Home> India
Advertisement

Lockdown 4.0ನಲ್ಲಿ ಕೆಲಸಕ್ಕಾಗಿ ಕಚೇರಿಗೆ ಮರಳುತ್ತಿದ್ದೀರಾ? ಆರೋಗ್ಯ ಇಲಾಖೆಯ ಈ ಗೈಡ್ ಲೈನ್ ನಿಮಗೆ ತಿಳಿದಿರಲಿ

ಲಾಕ್ ಡೌನ್ 4.0ನಲ್ಲಿ ತೆರೆಯಲಾಗಿರುವ ಕಚೇರಿ ಹಾಗೂ ಕೆಲಸದ ಸ್ಥಳಗಲಿಗಾಗಿ ಆರೋಗ್ಯ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
 

Lockdown 4.0ನಲ್ಲಿ ಕೆಲಸಕ್ಕಾಗಿ ಕಚೇರಿಗೆ ಮರಳುತ್ತಿದ್ದೀರಾ? ಆರೋಗ್ಯ ಇಲಾಖೆಯ ಈ ಗೈಡ್ ಲೈನ್ ನಿಮಗೆ ತಿಳಿದಿರಲಿ

ನವದೆಹಲಿ: ಲಾಕ್‌ಡೌನ್ 4.0 ಹೊಸ ನಿಯಮಗಳೊಂದಿಗೆ ದೇಶದಲ್ಲಿ ಜಾರಿಗೆ ಬಂದಿದೆ. ಅನೇಕ ಚಟುವಟಿಕೆಗಳನ್ನು ಇನ್ನೂ ನಿಷೇಧಿಸಲಾಗಿದ್ದರೂ, ಕೆಲವು ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಆದರೂ ಕೂಡ ಲಾಕ್‌ಡೌನ್‌ನಲ್ಲಿ ಕೆಲವು ಷರತ್ತುಗಳೊಂದಿಗೆ ಸಡಿಲಿಕೆಯನ್ನು ನೀಡಲಾಗುತ್ತದೆ. ಮತ್ತೊಂದೆಡೆ, ತೆರೆದಿರುವ ಕಚೇರಿಗಳು ಮತ್ತು ಕೆಲಸದ ಸ್ಥಳಗಳಿಗಾಗಿ, ಆರೋಗ್ಯ ಸಚಿವಾಲಯ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕಚೇರಿಯಲ್ಲಿ ನೌಕರರ ನಡುವೆ ಸಾಮಾಜಿಕ ಅಂತರ ಕಾಯುವುದು ಕಡ್ಡಾಯಗೊಳಿಸಲಾಗಿದೆ. ಆಸನ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳಿಗೆ 1 ಮೀಟರ್ ದೂರ ಅಗತ್ಯ ಎಂದು ಹೇಳಲಾಗಿದೆ.

- ಫೇಸ್ ಮಾಸ್ಕ್ ಅಥವಾ ಬಟ್ಟೆಯಿಂದ ಬಾಯಿ ಮತ್ತು ಮೂಗನ್ನು ಕವರ್ ಮಾಡಬೇಕು.
- ಸ್ವಲ್ಪ ಸ್ವಲ್ಪ ಸಮಯದ ಅಂತರದಲ್ಲಿ ಸಾಬೂನು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಕೈಗಳನ್ನು ಶುಚಿಯಾಗಿಡಬೇಕು.
- ಅನಾರೋಗ್ಯಕ್ಕೆ ಒಳಗಾದರೆ ಅದರ ಮಾಹಿತಿಯನ್ನು ಆಡಳಿತ ಮಂಡಳಿಗೆ ನೀಡುವುದು ಅನಿವಾರ್ಯ.
- ಕೆಮ್ಮುವ ವೇಳೆ ಅಥವಾ ಸೀನುವ ವೇಳೆ ಮುಖವನ್ನು ಕವರ್ ಮಾಡಿ.
ಕಚೇರಿಗೆ ಹೋಗುವಾಗ ಎಚ್ಚರಿಕೆವಹಿಸಿ. ಸಾರ್ವಜನಿಕ ಸ್ಥಳಗಳಲ್ಲಿ ವಸ್ತುಗಳನ್ನು ಸ್ಪರ್ಶಿಸಬೇಡಿ.
- ಕಚೇರಿಯಲ್ಲಿ ಯಾರಾದರೂ ಕರೋನಾ ಸೋಂಕಿಗೆ ಒಳಗಾಗಿದ್ದರೆ, ಆ ವ್ಯಕ್ತಿ ಕಳೆದ 48 ಗಂಟೆಗಳಲ್ಲಿ ಹೋದ ಎಲ್ಲ ಸ್ಥಳಗಳನ್ನು ಸೋಂಕುರಹಿತಗೊಳಿಸುವುದು ಅವಶ್ಯಕ. ಸೋಂಕುನಿವಾರಕಗೊಳಿಸಿದ ನಂತರ ಕೆಲಸವನ್ನು ಪ್ರಾರಂಭಿಸಬಹುದು. ಕಚೇರಿ ಅಥವಾ ಕಟ್ಟಡದ ಸಂಪೂರ್ಣ ಭಾಗವನ್ನು ಸೀಲ್ ಮಾಡುವ ಅಗತ್ಯವಿಲ್ಲ.
- ಕಚೇರಿ ಅಥವಾ ಕಟ್ಟಡದಲ್ಲಿ ಕರೋನದ ಅನೇಕ ಪ್ರಕರಣಗಳಿದ್ದಲ್ಲಿ, ಇಡೀ ಕಚೇರಿಯನ್ನು 48 ಗಂಟೆಗಳ ಕಾಲ ಸೀಲ್ ಮಾಡಲಾಗುವುದು. ಆ ಕಚೇರಿ ಸೋಂಕುರಹಿತ ಮತ್ತು ಸುರಕ್ಷಿತವೆಂದು ಘೋಷಿಸುವವರೆಗೆ, ಎಲ್ಲರೂ ಮನೆಯಿಂದಲೇ ಕೆಲಸ ಮಾಡಬೇಕು.

Read More