Home> India
Advertisement

ಬಿಜೆಪಿ ಸದಸ್ಯತ್ವ ಪಡೆದ ಅಲಿಗಢದ ಮುಸ್ಲಿಂ ಮಹಿಳೆಗೆ ಮನೆ ಮಾಲೀಕ ಮಾಡಿದ್ದೇನು ಗೊತ್ತಾ?

ಸಂತ್ರಸ್ತೆ ಮನೆ ಮಾಲೀಕನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
 

ಬಿಜೆಪಿ ಸದಸ್ಯತ್ವ ಪಡೆದ ಅಲಿಗಢದ ಮುಸ್ಲಿಂ ಮಹಿಳೆಗೆ ಮನೆ ಮಾಲೀಕ ಮಾಡಿದ್ದೇನು ಗೊತ್ತಾ?

ಅಲಿಗಢ: ದೆಹಲಿಯ ಅಲಿಗಢದ ದಹಲಿಜೆಟ್ ಪ್ರದೇಶದ ಮುಸ್ಲಿಂ ಮಹಿಳೆಯೊಬ್ಬರು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಸದಸ್ಯತ್ವ ಪಡೆದ ಹಿನ್ನೆಲೆಯಲ್ಲಿ, ಮನೆ ಮಾಲೀಕ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಿಂದ ಹೊರದಬ್ಬಿದ ಘಟನೆ ನಡೆದಿದೆ.

ಸಂತ್ರಸ್ತೆ ಮನೆ ಮಾಲೀಕನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ಬಗ್ಗೆ ಕ್ರಮ ಕೈಗೊಂಡಿರುವ ಪೊಲೀಸರು ಮನೆ ಮಾಲೀಕರ ಮಗ ಸಲ್ಮಾನ್‌ನನ್ನು ಬಂಧಿಸಿದ್ದಾರೆ. ಕುಟುಂಬದ ಇತರ ಸದಸ್ಯರು ಮನೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

fallbacksಬಿಜೆಪಿ ಸದಸ್ಯತ್ವ ಪಡೆದ ಮುಸ್ಲಿಂ ಮಹಿಳೆಯರು.

2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸಿನ ಬಳಿಕ ಭಾರತೀಯ ಜನತಾ ಪಕ್ಷ ತನ್ನ ಸದಸ್ಯತ್ವ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿದೆ. ಈ ಬಾರಿ ಮುಸ್ಲಿಂ ಮಹಿಳೆಯರ ಸದಸ್ಯತ್ವಕ್ಕಾಗಿ ಹೆಚ್ಚು ಗಮನಹರಿಸಿರುವ ಬಿಜೆಪಿ ನಿರ್ದಿಷ್ಟ ವಿಷಯಗಳನ್ನು ಮುಂದಿಟ್ಟುಕೊಂಡು ಅವರನ್ನು ತಲುಪುವ ಪ್ರಯತ್ನಕ್ಕೆ ಕೈ ಹಾಕಿದೆ. ಮುಸ್ಲಿಮರನ್ನು ಬಿಜೆಪಿ ಎಂದಿಗೂ ಅಸ್ಪೃಶರು ಎಂದು ಭಾವಿಸಿಲ್ಲ. ಭಾರತೀಯ ಜನತಾ ಪಕ್ಷ ಸಮಾಜದ ಎಲ್ಲಾ ಜನರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಬಯಸುತ್ತದೆ ಎಂದು ಉತ್ತರ ಪ್ರದೇಶ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಮ್ದಾರ್ ಅಬ್ಬಾಸ್ ಚಂದ್ ಹೇಳಿದ್ದರು.

ತ್ರಿವಳಿ ತಲಾಖ್ ವಿಚಾರವಾಗಿ ಬಿಜೆಪಿ ನಿರ್ಧಾರ ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆದಿದೆ. ಇತರ ರಾಜ್ಯಗಳಲ್ಲಿಯೂ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳನ್ನೂ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಹೀಗಾಗಿ ಈ ವರ್ಗಕ್ಕೆ ಪಕ್ಷದ ಬಗ್ಗೆ ಭರವಸೆ ಮೂಡಿತ್ತು. ಈ ರೀತಿ ಹಲವು ಕಾರಣಗಳಿಂದ ಮುಸ್ಲಿಂ ಮಹಿಳೆಯರು ಬಿಜೆಪಿ ಸದಸ್ಯತ್ವ ಪಡೆಯಲು ಮುಂದಾಗಿದ್ದಾರೆ.
 

Read More