Home> India
Advertisement

'ಸೈನ್ಯದಲ್ಲಿ ಯಾವುದೇ ಲಿಂಗ ತಾರತಮ್ಯವಿಲ್ಲ'- ಲೆಫ್ಟಿನೆಂಟ್ ಭಾವನಾ ಕಸ್ತೂರಿ

ಆರ್ಮಿ ಸರ್ವಿಸ್ ಕಾರ್ಪ್ಸ್ನಲ್ಲಿ, ಲೆಫ್ಟಿನೆಂಟ್ ಭಾವನ ಕಸ್ತೂರಿ ಜನವರಿ 26 ರಂದು ನಡೆಯಲಿರುವ ಪೆರೇಡ್ ನಲ್ಲಿ ಪುರುಷ ಸೇನೆಯನ್ನು ನೇತೃತ್ವ ವಹಿಸುವ ಮೊದಲ ಮಹಿಳೆಯಾಗಿದ್ದಾರೆ.

'ಸೈನ್ಯದಲ್ಲಿ ಯಾವುದೇ ಲಿಂಗ ತಾರತಮ್ಯವಿಲ್ಲ'- ಲೆಫ್ಟಿನೆಂಟ್ ಭಾವನಾ ಕಸ್ತೂರಿ

ನವದೆಹಲಿ: 70ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಒಂದು ಚಿತ್ರಣವನ್ನು ಕಾಣಬಹದು. ಜನವರಿ 26ರಂದು ರಾಜ್ ಪತ್ ನಲ್ಲಿ ನಡೆಯುವ ಪೆರೇಡ್ ನಲ್ಲಿ ಮೊದಲ ಬಾರಿಗೆ ಪುರುಷ ಸೇನೆಯ ನೇತೃತ್ವವನ್ನು ಮಹಿಳಾ ಲೆಫ್ಟಿನೆಂಟ್ ವಹಿಸಲಿದ್ದಾರೆ. ಆರ್ಮಿ ಸರ್ವಿಸ್ ಕಾರ್ಪ್ಸ್ನಲ್ಲಿ, ಲೆಫ್ಟಿನೆಂಟ್ ಭಾವನಾ ಕಸ್ತೂರಿ ಈ ಅದ್ಭುತ ಕ್ಷಣದ ರೂವಾರಿಯಾಗಿದ್ದಾರೆ. ಇದಕ್ಕೂ ಮೊದಲು ಲೆಫ್ಟಿನೆಂಟ್ ಭಾವನಾ ಕಸ್ತೂರಿ ಸೇನಾ ದಿವಸ್ ಪೆರೇಡ್ ನಲ್ಲಿ ಮಹಿಳಾ ಸಬಲೀಕರಣದ ಉದಾಹರಣೆಯಾಗಿ ಬಿಂಬಿತವಾಗಿದ್ದರು.

ಭಾರತೀಯ ಸೇನಾ ಸೇವಾ ಕಾರ್ಪ್ಸ್ (ASC) 144 ಪುರುಷರನ್ನು ಒಳಗೊಂಡಿರುತ್ತದೆ. ಈ ಐತಿಹಾಸಿಕ ಕ್ಷಣದ ಭಾಗವಾಗಿ ಹೋಗುವ ಲೆಫ್ಟಿನೆಂಟ್ ಭಾವನಾ ಕಸ್ತೂರಿ ಅವರೊಂದಿಗೆ ನಮ್ಮ ಝೀ ವಾಹಿನಿಯ ಅಂಗಸಂಸ್ಥೆ Wion ವರದಿಗಾರ ಸಿದ್ದಾಂತ್ ಸಿಬಲ್ ಅವರ ಸಂಭಾಷಣೆ...

