Home> India
Advertisement

ಖರ್ಗೆ ಪ್ರತಿರೋಧವೊಂದೇ ಸಿಬಿಐ ಡೈರಕ್ಟರ್ ವಿಷಯದಲ್ಲಿ ಸ್ಥಿರವಾಗಿದೆ-ಜೈಟ್ಲಿ

ಸಿಬಿಐ ನಿರ್ದೇಶಕರ ನೇಮಕಾತಿ, ವರ್ಗಾವಣೆ, ಕಿತ್ತುಹಾಕುವಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರ ಪ್ರತಿರೋಧವೊಂದೆ ಸ್ಥಿರವಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೈಟ್ಲಿ ವ್ಯಂಗ್ಯವಾಡಿದ್ದಾರೆ.

ಖರ್ಗೆ ಪ್ರತಿರೋಧವೊಂದೇ ಸಿಬಿಐ ಡೈರಕ್ಟರ್ ವಿಷಯದಲ್ಲಿ ಸ್ಥಿರವಾಗಿದೆ-ಜೈಟ್ಲಿ

ನವದೆಹಲಿ: ಸಿಬಿಐ ನಿರ್ದೇಶಕರ ನೇಮಕಾತಿ, ವರ್ಗಾವಣೆ, ಕಿತ್ತುಹಾಕುವಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರ ಪ್ರತಿರೋಧವೊಂದೆ ಸ್ಥಿರವಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೈಟ್ಲಿ ವ್ಯಂಗ್ಯವಾಡಿದ್ದಾರೆ.

ಸಿಬಿಐ ನಿರ್ದೇಶಕರ ಉನ್ನತ ನೇಮಕಾತಿಯಲ್ಲಿ ಇತರ ಸದಸ್ಯರಾದ ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೊತೆಗೆ ಮಲ್ಲಿಕಾರ್ಜುನ್ ಖರ್ಗೆ ಕೂಡ ಸದಸ್ಯರಾಗಿದ್ದಾರೆ. ಈಗ ಖರ್ಗೆಯವರ ಆಗಾಗ ವ್ಯಕ್ತಪಡಿಸುವ ಪ್ರತಿರೋಧದ ಬಗ್ಗೆ ಮಾತನಾಡಿರುವ ಅರುಣ್ ಜೈಟ್ಲಿ " ಖರ್ಗೆ ಹೆಚ್ಚಾಗಿ ಪ್ರತಿರೋಧವನ್ನು ತೋರಿದ್ದಾರೆ. ಹಲವರಿಗೆ ಕೊಲಿಜಿಯಂ ಪದ್ಧತಿ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವುದರ ಬಗ್ಗೆ ಸಂಶಯವಿದೆ".

"ಸಿಬಿಐ ನಿರ್ದೇಶಕರ ನೇಮಕಾತಿ ಎಂದಿಗೂ ಕೂಡ ರಾಜಕೀಯ ವಿಷಯವಾಗಿರಲಿಲ್ಲ ಆದರೆ ಈಗ ಅವರು ಅದನ್ನು ಮಾಡುತ್ತಿದ್ದಾರೆ. ಅಲೋಕ್ ವರ್ಮಾ ಅವರನ್ನು ನೇಮಕ ಮಾಡಿದಾಗ,ಮತ್ತು ಅವರನ್ನು ವರ್ಗಾವಣೆ ಮಾಡಿದಾಗ ಈಗ ಆರ್.ಕೆ ಶುಕ್ಲಾ ಅವರನ್ನು ನೇಮಕ ಮಾಡಿದಾಗಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ" ಎಂದು ಜೈಟ್ಲಿ ತಮ್ಮ ಬ್ಲಾಗ್ ನಲ್ಲಿ ಬರೆದು ಕೊಂಡಿದ್ದಾರೆ.

Read More