Home> India
Advertisement

ಮಹಾತ್ಮ ಗಾಂಧಿ 150ನೇ ಜನ್ಮ ದಿನ: ರಾಜ್‌ಘಾಟ್‌ನಲ್ಲಿ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಬಾಪೂಜಿ ಅವರ ಕನಸನ್ನು ಸಾಕಾರಗೊಳಿಸಲು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಪಣತೊಟ್ಟು ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 

ಮಹಾತ್ಮ ಗಾಂಧಿ 150ನೇ ಜನ್ಮ ದಿನ: ರಾಜ್‌ಘಾಟ್‌ನಲ್ಲಿ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನವದೆಹಲಿ: ಮಹಾತ್ಮ ಗಾಂಧೀಜಿ ಅವರ 150ನೇ ದಿನಾಚರಣೆ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ರಾಜಘಾಟ್ ಗೆ ತೆರಳಿ ಗಾಂಧೀಜಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. 

ಇದೇ ವೇಳೆ, ಮಹಾತ್ಮ ಗಾಂಧೀಜಿವರು ದೇಶಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಮಾನವೀಯತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, "ಪ್ರೀತಿಯ ಬಾಪುಗೆ ನಮನಗಳು. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, "ಪ್ರೀತಿಯ ಬಾಪುಗೆ ನಮನಗಳು. ಶಾಂತಿ, ಸಾಮರಸ್ಯ ಮತ್ತು ಸಹೋದರತ್ವಕ್ಕೆ ಗಾಂಧಿ ಜಿ ಅವರ ಬದ್ಧತೆ ಅಚಲವಾಗಿತ್ತು. ಅವರ ಆದರ್ಶಗಳು ನಮ್ಮ ಮಾರ್ಗದರ್ಶಕ ಬೆಳಕು" ಎಂದು ಕರೆ ನೀಡಿದ್ದಾರೆ" ಎಂದು ಕರೆ ನೀಡಿದ್ದಾರೆ. 

ಇದೇ ವೇಳೆ, ರಾಷ್ಟ್ರಪತಿ ಕೋವಿಂದ್ ಸಹ ಟ್ವೀಟ್ ಮಾಡಿದ್ದು, "ಅಹಿಂಸೆ, ಸಹಕಾರ, ನೈತಿಕತೆ ಮತ್ತು ಸರಳತೆಯ ಮೌಲ್ಯಗಳನ್ನು ನೆನಪಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಸಂದರ್ಭವಾಗಿದೆ. ಅವರ ಸಂದೇಶಗಳು ನಮಗೆ ಪ್ರಸ್ತುತವಾಗಿದ್ದು ಅವರ ಮಾರ್ಗದರ್ಶನಗಳು ಎಂದೆಂದಿಗೂ ದಾರಿದೀಪ" ಎಂದಿದ್ದಾರೆ. 

ಗಾಂಧೀಜಿ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಅನೇಕ ಗಣ್ಯರು ಸಹ ರಾಜ್ ಘಾಟ್ ಗೆ ತೆರಳಿ ನಮನ ಸಲ್ಲಿಸಿದರು. 

Read More