ್ತು ಭೂಮಿಯೆಡೆಗೆ ಧಾವಿಸುತ್ತಿರುವ ಕ್ಷುದ್ರಗ್ರಹದ ಆಕರ ಅದಕ್ಕಿಂತ ಶೇ 50 ರಷ್ಟು ದೊಡ್ಡದಾಗಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಈ ಕ್ಷುದ್ರಗ್ರಹಕ್ಕೆ Asteroid2020ND ಎಂದು ಹೆಸರಿಸಿದೆ ಹಾಗೂ ಭೂಯಲ್ಲಿರುವ ಜೀವರಾಶಿಗೆ ಇದು ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ ಎಂದು ನಾಸಾ ಎಚ್ಚರಿಕೆ ನೀಡಿದೆ. ಜುಲೈ 24, 2020 ಈ ಕ್ಷುದ್ರಗ್ರಹ ಭೂಮಿಯ ಅತ್ಯಂತ ಸನೀಹಕ್ಕೆ ಬರಲಿದೆ ಎಂದು ಸಂಸ್ಥೆ ಹೇಳಿದೆ. NASA ನೀಡಿರುವ ಎಚ್ಚರಿಕೆಯ ಪ್ರಕಾರ ಈ ಕ್ಷುದ್ರಗ್ರಹ ಭೂಮಿಯ  0.034 AU (Astronomical unit) ರೇಂಜ್ ನ ಒಳಗಡೆ ಬರಲಿದೆ. ಒಂದು ಆಸ್ಟ್ರೋನೋಮಿಕಲ್ ಯುನಿಟ್, 150 ಮಿಲಿಯನ್ ಕಿ.ಮೀ ಸಮನಾಗಿರುತ್ತದೆ ಅಂದರೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರಕ್ಕೆ ಇದು ಸಮನಾಗಿರುತ್ತದೆ.

ಈ ಖಗೋಳ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಸ್ವಾರಸ್ಯಕರ ಪ್ರತಿಕ್ರಿಯೆಗಳು ಕಂಡುಬರುತ್ತಿವೆ.

Read More