Home> India
Advertisement

Nagaland Civilians Killing:ಉಗ್ರರೆಂದು ನಾಗರಿಕರ ಹತ್ಯೆ.. ಉನ್ನತ ಸೇನಾ ಮಟ್ಟದ ತನಿಖೆಗೆ ಆದೇಶ

Nagaland Civilians Killing: ನಾಗಾಲ್ಯಾಂಡ್‌ನ ಇಂಡೋ-ಮ್ಯಾನ್ಮಾರ್ ಗಡಿ ಜಿಲ್ಲೆಯಲ್ಲಿ ಶನಿವಾರ ಉಗ್ರರ ವಿರುದ್ಧದ ಕಾರ್ಯಾಚರಣೆಯ ವೇಳೆ ಮಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಕೂಲಿ ಕಾರ್ಮಿಕರನ್ನು ಉಗ್ರರು ಎಂದು ತಪ್ಪಾಗಿ ಭಾವಿಸಿ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ ಸುಮಾರು 13 ಮಂದಿ ನಾಗರಿಕರು ಜೀವ ಕಳೆದುಕೊಂಡಿದ್ದಾರೆ.  

Nagaland Civilians Killing:ಉಗ್ರರೆಂದು ನಾಗರಿಕರ  ಹತ್ಯೆ.. ಉನ್ನತ ಸೇನಾ ಮಟ್ಟದ ತನಿಖೆಗೆ ಆದೇಶ

ನವದೆಹಲಿ: ನಾಗಾಲ್ಯಾಂಡ್‌ನ ಇಂಡೋ-ಮ್ಯಾನ್ಮಾರ್ ಗಡಿ ಜಿಲ್ಲೆಯಲ್ಲಿ ಶನಿವಾರ ಉಗ್ರರ ವಿರುದ್ಧದ ಕಾರ್ಯಾಚರಣೆಯ ವೇಳೆ ಮಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಕೂಲಿ ಕಾರ್ಮಿಕರನ್ನು ಉಗ್ರರು ಎಂದು ತಪ್ಪಾಗಿ ಭಾವಿಸಿ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ ಸುಮಾರು 13 ಮಂದಿ ನಾಗರಿಕರು ಜೀವ (Nagaland Civilians Killing) ಕಳೆದುಕೊಂಡಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನೆಯು ವಿಚಾರಣೆಗೆ ಭಾನುವಾರ ಆದೇಶಿಸಿದೆ ಮತ್ತು ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ.

ಓಟಿಂಗ್ ಮತ್ತು ತಿರು ಗ್ರಾಮಗಳ ಭಾಗದಲ್ಲಿ ಉಗ್ರ ಸಂಘಟನೆ ಎನ್‌ಎಸ್‌ಸಿಎನ್ (ಕೆ)ಯ ಯಂಗ್ ಆಂಗ್ ಘಟಕದ ಸದಸ್ಯರು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಸೇನಾ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದರು. ಶನಿವಾರ ಸಂಜೆ ಕಲ್ಲಿದ್ದಲು ಗಣಿಯೊಂದರಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ಪಿಕ್ಅಪ್ ವಾಹನ ಒಂದರಲ್ಲಿ ತಮ್ಮ ಮನೆಗಳಿಗೆ ಮರಳುತ್ತಿದ್ದರು. ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದ್ದ ಸೇನೆ, ಈ ವಾಹನ ಕಂಡು ಇದೇ ಉಗ್ರರ ತಂಡ ಇರಬೇಕು ಎಂದು ಭಾವಿಸಿ ದಾಳಿ ನಡೆಸಿದೆ ಎನ್ನಲಾಗಿದೆ.  

