Home> India
Advertisement

ಉ.ಪ್ರದೇಶದ 'ಹತ್ಯಾಚಾರ'ದ ಘಟನೆ: ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಮಾಯಾವತಿ ಆಗ್ರಹ

ಹತ್ರಾಸ್ ಮತ್ತು ಬಲರಾಂಪುರ್ ಜಿಲ್ಲೆಗಳಲ್ಲಿ ಇಬ್ಬರು ಮಹಿಳೆಯರು ಅತ್ಯಾಚಾರದಿಂದ ಬಲಿಯಾಗಿರುವ ವಿಚಾರವಾಗಿ ಬಿಎಸ್ಪಿ ನಾಯಕಿ ಮಾಯಾವತಿ ಗುರುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬದಲಿಸಬೇಕೆಂದು ಅಥವಾ ಉತ್ತರಪ್ರದೇಶದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನು ಹೇರಬೇಕೆಂದು ಒತ್ತಾಯಿಸಿದ್ದಾರೆ.

ಉ.ಪ್ರದೇಶದ 'ಹತ್ಯಾಚಾರ'ದ ಘಟನೆ: ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಮಾಯಾವತಿ ಆಗ್ರಹ

ನವದೆಹಲಿ: ಹತ್ರಾಸ್ ಮತ್ತು ಬಲರಾಂಪುರ್ ಜಿಲ್ಲೆಗಳಲ್ಲಿ ಇಬ್ಬರು ಮಹಿಳೆಯರು ಅತ್ಯಾಚಾರದಿಂದ ಬಲಿಯಾಗಿರುವ ವಿಚಾರವಾಗಿ ಬಿಎಸ್ಪಿ ನಾಯಕಿ ಮಾಯಾವತಿ ಗುರುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬದಲಿಸಬೇಕೆಂದು ಅಥವಾ ಉತ್ತರಪ್ರದೇಶದಲ್ಲಿ ರಾಷ್ಟ್ರಪತಿಗಳ ಆಡಳಿತವನ್ನು ಹೇರಬೇಕೆಂದು ಒತ್ತಾಯಿಸಿದ್ದಾರೆ.

ಹತ್ರಾಸ್ ಮತ್ತು ಬಲರಾಂಪುರ್ ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರ ಸಾವುಗಳನ್ನು ಉಲ್ಲೇಖಿಸಿದ ಮಾಯಾವತಿ, ಈ ಘಟನೆಗಳು ದೆಹಲಿಯಲ್ಲಿ 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ನೆನಪಿಸುತ್ತವೆ.

ಎರಡು ವಾರದ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಉ.ಪ್ರದೇಶದ ಮಹಿಳೆ ಸಾವು

ಲಕ್ನೋದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಾಯಾವತಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರ ಮೇಲಿನ ಅಪರಾಧಗಳ ಪ್ರವಾಹದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಯೋಗಿ ಆದಿತ್ಯನಾಥ್ ಅವರನ್ನು ಕೆಲವು 'ಕಾಬಿಲ್' (ಸಮರ್ಥ) ವ್ಯಕ್ತಿಯೊಂದಿಗೆ ಬದಲಾಯಿಸಬೇಕು ಅಥವಾ ರಾಷ್ಟ್ರಪತಿ ಆಡಳಿತವನ್ನು ರಾಜ್ಯದಲ್ಲಿ ಹೇರಬೇಕು'ಎಂದು ಆಗ್ರಹಿಸಿದರು.

"ನೀವು ಮಹಿಳೆಯ ಗರ್ಭದಿಂದ ಹುಟ್ಟಿದ್ದೀರಿ ಎಂದು ನಾನು ಯೋಗಿ ಆದಿತ್ಯನಾಥನಿಗೆ ಹೇಳಲು ಬಯಸುತ್ತೇನೆ. ನೀವು ಸಹೋದರಿಯರನ್ನು ಮತ್ತು ಇತರರ ಹೆಣ್ಣುಮಕ್ಕಳನ್ನು ನಿಮ್ಮವರೇ ಎಂದು ಪರಿಗಣಿಸಬೇಕು. ಅವರನ್ನು ರಕ್ಷಿಸಲು ನಿಮಗೆ ಸಾಧ್ಯವಾಗದಿದ್ದರೆ ನೀವು ರಾಜೀನಾಮೆ ನೀಡಬೇಕು" ಎಂದು ಹೇಳಿದರು.

"ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ ಮಠದಲ್ಲಿ ತಮ್ಮ ಮೂಲ ಸ್ಥಳದಲ್ಲಿ ಕುಳಿತುಕೊಂಡರೆ ಉತ್ತಮ ಎಂದು ನಾನು ಸರ್ಕಾರಕ್ಕೆ ಹೇಳಲು ಬಯಸುತ್ತೇನೆ. ಅವರಿಗೆ ಗೋರಖ್‌ಪುರ ಮಠ ಇಷ್ಟವಾಗದಿದ್ದರೆ, ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ನಿರ್ಮಿಸುವ ಕೆಲಸವನ್ನು ಅವರಿಗೆ ಹಸ್ತಾಂತರಿಸಬೇಕು' ಎಂದು ಅವರು ತಿಳಿಸಿದರು.

Read More