Home> India
Advertisement

Mumbai Terror Attack: ಮುಂಬೈ 26/11 ಭಯೋತ್ಪಾದಕ ದಾಳಿ: ಉಗ್ರರ ಅಟ್ಟಹಾಸದ ಕರಾಳ ನೆನಪಿಗೆ 13 ವರ್ಷ

Mumbai Terror Attack: ಸರಿಯಾಗಿ 12 ವರ್ಷದ ಹಿಂದೆ 2008ರ ನವೆಂಬರ್​​ 26ರ ರಾತ್ರಿ ವೇಳೆಗೆ ಮುಂಬೈ ನಡುಗಿ ಹೋಗಿತ್ತು. ಮುಂಬೈ ಮೇಲೆ ಪಾಪಿ ಪಾಕಿಸ್ತಾನದ ಲಷ್ಕರ್‌- ಎ- ತೊಯ್ಬಾ ಸಂಘಟನೆಯ ಉಗ್ರರು ಮಾಡಿದ ದಾಳಿಯ ಘೋರ ಅಧ್ಯಾಯಕ್ಕೆ ಇಂದಿಗೆ 13 ವರ್ಷ. ದಶಕವೇ ಕಳೆದರೂ ಭಾರತದ ನೆಲದೊಳಗೆ ನಡೆದ ಉಗ್ರರ ಅಟ್ಟಹಾಸದ ಭೀಕರತೆ ಮಾತ್ರ ಇನ್ನೂ ಕಣ್ಣು ಮುಂದೆಯೇ ಇದೆ. 
 

Mumbai Terror Attack: ಮುಂಬೈ 26/11 ಭಯೋತ್ಪಾದಕ ದಾಳಿ: ಉಗ್ರರ ಅಟ್ಟಹಾಸದ ಕರಾಳ ನೆನಪಿಗೆ 13 ವರ್ಷ

ಮುಂಬೈ (ಮಹಾರಾಷ್ಟ್ರ): ಭಾರತದ ಆರ್ಥಿಕ ರಾಜಧಾನಿ ಮುಂಬೈ ಮೇಲೆ ಪಾಪಿ ಪಾಕಿಸ್ತಾನದ ಲಷ್ಕರ್‌- ಎ- ತೊಯ್ಬಾ ಸಂಘಟನೆಯ ಉಗ್ರರು ಮಾಡಿದ ದಾಳಿಯ (Mumbai 26/11 terror attack) ಘೋರ ಅಧ್ಯಾಯಕ್ಕೆ ಇಂದಿಗೆ 13 ವರ್ಷ. ಈ ಸಂದರ್ಭದಲ್ಲಿ ದಾಳಿಯಲ್ಲಿ ಹುತಾತ್ಮರಾದವರಿಗೆ ಇಂದು ಬೆಳಗ್ಗೆ  ಮಹಾರಾಷ್ಟ್ರ ಸರ್ಕಾರದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಟ್ವೀಟ್ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ.

ದಶಕವೇ ಕಳೆದರೂ ಮಾಸದ ಭೀಕರ ನೆನಪು:

ದಶಕವೇ ಕಳೆದರೂ ಭಾರತದ ನೆಲದೊಳಗೆ ನಡೆದ ಉಗ್ರರ ಅಟ್ಟಹಾಸದ ಭೀಕರತೆ ಮಾತ್ರ ಇನ್ನೂ ಕಣ್ಣ ಮುಂದೆಯೇ ಇದೆ. ಸರಿಯಾಗಿ 12 ವರ್ಷದ ಹಿಂದೆ 2008ರ ನವೆಂಬರ್​​ 26ರ ರಾತ್ರಿ ವೇಳೆಗೆ ಮುಂಬೈ ನಡುಗಿ ಹೋಗಿತ್ತು. ಮುಂಬೈನ ತಾಜ್​​​​​ ಹೋಟೆಲ್ (Terrorist attack on Taj Hotel)​ ಮೇಲೆ ನರ ರಾಕ್ಷಸರು ದಾಳಿ ಮಾಡಿದ್ದರು. 

ಇದನ್ನೂ ಓದಿ- ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ್ದರೂ ಅಕೌಂಟ್ ನಿಂದ ಪಡೆಯಬಹುದು 10 ಸಾವಿರ ರೂಪಾಯಿ..!