ಇದನ್ನೂ ಓದಿ:Filing Income Tax Return: ಡಿಸೆಂಬರ್ 31ರ ಮೊದಲು ಈ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ದಿದ್ರೆ ಜನವರಿ ನಂತರ ಪೆನಾಲ್ಟಿ ಗ್ಯಾರಂಟಿ

ಸೇನಾ ಪಡೆ ಗುಂಡು ಹಾರಿಸಿದಾಗ ಆರು ಗ್ರಾಮಸ್ಥರು ಸಾವನ್ನಪ್ಪಿದರು. ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದರು ಎಂದು ಮೂಲಗಳು ತಿಳಿಸಿವೆ.  ಸ್ವಲ್ಪ ಸಮಯದ ನಂತರ, ಕೋಪಗೊಂಡ ಸ್ಥಳೀಯರು ಭದ್ರತಾ ಪಡೆಗಳನ್ನು ಸುತ್ತುವರೆದರು. "ಆತ್ಮ ರಕ್ಷಣೆಗಾಗಿ" ಪಡೆಗಳು ಗುಂಪಿನ ಮೇಲೆ ಗುಂಡು ಹಾರಿಸಿದ್ದರಿಂದ ಐದು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಓರ್ವ ಯೋಧ ಕೂಡ ಹುತಾತ್ಮರಾಗಿದ್ದಾರೆ. ಭದ್ರತಾ ಪಡೆಗಳ ಮೂರು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.

ಒಂದು ಹೇಳಿಕೆಯಲ್ಲಿ, ಸೇನೆಯು ಹೀಗೆ ಹೇಳಿದೆ: "ಬಂಡುಕೋರರ ಚಲನವಲನದ ವಿಶ್ವಾಸಾರ್ಹ ಗುಪ್ತಚರ ಆಧಾರದ ಮೇಲೆ, ತಿರು, ಮಾನ್ ಜಿಲ್ಲೆ, ನಾಗಾಲ್ಯಾಂಡ್ ಪ್ರದೇಶದಲ್ಲಿ ನಿರ್ದಿಷ್ಟ ಕಾರ್ಯಾಚರಣೆಯನ್ನು ನಡೆಸಲು ಯೋಜಿಸಲಾಗಿದೆ. ಘಟನೆ ಮತ್ತು ಅದರ ನಂತರದ ಘಟನೆಗಳ ಬಗ್ಗೆ ತೀವ್ರವಾಗಿ ವಿಷಾದಿಸುತ್ತವೆ".

"ದುರದೃಷ್ಟಕರ ಪ್ರಾಣಹಾನಿಗೆ ಕಾರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ ಮತ್ತು ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಘಟನೆಯಲ್ಲಿ ಭದ್ರತಾ ಪಡೆಗಳಿಗೆ ತೀವ್ರ ಗಾಯಗಳಾಗಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, "ನಾಗಾಲ್ಯಾಂಡ್‌ನ ಓಟಿಂಗ್‌ನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ದುಃಖವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಎಸ್‌ಐಟಿ ಈ ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡುತ್ತದೆ." ಎಂದಿದ್ದಾರೆ.

ಇದನ್ನೂ ಓದಿ: 11 ಬಾರಿ ಮದುವೆಯಾಗಿರುವ 52 ವರ್ಷದ ಮಹಿಳೆ 12ನೇ ಪತಿಗಾಗಿ ಸಿದ್ಧ..!

"ಓಟಿಂಗ್, ಸೋಮವಾರದಂದು ನಾಗರಿಕರ ಹತ್ಯೆಗೆ ಕಾರಣವಾದ ದುರದೃಷ್ಟಕರ ಘಟನೆ ಅತ್ಯಂತ ಖಂಡನೀಯವಾಗಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪ. ಉನ್ನತ ಮಟ್ಟದ ಎಸ್‌ಐಟಿ ದೇಶದ ಕಾನೂನಿನ ಪ್ರಕಾರ ತನಿಖೆ ಮತ್ತು ನ್ಯಾಯವನ್ನು ನೀಡುತ್ತದೆ" ಎಂದು ಮುಖ್ಯಮಂತ್ರಿ ರಿಯೊ ಟ್ವೀಟ್ ಮಾಡಿದ್ದಾರೆ.

Read More