Home> India
Advertisement

ಮೇನಕಾ ಗಾಂಧಿ 'ಕರ್ನಾಲ್', ವರುಣ್ ಗಾಂಧಿ 'ಪಿಲಿಭಿತ್' ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ!

ಬಿಹಾರದ ನವಾಡಾ ಕ್ಷೇತ್ರ ಬಿಜೆಪಿಯ ಮೈತ್ರಿಕೂಟದ ಎಲ್ಜೆಪಿ ಖಾತೆಗೆ ಹೋಗುವ ಸಾಧ್ಯತೆಯಿದೆ.

ಮೇನಕಾ ಗಾಂಧಿ 'ಕರ್ನಾಲ್', ವರುಣ್ ಗಾಂಧಿ 'ಪಿಲಿಭಿತ್' ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ!

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವೆ ಮೇನಕಾ ಗಾಂಧಿ ತಮ್ಮ ಸಾಂಪ್ರದಾಯಿಕ 'ಪಿಲಿಭಿತ್' ಕ್ಷೇತ್ರವನ್ನು ಬಿಟ್ಟು ಹರಿಯಾಣದ 'ಕರ್ನಾಲ್' ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದ್ದು, 'ಪಿಲಿಭಿತ್' ಕ್ಷೇತ್ರ ವರುಣ್ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ವರುಣ್ ಗಾಂಧಿ ಪ್ರಸ್ತುತ ಸುಲ್ತಾನ್ ಪುರದಿಂದ ಬಿಜೆಪಿ ಸಂಸದರಾಗಿದ್ದಾರೆ.

ಅಂತೆಯೇ, ಬಿಹಾರದ ನವಾಡಾ ಕ್ಷೇತ್ರ ಬಿಜೆಪಿಯ ಮೈತ್ರಿಕೂಟದ ಎಲ್ಜೆಪಿ ಖಾತೆಗೆ ಹೋಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪ್ರಸ್ತುತ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈ ಕ್ಷೇತ್ರದ ಸಂಸದರಾಗಿದ್ದು, ನವಾಡಾ ಕ್ಷೇತ್ರವನ್ನು ಎಲ್ಜೆಪಿಗೆ ಬಿಟ್ಟು ಕೊಟ್ಟರೆ ಗಿರಿರಾಜ್ ಸಿಂಗ್ ಬೆಗುಸಾರೈನಿಂದ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಅಮಿತ್ ಶಾ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

Read More