Home> India
Advertisement

Video : ರೀಲ್ಸ್ ಮಾಡುವ ಭರದಲ್ಲಿ ತನ್ನ ಬೆನ್ನಿಗೇ ಬೆಂಕಿ ಹಚ್ಚಿಕೊಂಡ ಭೂಪ..! ಮುಂದೆ.?

Shocking Video: ರೀಲ್‌ಗಳನ್ನು ಮಾಡುವ  ಭರದಲ್ಲಿ ಯುವಕನೊಬ್ಬ ಬೆಂಕಿಯೊಡನೆ ಸರಸವಾಡಿದ್ದಾನೆ. ತನ್ನ ಬೆನ್ನಿಗೆ ತಾನೇ ಬೆಂಕಿ ಹಚ್ಚಿಕೊಂಡು  ಅಪಾಯಕ್ಕೆ ಗುರಿಯಾಗಿದ್ದಾನೆ. ಒಟ್ಟಿನಲ್ಲಿ ಏನೋ ಮಾಡಲು ಹೋಗಿದ್ದಾನೆ ಆದರೆ ಅದು ಇನ್ನೇನೋ ಆಗಿದೆ. 
 

Video : ರೀಲ್ಸ್  ಮಾಡುವ ಭರದಲ್ಲಿ ತನ್ನ ಬೆನ್ನಿಗೇ ಬೆಂಕಿ ಹಚ್ಚಿಕೊಂಡ ಭೂಪ..! ಮುಂದೆ.?

Shocking Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುವ ನಿಟ್ಟಿನಲ್ಲಿ ವಿವಿಧ ರೀತಿಯ ವಿಡಿಯೋಗಳನ್ನು ಮಾಡಲಾಗುತ್ತದೆ (Viral video). ಹೀಗೆ ಮಾಡುವಾಗ ಅನೇಕ ಬಾರಿ ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಾರೆ.
ಇಂತಹದ್ದೇ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಯುವಕನೊಬ್ಬ ರೀಲ್‌ಗಳನ್ನು ಮಾಡುವ ಭರದಲ್ಲಿ ತನ್ನ ಪ್ರಾಣಕ್ಕೆ ಸಂಚಕಾರ ತಂದು ಕೊಂಡಿದ್ದಾನೆ (Shocking video). 

ತನ್ನ ಬೆನ್ನಿಗೆ ಬೆಂಕಿ ಹಚ್ಚಿಕೊಂಡ : 
ರೀಲ್‌ ಮಾಡುವ ವೇಳೆ, ಯುವಕನೊಬ್ಬ ಬೆಂಕಿಯೊಂದಿಗೆ ಅಪಾಯಕಾರಿ ಸಾಹಸಗಳನ್ನು ಮಾಡುವುದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು (Viral video). ಇದರೊಂದಿಗೆ ತನ್ನ ಬೆನ್ನಿಗೆ ತಾನೇ ಬೆಂಕಿ ಹಚ್ಚಿಕೊಳ್ಳುತ್ತಾನೆ. ಇದಾದ ನಂತರ ತಾನು ಮಾಡಿರುವ ಕೆಲಸಕ್ಕೆ ಪಶ್ಚಾತಾಪ ಪಟ್ಟುಕೊಳ್ಳುವಂತಾಗುತ್ತದೆ.  

ಇದನ್ನೂ ಓದಿ : Viral Video : ಗಸ್ತಿನಲ್ಲಿದ್ದಾಗ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ ಕಾಡಾನೆ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

ವ್ಯಕ್ತಿಯೊಬ್ಬ ಕ್ಯಾಮರಾಕ್ಕೆ ಬೆನ್ನು ತಿರುಗಿಸಿ ಲೈಟರ್ ಹೊತ್ತಿಸಿ ಕೆಲ ತಂತ್ರಗಳನ್ನು ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ (Video) ಕಾಣಬಹುದು. ಈ ಹೊತ್ತಿನಲ್ಲಿ ತನ್ನ ಬೆನ್ನಿಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ತನ್ನ ಅಂಗಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಆ ಯುವಕ ಅಂದುಕೊಂಡಿರುತ್ತಾನೆ. ಆದರೆ, ಬೆಂಕಿಯು ತಕ್ಷಣವೇ ಅವನ ಅಂಗಿಯ ಮೂಲಕ ಅವನ ಉಡುಪನ್ನು ಪ್ರವೇಶಿಸುತ್ತದೆ (Fire video). 

 

ಇದಾದ ನಂತರ ಯುವಕ ತುಂಬಾ ಜೋರಾಗಿ ಕೂಗಲು ಪ್ರಾರಂಭಿಸುತ್ತಾನೆ.  ತನ್ನ ಶರ್ಟ್ ಅನ್ನು ತೆಗೆದು ಸ್ನಾನದ ಮನೆಯತ್ತ ಓಡುತ್ತಾನೆ. ಈ ವೀಡಿಯೊವನ್ನು @ViciousVideos ಹೆಸರಿನ ಖಾತೆಯೊಂದಿಗೆ Twitter ನಲ್ಲಿ ಹಂಚಿಕೊಳ್ಳಲಾಗಿದೆ. ಈ 18 ಸೆಕೆಂಡುಗಳ ವೀಡಿಯೊವನ್ನು ಅತ್ಯಂತ ವೇಗವಾಗಿ ಹಂಚಿಕೊಳ್ಳಲಾಗುತ್ತಿದೆ. 

ಇದನ್ನೂ ಓದಿ : Cheating Case: ಪತಿಗೆ ಮದುವೆಯ ಮೊದಲ ರಾತ್ರಿಯ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ ಪತ್ನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More