Home> India
Advertisement

Motor Vehicle Act 1989 Amendment: ವಾಹನ ಚಾಲಕರಿಗೊಂದು Big News, ಸಿಗಲಿದೆ 2 ಲಕ್ಷ ರೂಪಾಯಿ, ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

Motor Vehicle Act 1989 Amendment: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಹಿಟ್ ಮತ್ತು ರನ್ ಅಪಘಾತಗಳಲ್ಲಿ (Hit And Run Motor Accidents) ಬಲಿಯಾದವರಿಗೆ ಪರಿಹಾರವನ್ನು 12500 ರಿಂದ 50000 ರೂ.ಗೆ ಹೆಚ್ಚಿಸಿದೆ.

Motor Vehicle Act 1989 Amendment: ವಾಹನ ಚಾಲಕರಿಗೊಂದು Big News, ಸಿಗಲಿದೆ 2 ಲಕ್ಷ ರೂಪಾಯಿ, ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

Motor Vehicle Act 1989 Amendment: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಹಿಟ್ ಮತ್ತು ರನ್ ಅಪಘಾತಗಳಲ್ಲಿ (Hit And Run Motor Accidents) ಬಲಿಯಾದವರಿಗೆ ಪರಿಹಾರವನ್ನು 12500 ರಿಂದ 50000 ರೂ.ಗೆ ಹೆಚ್ಚಿಸಿದೆ. ಇದಲ್ಲದೇ ರಸ್ತೆ ಅಪಘಾತದ ಸಾವಿನ ಪರಿಹಾರವನ್ನು 25000 ರೂ.ಗಳಿಂದ 200000 ಲಕ್ಷ ರೂ.ಗಳಿಗೆ ಹೆಚ್ಚಿಸಲು (Motor Vehicle Accident Fund) ನಿರ್ಧರಿಸಿದೆ. ಈ ನಿಯಮವು ಏಪ್ರಿಲ್ 1, 2022 ರಿಂದ ಜಾರಿಗೆ ಬರುವಂತೆ ಭಾರತದ ಎಲ್ಲಾ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಅನ್ವಯಿಸುತ್ತದೆ. ಇದಲ್ಲದೇ, ಅಪಘಾತಕ್ಕೀಡಾದವರಿಗೆ ಪರಿಹಾರ ನೀಡಲು ಮೋಟಾರು ವಾಹನ ಅಪಘಾತ ನಿಧಿಯನ್ನು ಸಹ ರಚಿಸಲಾಗುವುದು. ಈ ಮಾಹಿತಿಯನ್ನು MoRTH ಸಚಿವಾಲಯ ನೀಡಿದೆ.

ಮತ್ತೊಂದು ನಿಯಮದಲ್ಲಿ ಬದಲಾವಣೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈಗ 'ರಿಜಿಡ್' ವಾಹನಗಳಲ್ಲಿ ಮೂರು ಡೆಕ್‌ಗಳು ಮತ್ತು ದ್ವಿಚಕ್ರ ವಾಹನಗಳನ್ನು ಸಾಗಿಸಲು ಟ್ರೈಲರ್‌ಗಳನ್ನು ಅನುಮತಿಸಿದೆ. ಟ್ರೈಲರ್ನ ಕ್ಯಾರೇಜ್ ಭಾಗವು ಚಾಲಕನ ಕ್ಯಾಬಿನ್ ಮೇಲೆ ಇರಬಾರದು. ಭಾನುವಾರ ಅಧಿಕೃತ ಹೇಳಿಕೆಯಲ್ಲಿ ಸಚಿವಾಲಯ ಈ ಮಾಹಿತಿ ನೀಡಿದೆ.

ಇದನ್ನೂ ಓದಿ-ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧವನ್ನು ವಿಸ್ತರಿಸಿದ ಭಾರತ

ಇದು ಶೇ.40 ರಿಂದ ಶೇ.50 ರಷ್ಟು ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಫೆಬ್ರವರಿ 25 ರಂದು ಅಧಿಸೂಚನೆಯನ್ನು ಹೊರಡಿಸಿದೆ, ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989 ಕ್ಕೆ (Motor Vehicle Act 1989) ತಿದ್ದುಪಡಿ ಮಾಡಿ, ರಿಜಿಡ್ ವೀಲ್ ಮತ್ತು ಟ್ರೇಲರ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಸಾಗಿಸಲು ಗರಿಷ್ಠ ಮೂರು ಡೆಕ್‌ಗಳನ್ನು ಅನುಮತಿಸಲಾಗಿದೆ.

ಇದನ್ನೂ ಓದಿ-PM Kisan Yojana : ಪಿಎಂ ಕಿಸಾನ್ ರೈತರೆ ಈಗಲೇ ಈ ಮಾಡಿ ಕೆಲಸ : ಇಲ್ಲದಿದ್ದರೆ ಬರುವುದಿಲ್ಲ 11ನೇ ಕಂತಿನ ಹಣ!

ಪ್ರತ್ಯೇಕ ಅಧಿಸೂಚನೆಯಲ್ಲಿ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆಕ್ಟ್ 2016 (BIS) ನಿಯಮಗಳ ಅಡಿಯಲ್ಲಿ ಹಣವನ್ನು ಸಾಗಿಸುವ ವಾಹನಗಳು (ನಗದು ವ್ಯಾನ್‌ಗಳು) ನಿಯಮಗಳನ್ನು ಸೂಚಿಸುವವರೆಗೆ ವಾಹನ ಉದ್ಯಮದ ಮಾನದಂಡ -163:2020 ರ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಸಚಿವಾಲಯ ಹೇಳಿದೆ. ಇದು ವಿಶೇಷ ಉದ್ದೇಶದ ವಾಹನವಾಗಿ ಕ್ಯಾಶ್ ವ್ಯಾನ್‌ನ ತಯಾರಿಕೆ, ಟೈರ್ ಕ್ಲಿಯರೆನ್ಸ್ ಪರೀಕ್ಷೆ ಮತ್ತು ನೋಂದಣಿಗೆ ಸಹಾಯ ಮಾಡಲಿದೆ.

ಇದನ್ನೂ ಓದಿ-ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟ ಕಂಡು ನೋವಾಗಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More