ಸಿದ್ದಾಂತ್ ಸಿಬಲ್: ಪುರುಷ ಸೇನೆಯನ್ನು ಮುನ್ನಡೆಸುವ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ?
ಲೆಫ್ಟಿನೆಂಟ್ ಭಾವನಾ ಕಸ್ತೂರಿ: ಇದು ನನಗೆ ಸಂತೋಷ ಮತ್ತು ಗೌರವದ ವಿಷಯವಾಗಿದೆ. ಇದು ನಮಗೆ ಹೆಮ್ಮೆಪಡುವ ವಿಷಯವಾಗಿದೆ. ಆರ್ಮಿ ಸರ್ವಿಸ್ ಕಾರ್ಪ್ನಲ್ಲಿ ನಮ್ಮ ಸೈನ್ಯವು ರಿಪಬ್ಲಿಕ್ ಡೇ ಆಚರಣೆಯ ಭಾಗವಾಗಲಿದೆ, ಇದು ಐತಿಹಾಸಿಕ ಕ್ಷಣವಾಗಿದೆ. ಇದು ಕೇವಲ ನನಗೆ ಮಾತ್ರವಲ್ಲ, ನಮ್ಮ ಇಬ್ಬರು ಕಿರಿಯ ಅಧಿಕಾರಿಗಳು (JCOs) ಮತ್ತು 144 ಜನರಿಗೆ ಅದೃಷ್ಟದ ವಿಷಯವಾಗಿದೆ. ಇದು ನಮಗೆ ಐತಿಹಾಸಿಕವಾಗಿರುತ್ತದೆ. ಇದರೊಂದಿಗೆ, ನಾವು ಇತಿಹಾಸ ಪುಸ್ತಕಗಳ ಭಾಗವಾಗಿರುತ್ತೇವೆ.

ಸಿದ್ದಾಂತ್ ಸಿಬಲ್: ಸೇನೆಯ ಮಹಿಳೆಯಾಗಿ ನಿಮ್ಮ ಅನುಭವ ಏನು?
ಲೆಫ್ಟಿನೆಂಟ್ ಭಾವನಾ ಕಸ್ತೂರಿ: ಭಾರತೀಯ ಸೇನೆಯಲ್ಲಿ ಲಿಂಗ ಅಸಮಾನತೆಯ ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ನಾನು ನಂಬುತ್ತೇನೆ. ಸೈನ್ಯದ ಅಧಿಕಾರಿಯು ಯಾವಾಗಲೂ ಅಧಿಕಾರಿಯಾಗಿ ಉಳಿದಿದ್ದಾನೆ, ಜವಾಬ್ದಾರಿಯುತ ಸೇವೆಯ ಹಕ್ಕು ಅದೇ ಆಗಿರುತ್ತದೆ. ಒಂದು ದೊಡ್ಡ ವೇದಿಕೆಯಲ್ಲಿ ಸೈನ್ಯದ ಸಾಮರ್ಥ್ಯದ ಚಿತ್ರವನ್ನು ತೋರಿಸಲು ನಮಗೆ ಉತ್ತಮ ಅವಕಾಶ ಸಿಕ್ಕಿದೆ.

ಸಿದ್ದಾಂತ್ ಸಿಬಲ್: ಹಳೆಯ ಸಂಪ್ರದಾಯಗಳು ಮತ್ತು ಅಡಚಣೆಗಳು ದೂರಾಗುತ್ತಿವೆಯೇ?
ಲೆಫ್ಟಿನೆಂಟ್ ಭಾವನಾ ಕಸ್ತೂರಿ: ಹೌದು, ಭಾರತೀಯ ಸಮಾಜದಲ್ಲಿ ವಿವಿಧ ರೀತಿಯ ಬದಲಾವಣೆಗಳು ಸಂಭವಿಸುತ್ತಿವೆ. ಇದು ಸೇನೆಯಲ್ಲಿ ಮಾತ್ರವಲ್ಲ, ಸಾಮಾನ್ಯ ಜೀವನದಲ್ಲಿಯೂ ಮಹಿಳೆಯರು ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ. ನಾವು ನಿರಂತರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವೆ ಎಂದು ನಾನು ಹೇಳಲೇಬೇಕು.

ಸಿದ್ದಾಂತ್ ಸಿಬಲ್: ದೇಶದ ಮಹಿಳೆಯರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ?
ಲೆಫ್ಟಿನೆಂಟ್ ಭಾವನಾ ಕಸ್ತೂರಿ: ನಾನು ಇನ್ನೂ ಬಾಲಕಿಯರಿಗೆ ವಿಶೇಷವಾಗಿ ಆದರ್ಶಪ್ರಾಯವಾಗಿದ್ದೇನೆ ಎಂದು ನಾನು ನಂಬುತ್ತೇನೆ. ಸೋಲಿಗೆ ಎಂದೂ ಭಯಪಡಬೇಡಿ. ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸಿ ಎಂದು ನಾನು ಎಲ್ಲರಿಗೂ ತಿಳಿಸುತ್ತೇನೆ. 

ಸಿದ್ದಾಂತ್ ಸಿಬಲ್: ನಿಮ್ಮ ಜೋಶ್ ಹೇಗಿದೆ?
ಲೆಫ್ಟಿನೆಂಟ್ ಭಾವನಾ ಕಸ್ತೂರಿ: ಜೋಶ್ ಹೆಚ್ಚಾಗಿದೆ

Read More