ಗುಂಡಿನ ಮಳೆ ಸುರಿಸಿದ್ದ 10 ಉಗ್ರರು:
ಸತತ ಮೂರು ದಿನಗಳ ಕಾಲ ಮುಂಬೈ ಮಹಾನಗರಿ ಉಗ್ರರ ಕಪಿಮುಷ್ಟಿಯಲ್ಲಿ ನಲುಗಿತ್ತು. ಲಷ್ಕರ್‌- ಎ- ತೊಯ್ಬಾದ (Pakistani Lashkar-e-Taiba terrorists) 10 ಉಗ್ರರು ಮಹಾನಗರಿಯ ಜನನಿಬಿಡ ಪ್ರದೇಶಗಳಲ್ಲಿ ಗುಂಡಿನ ಮಳೆ ಸುರಿಸಿ ಮಾರಣಹೋಮವನ್ನೇ ನಡೆಸಿದ್ದರು. 

ಸಮುದ್ರ ಮಾರ್ಗದಿಂದ ನುಸುಳಿದ್ದ ಭಯೋತ್ಪಾದಕರು:
ಸಮುದ್ರ ಮಾರ್ಗದಿಂದ ಬಂದ ಭಯೋತ್ಪಾದಕರು ಮುಂಬೈನ ತಾಜ್‌ ಹೊಟೇಲ್, ಒಬೇರಾಯ್‌ ಹೊಟೇಲ್‌, ಲಿಯೋಪೋಲ್ಡ್‌ ಕೆಫೆ, ನಾರಿಮನ್‌ ಹೌಸ್‌, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್‌ ಮೊದಲಾದ ಕಡೆ ದಾಳಿ ನಡೆಸಿದರು. ಈ ವೇಳೆ 166 ಮಂದಿಯ ಬಲಿಯಾಗಿದ್ದರು. ಅಲ್ಲದೆ ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದರು. 

58 ಜನರನ್ನು ಬಲಿ ಪಡೆದಿದ್ದ ನರ ರಾಕ್ಷಸರು:
ದಾಳಿ ವಿಚಾರ ತಿಳಿಯುತ್ತಲೇ ರಕ್ಷಣೆಗೆ ಧಾವಿಸಿದ ಪೋಲಿಸ್‌ ಅಧಿಕಾರಿಗಳಾದ ಹೇಮಂತ್‌ ಕರ್ಕರೆ, ವಿಜಯ್‌ ಸಾಲಸ್ಕರ್‌, ಅಶೋಕ್‌ ಕಾಮ್ಟೆ ಮತ್ತು ತುಕಾರಾಮ್‌ ಓಂಬ್ಳೆ ಮತ್ತು ಯೋಧ ಸಂದೀಪ್‌ ಉನ್ನಿಕೃಷ್ಣನ್‌ ಹುತಾತ್ಮರಾದರು. ಈ ದಾಳಿಯಲ್ಲಿ  ದಾಳಿ ನಡೆಸಿ 58 ಜನರನ್ನು ಬಲಿ ಪಡೆದಿದ್ದ ಅಜ್ಮಲ್‌ ಕಸಬ್‌ನನ್ನು (Ajmal kasab) 2012 ನವೆಂಬರ್‌ 21ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. 

ಇದನ್ನೂ ಓದಿ- 7th Pay Commission : ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಹೆಚ್ಚಾಗಲಿದೆ ವೇತನ

ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಕೆ:
ಮುಂಬೈ 26/11 ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಇಂದು ಶ್ರದ್ಧಾಂಜಲಿ ಸಲ್ಲಿಸಿದರು.

ವೀರರ ನೆನೆದ ಕೇಂದ್ರ ಗೃಹ ಸಚಿವ ಅಮಿತ್ ಶಾ:
ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರು ಭಯೋತ್ಪಾದಕರನ್ನು ಧೈರ್ಯದಿಂದ ಎದುರಿಸಿದ ಎಲ್ಲಾ ಭದ್ರತಾ ಸಿಬ್ಬಂದಿಗೆ ಟ್ವೀಟ್ ಮೂಲಕ ನಮನ ಸಲ್ಲಿಸಿದ್ದಾರೆ. "ಮುಂಬೈ 26/11 ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಹೃತ್ಪೂರ್ವಕ ನಮನಗಳು ಮತ್ತು ಹೇಡಿಗಳ ದಾಳಿಯಲ್ಲಿ ಭಯೋತ್ಪಾದಕರನ್ನು ಧೈರ್ಯದಿಂದ ಎದುರಿಸಿದ ಎಲ್ಲಾ ಭದ್ರತಾ ಸಿಬ್ಬಂದಿಯ ಧೈರ್ಯಕ್ಕೆ ವಂದನೆಗಳು. ನಿಮ್ಮ ಶೌರ್ಯಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ನಿಮ್ಮ ತ್ಯಾಗಕ್ಕೆ ಕೃತಜ್ಞರಾಗಿರುವ ರಾಷ್ಟ್ರ ಸದಾ ಋಣಿಯಾಗಿರುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More