Home> India
Advertisement

Imported ಮದ್ಯ ಪ್ರಿಯರಿಗೊಂದು ಸಂತಸದ ಸುದ್ದಿ, ಎಕ್ಸೈಸ್ ಡ್ಯೂಟಿ ದರದಲ್ಲಿ ಶೇ.50ರಷ್ಟು ಇಳಿಕೆ

Excise Duty On Imported Scotch Wiskey - ಸ್ಕಾಚ್ ವಿಸ್ಕಿಯ ಮೇಲಿನ ಅಬಕಾರಿ ಸುಂಕವನ್ನು ಉತ್ಪಾದನಾ ವೆಚ್ಚದ ಶೇ. 300 ರಿಂದ ಶೇ.150ಕ್ಕೆ ಇಳಿಕೆ ಮಾಡಲಾಗಿದೆ.

Imported ಮದ್ಯ ಪ್ರಿಯರಿಗೊಂದು ಸಂತಸದ ಸುದ್ದಿ, ಎಕ್ಸೈಸ್ ಡ್ಯೂಟಿ ದರದಲ್ಲಿ ಶೇ.50ರಷ್ಟು ಇಳಿಕೆ

ನವದೆಹಲಿ: Excise Duty On Imported Scotch Wiskey - ಮಹಾರಾಷ್ಟ್ರ ಸರ್ಕಾರವು (Maharashtra Government ) ಆಮದು ಮಾಡಿಕೊಳ್ಳಲಾಗುವ ಸ್ಕಾಚ್ ವಿಸ್ಕಿಯ ಮೇಲಿನ ಅಬಕಾರಿ ಸುಂಕದ ದರವನ್ನು ಶೇಕಡಾ 50 ರಷ್ಟು ಇಳಿಕೆ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ಇದರ ಬೆಲೆ ಇತರೆ ರಾಜ್ಯಗಳಿಗೆ ಸರಿಸಮವಾಗಲಿದೆ. ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಪಿಟಿಐ ಸುದ್ದಿ ಪ್ರಕಾರ, ಸ್ಕಾಚ್ ವಿಸ್ಕಿಯ (Imported Scotch Wiskey) ಮೇಲಿನ ಅಬಕಾರಿ ಸುಂಕವನ್ನು ಉತ್ಪಾದನಾ ವೆಚ್ಚದ ಶೇ.300 ರಿಂದ ಶೇ.150ಕ್ಕೆ ಇಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ.

ಆದಾಯ 250 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ

ಸುದ್ದಿ ಪ್ರಕಾರ, ಆಮದು ಮಾಡಿಕೊಳ್ಳಲಾಗುವ ಸ್ಕಾಚ್ ಮಾರಾಟದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ವಾರ್ಷಿಕ 100 ಕೋಟಿ ಆದಾಯ ಬರುತ್ತದೆ. ಒಂದು ಲಕ್ಷ ಬಾಟಲಿಗಳಿಂದ 2.5 ಲಕ್ಷ ಬಾಟಲಿಗಳಿಗೆ ಮಾರಾಟವನ್ನು ಹೆಚ್ಚಿಸುವುದರಿಂದ ಈ ಕಡಿತದಿಂದ ಸರ್ಕಾರದ ಆದಾಯವು 250 ಕೋಟಿ ರೂಪಾಯಿಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸರ್ಕಾರದ (Maharashtra)ಅಧಿಕಾರಿ ತಿಳಿಸಿದ್ದಾರೆ. 

ಇದನ್ನೂ ಓದಿ-Weird Experiment ! ಬೈಕ್ ನಲ್ಲಿ ಪೆಟ್ರೋಲ್ ಬಳಸುವ ಬದಲು ಮದ್ಯ ಹಾಕಿದರೆ ಏನಾಗುತ್ತದೆ?

ಕಪ್ಪು ವ್ಯಾಪಾರ ಕಡಿಮೆಯಾಗಲಿದೆ
ಅಬಕಾರಿ ಸುಂಕದಲ್ಲಿನ (Tax) ತೀವ್ರ ಕಡಿತವು ಸ್ಕಾಚ್‌ನ ಬ್ಲಾಕ್ ಮಾರ್ಕೆಟಿಂಗ್ ಮತ್ತು ಮಹಾರಾಷ್ಟ್ರದಲ್ಲಿ ನಕಲಿ ವೈನ್ ಮಾರಾಟವನ್ನು ಕಡಿಮೆ ಮಾಡುತ್ತದೆ ಅಥವಾ ನಿಗ್ರಹಿಸುತ್ತದೆ. ಯಾವುದೇ ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ ಭಾರಿ ಆದಾಯ ಬರುತ್ತದೆ. ಆದರೆ, ಬಿಹಾರ ಮತ್ತು ಗುಜರಾತ್‌ನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ-Exercise ಮಾಡುವುದರಿಂದ ಈ ಕೆಟ್ಟ ಚಟ ದೂರಾಗುತ್ತದೆ, ಈ ಕೆಲಸದಿಂದ ದೂರಾಗುತ್ತದೆ ಟೆನ್ಶನ್

ಮದ್ಯದ ಮೇಲಿನ ಅಬಕಾರಿ ಸುಂಕಕ್ಕೆ ರಾಜ್ಯಗಳು ಜವಾಬ್ದಾರಿಯಾಗಿರುತ್ತವೆ
ಪೆಟ್ರೋಲ್ ಮತ್ತು ಡೀಸೆಲ್‌ನಂತೆ ಮದ್ಯವು ಜಿಎಸ್‌ಟಿ ವ್ಯಾಪ್ತಿಯ ಹೊರಗಿದೆ. ಇಂತಹ ಪರಿಸ್ಥಿತಿಯಲ್ಲಿ, ರಾಜ್ಯ ಸರ್ಕಾರಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ತಮ್ಮ ರಾಜ್ಯದ ನೀತಿ ನಿಯಮಗಳ ಅನುಸಾರ ಮದ್ಯದ ಮೇಲೆ ತೆರಿಗೆಯನ್ನು ಅನ್ವಯಿಸುತ್ತವೆ. ಸಾಮಾನ್ಯವಾಗಿ, ರಾಜ್ಯಗಳು ಮದ್ಯದ ತಯಾರಿಕೆ ಮತ್ತು ಮಾರಾಟದ ಮೇಲೆ ತೆರಿಗೆಯನ್ನು ವಿಧಿಸುತ್ತವೆ, ಅದನ್ನು ಅಬಕಾರಿ ಸುಂಕವಾಗಿ ವಿಧಿಸಲಾಗುತ್ತದೆ. ಇದಲ್ಲದೇ ಮದ್ಯದ ಮೇಲೆ ವಿಶೇಷ ಸೆಸ್, ಸಾರಿಗೆ ಶುಲ್ಕ, ಲೇಬಲ್ ಮತ್ತು ನೋಂದಣಿ ಶುಲ್ಕ ಸೇರಿದಂತೆ ಇತರೆ ಶುಲ್ಕಗಳನ್ನು ಸಹ  ವಿಧಿಸಲಾಗುತ್ತದೆ.

ಇದನ್ನೂ ಓದಿ-ಈ ಕೆಟ್ಟ ಅಭ್ಯಾಸಗಳನ್ನು ತಕ್ಷಣವೇ ಬಿಟ್ಟುಬಿಡಿ, ಇಲ್ಲದಿದ್ದರೆ ಮೂಳೆಗಳು ದುರ್ಬಲವಾಗುತ್ತವೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More