Home> India
Advertisement

ಇನ್ಮುಂದೆ ಈ ರಾಜ್ಯದಲ್ಲಿ ಹಾಲಿನ ಖಾಲಿ ಕವರ್ ನೀಡಿದ್ರೆ ಸಿಗುತ್ತೆ ಹಣ!

 ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇನ್ಮುಂದೆ ಈ ರಾಜ್ಯದಲ್ಲಿ ಹಾಲಿನ ಖಾಲಿ ಕವರ್ ನೀಡಿದ್ರೆ ಸಿಗುತ್ತೆ ಹಣ!

ಮುಂಬೈ: ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿರುವ ಮಹಾರಾಷ್ಟ್ರ ಸರ್ಕಾರ ಈಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ ಜನರು ಖಾಲಿ ಹಾಲಿನ ಕವರ್ ಗಳನ್ನು ಮಾರಾಟಗಾರನಿಗೇ ಹಿಂದಿರುಗಿಸಬೇಕಿದ್ದು, ಈ ಮೂಲಕ ಹೆಚ್ಚುವರಿ ಪ್ಲಾಸ್ಟಿಕ್ ಚೀಲಗಳ ಬಳಕೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. 

fallbacks

ಅಷ್ಟಕ್ಕೂ ಹಾಲಿನ ಖಾಲಿ ಕವರ್ ಗಳನ್ನೇನು ನೀವು ಪುಕ್ಕಟೆಯಾಗಿ ಹಿಂದಿರುಗಿಸಬೇಕಿಲ್ಲ. ಅದಕ್ಕಾಗಿ ಮಾರಾಟಗಾರನಿಂದ ಒಂದು ಕವರ್ ಗೆ 50 ಪೈಸೆಯಂತೆ ಹಣವೂ ದೊರೆಯಲಿದೆ. ಪ್ರಸ್ತುತ, ಮಹಾರಾಷ್ಟ್ರದಲ್ಲಿ ಪ್ರತಿದಿನ ಸುಮಾರು 31 ದಶಲಕ್ಷ ಟನ್ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗುತ್ತಿದೆ. ಇದನ್ನು ಕಡಿಮೆ ಮಾಡಲು ಪ್ಲಾಸ್ಟಿಕ್ ನಿಷೇಧದ ಅಡಿಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Read More