Home> India
Advertisement

ನವಜೋತ್ ಸಿಂಗ್ ಸಿಧುಗೆ ಸಾಮಾನ್ಯ ಭಕ್ತನಾಗಿ ಕರ್ತಾರ್‌ಪುರಗೆ ಭೇಟಿ ನೀಡಲು ಅವಕಾಶ

  ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ಕಾರ್ಯದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಪಂಜಾಬ್ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಮೂರನೇ ಪತ್ರವನ್ನು ಕಳುಹಿಸಿದ ಕೆಲವೇ ಗಂಟೆಗಳ ನಂತರ, ವಿದೇಶಾಂಗ ಸಚಿವಾಲಯ ಇಂದು ಅವರಿಗೆ ಸಾಮಾನ್ಯ ಭಕ್ತನಾಗಿ ಡೇರಾ ಬಾಬಾ ನಾನಕ್ ದೇಗುಲಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

 ನವಜೋತ್ ಸಿಂಗ್ ಸಿಧುಗೆ ಸಾಮಾನ್ಯ ಭಕ್ತನಾಗಿ ಕರ್ತಾರ್‌ಪುರಗೆ ಭೇಟಿ ನೀಡಲು ಅವಕಾಶ

ನವದೆಹಲಿ:  ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ಕಾರ್ಯದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಪಂಜಾಬ್ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಮೂರನೇ ಪತ್ರವನ್ನು ಕಳುಹಿಸಿದ ಕೆಲವೇ ಗಂಟೆಗಳ ನಂತರ, ವಿದೇಶಾಂಗ ಸಚಿವಾಲಯ ಇಂದು ಅವರಿಗೆ ಸಾಮಾನ್ಯ ಭಕ್ತನಾಗಿ ಡೇರಾ ಬಾಬಾ ನಾನಕ್ ದೇಗುಲಕ್ಕೆ ಭೇಟಿ ನೀಡಲು ಅವಕಾಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಮಾತನಾಡಿ 'ಅವರು ಏನು ಬೇಕಾದರೂ ಮಾಡಬಹುದು. ಇದು ಒಂದು ದೊಡ್ಡ ಸಂದರ್ಭ ಎಂದು ನಾನು ಈಗಾಗಲೇ ಹೇಳಿದ್ದೇನೆ ಮತ್ತು ಕರ್ತಾರ್‌ಪುರಕ್ಕೆ ಹೋಗುವ ವೈಯಕ್ತಿಕ ಪ್ರಯಾಣಿಕರ ಯೋಜನೆಗಳ ಬಗ್ಗೆ ನಾವು ಗಮನಹರಿಸಲು ಸಾಧ್ಯವಿಲ್ಲ. ಈ ವೇದಿಕೆಯಲ್ಲಿ ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ' ಎಂದು ಅವರು ಹೇಳಿದರು.

ಪಾಕಿಸ್ತಾನದ ಅಧಿಕಾರಿಗಳನ್ನು ಉಲ್ಲೇಖಿಸಿ ಅವರು ಈಗಾಗಲೇ  ಸಿಧು ಅವರಿಗೆ ಪ್ರವಾಸ ಮಾಡಲು ವೀಸಾವನ್ನು ಒದಗಿಸಿದ್ದಾರೆ ಎಂದು ಹೇಳಿದ್ದಾರೆ. 'ಬಾಬಾ ಗುರುನಾನಕ್ ಅವರ ಪವಿತ್ರ ದೇಗುಲಕ್ಕೆ ಭೇಟಿ ನೀಡಲು ಪಾಕಿಸ್ತಾನವು ನವಜೋತ್ ಸಿಂಗ್ ಸಿಧು ಅವರಿಗೆ ವೀಸಾ ನೀಡಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಗುರುದಾಸ್‌ಪುರದ ಡೇರಾ ಬಾಬಾ ನಾನಕ್ ದೇಗುಲವನ್ನು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‌ನೊಂದಿಗೆ ಜೋಡಿಸುವ ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಕಾರ್ಯಕ್ರಮಗಳು ಶನಿವಾರ ಗಡಿಯ ಎರಡೂ ಬದಿಗಳಲ್ಲಿ ನಡೆಯಲಿವೆ. ಕಾರಿಡಾರ್ ಅನ್ನು ಭಾರತದ ಕಡೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದರೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅದನ್ನು ಇನ್ನೊಂದು ತುದಿಯಲ್ಲಿ ಮುಕ್ತವಾಗಿ ಘೋಷಿಸಲಿದ್ದಾರೆ.

ಸಿಧು ಅವರು ನವೆಂಬರ್ 9 ರ ಕಾರ್ಯಕ್ರಮಕ್ಕೆ ಹಾಜರಾಗಲು ಅನುಮತಿ ಕೋರಿದ್ದರು, 1980 ರ ದಶಕದಲ್ಲಿ ಕ್ರಿಕೆಟನಲ್ಲಿ ಅವರ ಸಮಕಾಲೀನರಾಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

Read More