Home> India
Advertisement

ಆಗಸ್ಟ್ 2020 ವರೆಗೆ ನೌಕರರ ಭವಿಷ್ಯನಿಧಿಗೆ ನೌಕರರ ಬದಲಾಗಿ ಮೋದಿ ಸರ್ಕಾರ ನೀಡಲಿದೆ ಕೊಡುಗೆ

ಆಗಸ್ಟ್ 2020 ರವರೆಗೆ ನೌಕರರ ಕಂಪನಿ ಮತ್ತು ನೌಕರರ ಪರವಾಗಿ ಸರ್ಕಾರ ಈಗ ಶೇ 12 ರಷ್ಟು + ಶೇ.12 ರಷ್ಟು ಇಪಿಎಫ್‌ಒ ಕೊಡುಗೆಯನ್ನು ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಆಗಸ್ಟ್ 2020 ವರೆಗೆ ನೌಕರರ ಭವಿಷ್ಯನಿಧಿಗೆ ನೌಕರರ ಬದಲಾಗಿ ಮೋದಿ ಸರ್ಕಾರ ನೀಡಲಿದೆ ಕೊಡುಗೆ

ನವದೆಹಲಿ: ಆಗಸ್ಟ್ 2020 ರವರೆಗೆ ನೌಕರರ ಕಂಪನಿ ಮತ್ತು ನೌಕರರ ಪರವಾಗಿ ಸರ್ಕಾರ ಈಗ ಶೇ 12 ರಷ್ಟು + ಶೇ.12 ರಷ್ಟು ಇಪಿಎಫ್‌ಒ ಕೊಡುಗೆಯನ್ನು ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ 75 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಸಂಸ್ಥೆಗಳು ಪ್ರಯೋಜನ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೌಕರರು ಹಾಗೂ ಕಂಪನಿಗಳ ಪರವಾಗಿ ಸರ್ಕಾರ ಈ ಕೊಡುಗೆಯನ್ನು ನೀಡಿದ್ದು, ಮತ್ತೆ ಮೂರು ತಿಂಗಳ ಅವಧಿಗೆ ಅಂದರೆ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳವರೆಗೆ ಇದನ್ನು ವಿಸ್ತರಿಸಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಆದರೆ ಇದರೊಂದಿಗೆ ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ. 

ಈ ಬಾರಿ ಸರ್ಕಾರದ ಸರ್ಕಾರದ ಈ ಘೋಷಣೆ ಲಾಭ 100 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಮತ್ತು ಶೇ.90 ರಷ್ಟು ನೌಕರರು 15000ಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿರುವ ಮಾತ್ರ ಸಿಗಲಿದೆ. ಅಂದರೆ, 15 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗೆ ಇದರ ಲಾಭ ದೊರೆಯುವುದಿಲ್ಲ.ಇದಲ್ಲದೆ ನೌಕರರ  ಹಾಗೂ ಕಂಪನಿಗಳ ಭವಿಷ್ಯ ನಿಧಿ ಕೊಡುಗೆಯನ್ನು ಶೇ.12+ಶೇ.12 ರಿಂದ ಶೇ.10 + ಶೇ.10 ಕ್ಕೆ ಇಳಿಕೆ ಮಾಡಲಾಗಿದೆ . ಆದರೆ, PSU ಗಳಲ್ಲಿ ಮಾತ್ರ ಶೇ.12 ರಷ್ಟರ ಯಥಾಸ್ಥಿತಿ ಮುಂದುವರೆಸಲಾಗಿದೆ. 

ಸರ್ಕಾರದ ಈ ನಿರ್ಣಯದಿಂದ ಸುಮಾರು 80 ಲಕ್ಷ ಉದ್ಯೋಗಿಗಳಿಗೆ ನೇರ ಲಾಭ ಸಿಗಲಿದ್ದು, ಇದಕ್ಕಾಗಿ 25,00 ಕೋಟಿ ರೂ. ಮೀಸಲಿಡಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ. ಇದಕ್ಕೂ ಮೊದಲು, ಕರೋನಾ ಬಿಕ್ಕಟ್ಟಿನ ನಡುವೆ ಸೊರಗಿದ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 20 ಲಕ್ಷ ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ಘೋಷಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಈ ಪ್ಯಾಕೇಜ್ ಬಗ್ಗೆ ವಿಸ್ತೃತ  ಮಾಹಿತಿಯನ್ನು ನೀಡಿದ್ದಾರೆ. 

Read More