Home> India
Advertisement

ದೇಶದಲ್ಲಿ ಬದಲಾವಣೆಯ ರೂಪದಲ್ಲಿ ಮತ್ತೆ ಲಾಕ್‌ಡೌನ್

ಈ ಲಾಕ್‌ಡೌನ್‌ಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ನಿಯಮಗಳನ್ನು ಸಹ ಮಾಡಲಾಗಿದೆ, ಜೊತೆಗೆ ಸಮಯದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ.

ದೇಶದಲ್ಲಿ ಬದಲಾವಣೆಯ ರೂಪದಲ್ಲಿ ಮತ್ತೆ ಲಾಕ್‌ಡೌನ್

ನವದೆಹಲಿ: ದೇಶದಲ್ಲಿ ಕರೋನಾವೈರಸ್ ಕೋವಿಡ್ -19 (Covid-19)  ಸಾಂಕ್ರಾಮಿಕ ರೋಗವು ದಿನೇ ದಿನೇ ಶರವೇಗದಲ್ಲಿ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯಿಂದಾಗಿ ಸ್ಥಳೀಯ ಆಡಳಿತವು ಅನೇಕ ಸ್ಥಳಗಳಲ್ಲಿ   ಲಾಕ್‌ಡೌನ್ (Lockdown) ವಿಧಿಸಲು ಮುಂದಾಗಿದೆ. ಆದರೆ ಈಗ ಲಾಕ್‌ಡೌನ್ ಬೇರೆ ರೂಪದಲ್ಲಿ ಬರುತ್ತಿದೆ ಎಂದು ತೋರುತ್ತದೆ. 

ಹೌದು ಇಂದಿನಿಂದ ದೇಶದ ಹಲವು ನಗರಗಳಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ. ಈ ಲಾಕ್‌ಡೌನ್‌ಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ನಿಯಮಗಳನ್ನು ಸಹ ಮಾಡಲಾಗಿದೆ, ಜೊತೆಗೆ ಸಮಯದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ.

ಇಂದಿನಿಂದ ಗುಜರಾತ್‌ನ ಅಹಮದಾಬಾದ್, ವಡೋದರಾ, ಸೂರತ್‌ನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳನ್ನು ಮತ್ತೆ ಮುಚ್ಚಲಾಗುತ್ತಿದೆ. ಏಕೆಂದರೆ ಕರೋನದ ಹೆಚ್ಚಿನ ಪ್ರಕರಣಗಳು ಈ ಸ್ಥಳಗಳಲ್ಲಿ ವರದಿಯಾಗಿವೆ. ಈ ಕಾರಣಕ್ಕಾಗಿ  ಕರೋನಾವೈರಸ್ (Coronavirus)  ತಡೆಗಟ್ಟುವಿಕೆಗಾಗಿ ಸ್ಥಳೀಯ ಆಡಳಿತವು ಲಾಕ್‌ಡೌನ್ ಜಾರಿಗೊಳಿಸಿದೆ. ಮಧ್ಯಪ್ರದೇಶದ ಗ್ವಾಲಿಯರ್ ಬಗ್ಗೆ ನೋಡುವುದಾದರೆ ಇಂದು ಸಂಜೆ 7 ಗಂಟೆಯಿಂದ ಇಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಒಂದೇ ದಿನದಲ್ಲಿ 191 ಕರೋನಾ ಸೋಂಕಿನ ಪ್ರಕರಣಗಳಿಂದಾಗಿ ಸ್ಥಳೀಯ ಆಡಳಿತ ಈ ನಿರ್ಧಾರ ಕೈಗೊಂಡಿದೆ.

ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದ 9 ದಿನಗಳ ಲಾಕ್‌ಡೌನ್: ಇಲ್ಲಿದೆ ಗೈಡ್ಲೈನ್ಸ್

ಇದರ ಹೊರತಾಗಿ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದೀಚೆಗೆ ಕೋವಿಡ್-19 ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದು ರಾತ್ರಿ 8 ಗಂಟೆಯಿಂದ ಬೆಂಗಳೂರಿನಲ್ಲಿ (ಬಿಬಿಎಂಪಿ, ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳನ್ನು ಒಳಗೊಂಡಂತೆ) ಒಂಬತ್ತು ದಿನಗಳ  ಲಾಕ್‌ಡೌನ್ (Lockdown) ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಅದೇ ಸಮಯದಲ್ಲಿ, ಇಂದು ರಾತ್ರಿ ನಂತರ ಮುಂದಿನ 10 ದಿನಗಳವರೆಗೆ ಪುಣೆ ಮತ್ತು ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಲಾಕ್‌ಡೌನ್ ವಿಧಿಸಲಾಗುತ್ತಿದೆ. ಅಷ್ಟೇ ಅಲ್ಲ ವಾರಣಾಸಿ ನಗರದಲ್ಲಿ 5 ದಿನ ಲಾಕ್‌ಡೌನ್ ವಿಧಿಸಲಾಗುತ್ತಿದೆ. ಆದಾಗ್ಯೂ ವಾರಣಾಸಿಯಲ್ಲಿನ ಈ ಲಾಕ್‌ಡೌನ್ ಕೇವಲ ಅರ್ಧ ದಿನವಾಗಿರುತ್ತದೆ.

Read More