Home> India
Advertisement

Lockdown 5.0 ಕುರಿತಾದ ಎಲ್ಲ ವರದಿಗಳನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವಾಲಯ

Lockdown 5.0 ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಕೇವಲ ವದಂತಿಗಳಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಲಾಕ್ ಡೌನ್ 4 ಅವಧಿ ಮೇ 31ರಂದು ಅಂತ್ಯಗೊಳ್ಳಲಿದೆ.

Lockdown 5.0 ಕುರಿತಾದ ಎಲ್ಲ ವರದಿಗಳನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಮೇ 31ರ ಬಳಿಕ ಕೊರೊನಾ ವೈರಸ್ ಸೋಂಕನ್ನು ತಡೆಯಲು ವಿಧಿಸಲಾಗಿರುವ ಲಾಕ್ ಡೌನ್ ಜಾರಿಯಲ್ಲಿರಲಿದೆಯೇ? ಈ ಕುರಿತಂತೆ ಹಲವು ವದಂತಿಗಳು ಪಸರಿಸುತ್ತಿವೆ. ಈ ನಡುವೆಯೇ ಕೇಂದ್ರ ಸರ್ಕಾರ ಲಾಕ್ ಡೌನ್ 5.0 ಕುರಿತಂತೆ ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ವರದಿಯನ್ನು ತಿರಸ್ಕರಿಸಿದೆ.

ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ವರದಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಇದೆ ತಿಂಗಳ ಕೊನೆಯ ಭಾನುವಾರ ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಲಾಕ್ ಡೌನ್ 5 ರ ಕುರಿತು ಘೋಷಣೆ ಮಾಡಲಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಗೃಹ ಇಲಾಖೆಯ ಮೂಲಗಳ ವತಿಯಿಂದ ಇದನ್ನು ದೃಢಪಡಿಸಲಾಗಿದೆ ಎಂದು ಹೇಳಲಾಗಿತ್ತು. ಈ ವರದಿಯನ್ನು ತಿರಸ್ಕರಿಸಿರುವ ಕೇಂದ್ರ ಗೃಹ ಇಲಾಖೆ, ಈ ವರದಿಯಲ್ಲಿ ಮಂಡಿಸಲಾಗಿರುವ ಎಲ್ಲ ಮಾಹಿತಿ ಕೇವಲ ವದಂತಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ದೇಶಾದ್ಯಂತ ಕಳೆದ 64 ದಿನಗಳಿಂದ ಲಾಕ್ ಡೌನ್ ಘೋಷಿಸಲಾಗಿದ್ದು, ಕೊರೊನಾ ವೈರಸ್ ಸೋಂಕಿನ ವಿರುದ್ಧ ಭಾರಿ ಹೋರಾಟವನ್ನೇ ನಡೆಸಲಾಗುತ್ತಿದೆ. ಆದರೆ, ಲಾಕ್ ಡೌನ್ 4 ರ ನಿಯಮಗಳಲ್ಲಿ ಹಲವಾರು ರೀತಿಯ ಸಡಿಲಿಕೆಯನ್ನು ನೀಡಲಾಗಿದೆ. ಲಾಕ್ ಡೌನ್ 4.0 ಅವಧಿ ಮೇ 31 ರಂದು ಮುಕ್ತಾಯವಾಗಲಿದೆ.

ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ  151767ಕ್ಕೆ ತಲುಪಿದೆ. ಇದರಲ್ಲೂ ಸುಮಾರು 64425 ಜನರು ಸಂಪೂರ್ಣ ಗುಣಮುಖರಾಗಿ ತಮ್ಮ ತಮ್ಮ ಮನೆಗೆ ತಲುಪಿದ್ದಾರೆ. ಇದೇವೇಳೆ ಸುಮಾರು 4337 ಜನರು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ.

Read More