Home> India
Advertisement

Spouse Pensionಗಾಗಿ ಜಂಟಿ ಖಾತೆ ಅನಿವಾರ್ಯವಲ್ಲ, ನಿಯಮ ಸಡಿಲಿಸಿದ Modi Government

Modi Govt Relief - ಸಂಗಾತಿಯ ಪಿಂಚಣಿಗೆ (Spouse Pension) ಜಂಟಿ ಬ್ಯಾಂಕ್ ಖಾತೆ (Joint Account) ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh), ಸೇವಾನಿವೃತ್ತ ಮತ್ತು ಪಿಂಚಣಿ ನೌಕರರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರ ಜೀವನವನ್ನು ಸುಲಭಗೊಳಿಸಲು ನರೇಂದ್ರ ಮೋದಿ ಸರ್ಕಾರ (PM Narendra Modi Government) ಯಾವಾಗಲೂ ಕೆಲಸ ಮಾಡಿದೆ. ಈ ವರ್ಗದ ಜನರ ಅನುಭವ ಮತ್ತು ಸುದೀರ್ಘ ಸೇವಾ ಜೀವನ ಪರಿಗಣಿಸಿದರೆ ಅವರು ದೇಶಕ್ಕೆ ಅಮೂಲ್ಯರು ಎಂದು ಸಿಂಗ್ ಬಣ್ಣಿಸಿದ್ದಾರೆ. 

Spouse Pensionಗಾಗಿ ಜಂಟಿ ಖಾತೆ ಅನಿವಾರ್ಯವಲ್ಲ, ನಿಯಮ ಸಡಿಲಿಸಿದ Modi Government

ನವದೆಹಲಿ :  Modi Govt Relief - ಸಂಗಾತಿಯ ಪಿಂಚಣಿಗೆ  (Spouse Pension) ಜಂಟಿ ಬ್ಯಾಂಕ್ ಖಾತೆ (Joint Account) ಕಡ್ಡಾಯವಲ್ಲ ಎಂದು ಸರ್ಕಾರ ಶನಿವಾರ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್(Jitendra Singh), ನಿವೃತ್ತ ಮತ್ತು ಪಿಂಚಣಿ ನೌಕರರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರ ಜೀವನವನ್ನು ಸುಲಭಗೊಳಿಸಲು ನರೇಂದ್ರ ಮೋದಿ ಸರ್ಕಾರ (PM Narendra Modi Government) ಯಾವಾಗಲೂ ಕೆಲಸ ಮಾಡಿದೆ. ಅಂತಹವರ ಅನುಭವ ಮತ್ತು ಸುದೀರ್ಘ ಸೇವಾ ಜೀವನ ಪರಿಗಣಿಸಿ ಅವರು ದೇಶಕ್ಕೆ ಅಮೂಲ್ಯರು ಎಂದು ಬಣ್ಣಿಸಿದ್ದಾರೆ.

ಈ ಕುರಿತಾದ ಒಂದು ಅಧಿಕೃತ ಹೇಳಿಕೆಯ ಪ್ರಕಾರ, ನಿವೃತ್ತಿ ಹೊಂದುತ್ತಿರುವ ಸರ್ಕಾರಿ ನೌಕರನು ಅವನ/ಅವಳ ಸಂಗಾತಿಯೊಂದಿಗೆ ಯಾವುದೇ ಕಾರಣಕ್ಕಾಗಿ ತನ್ನ ವ್ಯಾಪ್ತಿಯನ್ನು ಮೀರಿ ಜಂಟಿ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ ಎಂದ ಸಂದರ್ಭಗಳಲ್ಲಿ ಕಚೇರಿಯ ಮುಖ್ಯಸ್ಥರು ಈ ಅಗತ್ಯ ನಿಯಮದಲ್ಲಿ ಸಡಿಲಿಕೆ ನೀಡಬಹುದು ಎನ್ನಲಾಗಿದೆ. 

ಇದನ್ನೂ ಓದಿ-Good News - ಶೀಘ್ರದಲ್ಲಿಯೇ ಈ ಸರ್ಕಾರಿ ನೌಕರರ ಖಾತೆ ಸೇರಲಿದೆ 4 ತಿಂಗಳ DA Arrears

ಕುಟುಂಬ ಪಿಂಚಣಿ ಪಡೆಯಲು ಪತಿ (ಕುಟುಂಬ ಪಿಂಚಣಿದಾರರು) ಅಸ್ತಿತ್ವದಲ್ಲಿರುವ ಜಂಟಿ ಬ್ಯಾಂಕ್ ಖಾತೆಯನ್ನು ಆರಿಸಿಕೊಂಡರೆ ಹೊಸ ಖಾತೆಯನ್ನು ತೆರೆಯಲು ಬ್ಯಾಂಕುಗಳು ಒತ್ತಾಯಿಸಬಾರದು ಎಂದು ಕೇಂದ್ರ ಸರ್ಕಾರವು ಎಲ್ಲಾ ಪಿಂಚಣಿ ಪಾವತಿಸುವ ಬ್ಯಾಂಕುಗಳಿಗೆ ಸಲಹೆ ನೀಡಿದೆ.

ಇದನ್ನೂ ಓದಿ-ಹೆಚ್ಚಾಗಲಿದೆಯಾ ಸರ್ಕಾರಿ ನೌಕರರ ಫಿಟ್ಮೆಂಟ್ ಫ್ಯಾಕ್ಟರ್? ಕನಿಷ್ಠ ವೇತನ ರೂ 26,000

ಆದರೆ,  ಸಂಗಾತಿಯೊಂದಿಗೆ ಜಂಟಿ ಬ್ಯಾಂಕ್ ಖಾತೆಯನ್ನು ಹೊಂದಲು ಅಪೇಕ್ಷಣೀಯವಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಹೇಳಿಕೆ ತಿಳಿಸಲಾಗಿದೆ. ಪಿಂಚಣಿದಾರರ ಇಚ್ಛೆಯ ಪ್ರಕಾರ ಈ ಖಾತೆಗಳನ್ನು "ಈ ಹಿಂದೆ ಇರುವವರ ಅಥವಾ ಬದುಕುಳಿದವರು" ಅಥವಾ "ಒಂದೋ ಅಥವಾ ಬದುಕುಳಿದವರ" ಆಧಾರದ ಮೇಲೆ ಕಾರ್ಯನಿರ್ವಹಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ. 

ಇದನ್ನೂ ಓದಿ-EPFO Big Update: ಇನ್ಮುಂದೆ ಎಷ್ಟೇ ನೌಕರಿ ಬದಲಿಸಿದರೂ ಒಂದೇ UAN ಸಂಖ್ಯೆ ಮತ್ತು ಒಂದೇ EPFO ಖಾತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More