Home> India
Advertisement

Video: ಸಾರ್ವಜನಿಕ ಸ್ಥಳದಲ್ಲಿ ಕಿರಿ ಸೊಸೆಯ ಮೇಲೆ ಮುಖೇಶ್‌ ಅಂಬಾನಿ ಗರಂ! ದುಃಖ ತಾಳಲಾರದೆ ಗೊಳೋ ಅಂತ ಕಣ್ಣೀರಿಟ್ಟಿದ್ದೇಕೆ ರಾಧಿಕಾ?

Radhika Merchant Mukesh Ambani Fight: ಮುಖೇಶ್‌ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅವರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಪರಸ್ಪರ ವಾಗ್ವಾದ ನಡೆಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.

Video: ಸಾರ್ವಜನಿಕ ಸ್ಥಳದಲ್ಲಿ ಕಿರಿ ಸೊಸೆಯ ಮೇಲೆ ಮುಖೇಶ್‌ ಅಂಬಾನಿ ಗರಂ! ದುಃಖ ತಾಳಲಾರದೆ ಗೊಳೋ ಅಂತ ಕಣ್ಣೀರಿಟ್ಟಿದ್ದೇಕೆ ರಾಧಿಕಾ?

Radhika Merchant Mukesh Ambani Fight: ಮುಖೇಶ್‌ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅವರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಪರಸ್ಪರ ವಾಗ್ವಾದ ನಡೆಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.

ಅಂಬಾನಿ ಕುಟುಂಬ ಸದಾ ಸುದ್ದಿಯಲ್ಲಿರುತ್ತದೆ. ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆಯಾದಾಗಿನಿಂದ ಅಂಬಾನಿ ಕುಟುಂಬ ಸಾಕಷ್ಟು ಸುದ್ದಿಯಲ್ಲಿದೆ. ಅತ್ಯಂತ ಸುಂದರವಾದ ವಿವಾಹವನ್ನು ಆಯೋಜಿಸಿದ್ದ ಅಂಬಾನಿ ಕುಟುಂಬದ ವಿಶೇಷ ದಿನಕ್ಕೆ ಇಡೀ ಬಾಲಿವುಡ್ ತಾರಾಗಣವೇ ಉಪಸ್ಥಿತರಿದ್ದರು.  ಇತ್ತೀಚೆಗೆ ಮುಂಬೈನ ತಮ್ಮ ಮನೆಯಲ್ಲಿ ಗಣೇಶ ಚತುರ್ಥಿ ಆಚರಣೆಯನ್ನು ಮುಖೇಶ್‌ ಅಂಬಾನಿ ಆಯೋಜಿಸಿದ್ದರು. ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಕಿಯಾರಾ ಅಡ್ವಾಣಿ, ಸಾರಾ ಅಲಿ ಖಾನ್, ಸಲ್ಮಾನ್ ಖಾನ್, ಅನನ್ಯಾ ಪಾಂಡೆ, ರಿತೇಶ್ ದೇಶಮುಖ್ ಮತ್ತು ಇತರರು ಅಂಬಾನಿ ಮನೆಯಲ್ಲಿ ಹಾಜರ್‌ ಆಗಿ ಗಣೇಶನ ದರ್ಶನ ಪಡೆದದ್ದು ಕಂಡುಬಂತು.

ರಾಧಿಕಾ, ಶ್ಲೋಕಾ ಮೆಹ್ತಾ, ಅನಂತ್, ಮುಖೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಇತರರು ರಾಯಲ್‌ ಲುಕ್‌ನಿಂದ ಸದಾ ಚರ್ಚೆಯಲ್ಲಿರುತ್ತಾರೆ. ಇದಕ್ಕೆ ಸಂಭಂದ ಪಟ್ಟ ಫೋಟೋಗಳು ಹಾಗೂ ವಿಡಿಯೋಗಳು ಹಾಗಾಗ ವೈರಲ್‌ ಆಗುತ್ತಿರುತ್ತದೆ. ಮುಕೇಶ್ ಅಂಬಾನಿ, ರಾಧಿಕಾ ಮರ್ಚೆಂಟ್ , ಶ್ಲೋಕಾ ಮತ್ತು ಅನಂತ್ ಇತ್ತೀಚೆಗೆ ಲಾಲ್ಬೌಚಾ ರಾಜಾ ಅವರನ್ನು ಭೇಟಿ ಮಾಡಿದ್ದರು.  ಸದ್ಯ ಈ ಸಂದರ್ಭದ ಫೋಟೋಗಳು ಹಾಗೂ ವಿಡಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. 

ಮುಕೇಶ್ ಅಂಬಾನಿ ಶ್ಲೋಕಾ ಜೊತೆ ಮುಂದೆ ನಡೆದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹಿರಿಯ ಸೊಸೆಯೊಂದಿಗೆ ಮುಂದೆ ಸಾಗುತ್ತಿದ್ದ ಮುಖೇಶ್‌ ಅಂಬಾನಿ ಸಡನ್‌ ಆಗಿ ನಿಂತು ಅನಂತ್ ಮತ್ತು ರಾಧಿಕಾ ಜೊತೆ ಮಾತನಾಡಲು ಆರಂಭಿಸುತ್ತಾರೆ. ಈ ವಿಡಿಯೋವನ್ನು ನೋಡಿದಾಗ ಮುಖೇಶ್‌, ಅನಂತ್‌ ಹಾಗೂ ಕಿರಿಯ ಸೊಸೆ ರಾಧಿಕಾ ಅವರ ಬಳಿ ಗಂಭೀರ ಮಾತುಕಥೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ. ಮುಖೇಶ್‌ ಅಂಬಾನಿ ಹಾಗೂ ರಾಧಿಕಾ ಮಧ್ಯೆ ಜಗಳವಾಗುತ್ತಿದ್ದಂತೆ ಈ ವಿಡಿಯೋದ ದೃಶ್ಯ ಗೋಚರಿಸುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ.

ಲಾಲ್‌ಬೌಚಾ ರಾಜಾ ಪಂಗಡದಿಂದ ಹೊರಡುತ್ತಿರುವಾಗ ಈ ವಿಡಯೋವನ್ನು ತೆಗೆಯಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ವೈರಲ್‌ ಆಗುತ್ತಿದ್ದು, ಅಂಬಾನಿಗಳ ನಡುವೆ ವಾದ-ವಿವಾದಗಳನ್ನು ಕಂಡಿರದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

Read More