Home> India
Advertisement

ಮದರಸಾಗಳಲ್ಲಿ ಹೆಚ್ಚಾಗುತ್ತಿದೆ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ! ಕಾರಣ ಇಲ್ಲಿದೆ

ಮದರಸಾ ಬೋರ್ಡ್ ಅಧ್ಯಕ್ಷರು ಹೇಳುವ ಪ್ರಕಾರ ಮದರಸಾಗಳಲ್ಲಿ ದಾಖಲಾಗುತ್ತಿರುವ ಹಿಂದೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಕಂಡು ಬಂದಿದೆ ಎನ್ನುತ್ತಾರೆ.

ಮದರಸಾಗಳಲ್ಲಿ ಹೆಚ್ಚಾಗುತ್ತಿದೆ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ! ಕಾರಣ ಇಲ್ಲಿದೆ

ಕೊಲ್ಕತಾ:ಪಶ್ಚಿಮ ಬಂಗಾಳದ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕುರಿತು ನಿಬ್ಬೇರಗಾಗಿಸುವ ಮಾಹಿತಿಯೊಂದು ಹೊರಬಂದಿದೆ. ವರದಿಗಳ ಪ್ರಕಾರ ಪಶ್ಚಿಮ ಬಂಗಾಳದ ಮದರ್ಶಾಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಪಶ್ಚಿಮ ಬಂಗಾಳದ ಮದರಸಾ ಬೋರ್ಡ್ ಅಧ್ಯಕ್ಷ ಅಬು ತಾಹೇರ್ ಕಮರುದ್ದೀನ್, ಕಳೆದ ವರ್ಷ 10ನೇ ತರಗತಿಯ ಮದರಸಾ ಬೋರ್ಡ್ ಎಕ್ಸಾಮ್ ನಲ್ಲಿ ಶೇ.11.9ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದರೆ, ಈ ಬಾರಿ ಶೇ.14.24ರಷ್ಟು ವಿದ್ಯಾರ್ಥಿಗಳು ಬೋರ್ಡ್ ಎಕ್ಸಾಮ್ ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಬಾರಿ ಮದರಸಾಗಳಲ್ಲಿ ಅಡ್ಮಿಶನ್ ಪಡೆಯುವ ಹಿಂದೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಕೂಡ ಗಣನೀಯ ಏರಿಕೆಯಾಗಿದೆ ಎಂದು ಮದರಸಾ ಬೋರ್ಡ್ ಅಧ್ಯಕ್ಷರು ಹೇಳಿದ್ದಾರೆ.

ಕಳೆದ ಬಾರಿ ಮಾದರಸ ಬೋರ್ಡ್ ಎಕ್ಸಾಮ್ ಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳ ಸಂಖ್ಯೆ ಶೇ.12.77ರಷ್ಟಿತ್ತು. ಈ ಬಾರಿ ಈ ಸಂಖ್ಯೆಯಲ್ಲಿ ಏರಿಕೆಯಾಗಿ ಶೇ.18ಕ್ಕೆ ಬಂದು ತಲುಪಿದೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ತಾಹೇರ್ ಕಮರುದ್ದೀನ್, ಈ ಮದರಸಾ ಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇವಲ ವ್ಯಾಸಂಗ ಮಾತ್ರ ಮಾಡದೆ ಉತ್ತಮ ಫಲಿತಾಂಶ ಕೂಡ ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಮದರಸಾಗಳಲ್ಲಿ ಉತ್ತಮ ಸೌಕರ್ಯ ಹಾಗೂ ಸ್ಕಾಲರ್ ಶಿಪ್ ನೀಡಲಾಗುತ್ತಿರುವ ಕಾರಣ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಇವು ತಮ್ಮತ್ತ ಸೆಳೆಯುತ್ತಿವೆ ಎನ್ನಲಾಗುತ್ತಿದೆ. ಈ ಮದರಸಾಗಳಲ್ಲಿ ವಿಷಯಕ್ಕೆ ಸಂಬಂಧಿಸಿದ ಶಿಕ್ಷಕರು ಇರುವ ಕಾರಣ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸೀಟುಗಳ ಕೊರತೆ ಇರುವ ಕಾರಣ ಪೋಷಕರು ಮದರಸಾಗಳಲ್ಲಿ ತಮ್ಮ ಮಕ್ಕಳ ಅಡ್ಮಿಶನ್ ಮಾಡಿಸಲು ಮುಂದಾಗುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Read More