Home> India
Advertisement

'ಎಮ್ಮೆ ಹಾಲು ಕುಡಿದು ನೌಕರಿ ಸೇರಿದ್ದೇನೆ, ಅದರ ಕಾಳಜಿವಹಿಸಿ ಋಣ ತೀರಿಸುವೆ, ರಜೆ ಕೊಡಿ'

ಎಸ್ಎಎಫ್ ನ 9ನೇ ಬಟಾಲಿಯನ್ ನಲ್ಲಿ ಕಾನ್ಸ್ಟೇಬಲ್ ಆಗಿರುವ ಕುಲದೀಪ್ ತೋಮರ್ ಅವರ ರಜೆ ಅರ್ಜಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

'ಎಮ್ಮೆ ಹಾಲು ಕುಡಿದು ನೌಕರಿ ಸೇರಿದ್ದೇನೆ, ಅದರ ಕಾಳಜಿವಹಿಸಿ ಋಣ ತೀರಿಸುವೆ, ರಜೆ ಕೊಡಿ'

ರಿವಾ: ಮಧ್ಯ ಪ್ರದೇಶದ ರೀವಾ ಜಿಲ್ಲೆಯ ಓರ್ವ ಪೋಲಿಸ್ ಪೇದೆಯ ರಜೆಗಾಗಿ ಸಲ್ಲಿಸಿರುವ ವಿಚಿತ್ರ ಅರ್ಜಿಯೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಹೌದು, ಈ ಪೇದೆ ತನ್ನ ಎಮ್ಮೆಯ ಸೇವೆ ಮಾಡಲು ತನ್ನ ಇಲಾಖೆಗೆ 6 ದಿನಗಳ ರಜೆ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ಕುರಿತು ತನ್ನ ಅರ್ಜಿಯಲ್ಲಿ ಬರೆದುಕೊಂಡಿರುವ ಪೇದೆ, 'ಎಮ್ಮೆಯ ಹಾಲು ಕುಡಿದು ನೌಕರಿ ಸೇರಿದ್ದೇನೆ, ಅದರ ಸೇವೆ ಮಾಡಿ ಋಣ ತೀರಿಸುವೆ' ಎಂದು ಬರೆದಿದ್ದಾನೆ. ಅಷ್ಟೇ ಅಲ್ಲ ಕಳೆದ ಸುಮಾರು ಆರು ತಿಂಗಳಿನಿಂದ ತನ್ನ ತಾಯಿ ಅನಾರೋಗ್ಯಪೀಡಿತರಾಗಿದ್ದಾರೆ ಎಂದೂ ಕೂಡ ಉಲ್ಲೇಖಿಸಿದ್ದಾನೆ. 

ರೀವಾ ಜಿಲ್ಲೆಯ ಎಸ್ಎಎಫ್ 9 ನೇ ಬಟಾಲಿಯನ್ ನಲ್ಲಿ ಕಾರ್ಯನಿರತ ಈ ಆರಕ್ಷಕ ಕುಲದೀಪ್ ತೋಮರ್ ತನ್ನ ಅರ್ಜಿಯಲ್ಲಿ, "ನನ್ನ ತಾಯಿಯ ಆರೋಗ್ಯ ಸ್ಥಿತಿ ಕಳೆದ ಎರಡು ತಿಂಗಳಿನಿಂದ ಬಿಗಡಾಯಿಸಿದೆ. ನನ್ನ ಮನೆಯಲ್ಲಿ ಒಂದು ಎಮ್ಮೆಯೂ ಕೂಡ ಇದೆ. ಅದನ್ನು ನಾನು ತುಂಬಾ ಪ್ರೀತಿಸುತ್ತೇನೆ, ಇತ್ತೀಚೆಗಷ್ಟೇ ಎಮ್ಮೆ ಮರಿಯೊಂದಕ್ಕೆ ಜನ್ಮ ನೀಡಿದೆ. ಆ ಮರಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ನಾನು ಇದೆ ಎಮ್ಮೆಯ ಹಾಲು ಕುಡಿದು ಪೋಲೀಸ್ ಭರ್ತಿಯ ಸಿದ್ಧತೆ ಮಾಡಿದ್ದೆ. ನನ್ನ ಜೀವನದಲ್ಲಿ ಎಮ್ಮೆಗೆ ವಿಶೇಷ ಸ್ಥಾನವಿದೆ. ಇದೆ ಎಮ್ಮೆಯ ಕಾರಣ ನಾನು ಇಂದು ಪೊಲೀಸನಾಗಿದ್ದೇನೆ" ಎಂದಿದ್ದಾರೆ.

"ನನ್ನ ಒಳ್ಳೆಯ ಹಾಗೂ ಕೆಟ್ಟ ಕಾಲದಲ್ಲಿ ಎಮ್ಮೆ ನನಗೆ ತುಂಬಾ ಸಾಥ್ ನೀಡಿದೆ. ಹೀಗಾಗಿ ಇಂದು ಎಮ್ಮೆಯ ಸಂಕಷ್ಟದ ಪರಿಸ್ಥಿತಿಯಲ್ಲಿ ನಾನು ಎಮ್ಮೆಯ ಜೊತೆಗಿದ್ದು, ಅದರ ಕಾಳಜಿ ವಹಿಸಬೇಕು. ಹೀಗಾಗಿ ಎಮ್ಮೆಯ ಚಿಕಿತ್ಸೆ ಹಾಗೂ ಅದರ ಕಾಳಜಿ ವಹಿಸಲು ನನಗೆ ಆರು ದಿನಗಳ ರಜೆ ನೀಡಬೇಕು ಎಂದು ಕೋರುತ್ತೇನೆ" ಎಂದು ಕಾನ್ಸ್ಟೇಬಲ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

 ಇನ್ನೊಂದೆಡೆ ಕಾನ್ಸ್ಟೇಬಲ್ ಬರೆದಿರುವ ಈ ರಜಾ ಅರ್ಜಿ ವೈರಲ್ ಆಗುತ್ತಿದ್ದಂತೆ ವರಿಷ್ಠ ಅಧಿಕಾರಿಗಳು ಕಾನ್ಸ್ಟೇಬಲ್ ಅವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಮಾಧ್ಯಮದವರು ಕಾನ್ಸ್ಟೇಬಲ್ ಅವರನ್ನು ಸಂಪರ್ಕಿಸಿದಾಗ, ನಾನು ಈ ರೀತಿಯ ಯಾವುದೇ ರಜಾ ಅರ್ಜಿ ಬರೆದಿಲ್ಲ ಎಂದು ಅವರು ಹೇಳಿದ್ದಾರೆ. ಈ ಅರ್ಜಿಯನ್ನು ತಾನು ಬರೆದಿಲ್ಲ ಎಂದು ಸ್ಪಷ್ಟಪದ್ಸಿರುವ ಕಾನ್ಸ್ಟೇಬಲ್, ನನ್ನ ಹೆಸರನ್ನು ಬಳಸಿ ಬೇರೊಬ್ಬರು ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದು, ಸದ್ಯ ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ತಪಾಸಣೆ ಮುಂದುವರೆಸಿದ್ದಾರೆ.

Read More