Home> India
Advertisement

Lockdown 4.0 ನೂತನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಕೇಂದ್ರ ಗೃಹ ಇಲಾಖೆ

ದೇಶಾದ್ಯಂತ ಲಾಕ್ ಡೌನ್ ಅವಧಿಯನ್ನು ಮೇ 31, 2020ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಗೃಹ ಇಲಾಖೆ ಲಾಕ್ ಡೌನ್ 4.0 ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

Lockdown 4.0 ನೂತನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಕೇಂದ್ರ ಗೃಹ ಇಲಾಖೆ

ನವದೆಹಲಿ:ದೇಶಾದ್ಯಂತ ಲಾಕ್ ಡೌನ್ ಅವಧಿಯನ್ನು ಮೇ 31, 2020ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಗೃಹ ಇಲಾಖೆ ಲಾಕ್ ಡೌನ್ 4.0 ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ನೂತನ ಮಾರ್ಗ ಸೂಚಿಗಳು ಈ ಕೆಳಗಿನಂತೆ ಇರಲಿವೆ,

- ಮೇ 31, 2020ರವರೆಗೆ ದೇಶಾದ್ಯಂತ ಲಾಕ್ ಡೌನ್ ಮುಂದುವರೆಯಲಿದೆ.

- ದೇಶೀಯ ಹಾಗೂ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಸೇವೆ ಬಂದ್ ಇರಲಿದೆ. ಕೇವಲ ಡೊಮೆಸ್ಟಿಕ್ ಮೆಡಿಕಲ್, ಡೊಮೆಸ್ಟಿಕ್ ಏರ್ ಅಂಬುಲೆನ್ಸ್ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ವಿಮಾನಯಾನ ಸೇವೆ ಎಂದಿನಂತೆ ಚಾಲ್ತಿಯಲ್ಲಿ ಇರಲಿದೆ.
-ಮೆಟ್ರೋ ರೈಲು ಸೇವೆ ಬಂದ್ ಇರಲಿದೆ.
- ಶಾಲಾ-ಕಾಲೇಜು, ಶೈಕ್ಷಣಿಕ/ತರಬೇತಿ/ ಕೋಚಿಂಗ್ ಸಂಸ್ಥೆಗಳು ಬಂದ್ ಇರಲಿವೆ.
-ಆನ್ಲೈನ್/ದೂರ ಶಿಕ್ಷಣ ಆರಂಭಗೊಳ್ಳಲಿವೆ.
-ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರೆ ಹಾಸ್ಪಿಟಾಲಿಟಿ ಸೇವೆಗಳು ಬಂದ್ ಇರಲಿವೆ. ಆದರೆ, ಆಹಾರ ಸಾಮಗ್ರಿಗಳ ಹೋಮ್ ಡೆಲಿವರಿಗಾಗಿ ರೆಸ್ಟೋರೆಂಟ್ ಗಳು ತಮ್ಮ ಕಿಚನ್ ತೆರೆಯಲು ಅನುಮತಿ ನೀಡಲಾಗಿದೆ.
- ಎಲ್ಲ ರೀತಿಯ ಸಿನಿಮಾ ಹಾಲ್ ಗಳು, ಶಾಪಿಂಗ್ ಮಾಲ್ ಗಳು, ಜಿಮ್ನಾಸಿಯಂ, ಸ್ವಿಮ್ಮಿಂಗ್ ಪೂಲ್, ಎಂಟರ್ಟೈನ್ಮೆಂಟ್ ಪಾರ್ಕ್ ಗಳು, ಥೇಟರ್ ಗಳು, ಬಾರ್ ಗಳು ಮತ್ತು ಆಡಿಟೋರಿಯಂಗಳು/ಅಸೆಂಬ್ಲಿ ಹಾಲ್/ ಜನಸಂದಣಿಯುಂಟು ಮಾಡುವ ಸಾರ್ವಜನಿಕ ಪ್ರದೇಶಗಳು ಬಂದ್ ಇರಲಿವೆ.
- ಎಲ್ಲ ಸಾಮಾಜಿಕ/ರಾಜಕೀಯ/ಕ್ರೀಡಾ/ಎಂಟರ್ಟೈನ್ಮೆಂಟ್/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ/ ಇತರೆ ಚಟುವಟಿಕೆಗಳ ಮೇಲೆ ನಿರ್ಬಂಧನೆ ಮುಂದುವರೆಯಲಿದೆ.
-ಎಲ್ಲ ಧಾರ್ಮಿಕ ಸ್ಥಳಗಳು/ಪ್ರಾರ್ಥನೆ ಸಲ್ಲಿಸುವ ಸ್ಥಳಗಳು ಸಾರ್ವಜನಿಕರಿಗೆ ಬಂದ್ ಇರಲಿದೆ, ಧಾರ್ಮಿಕ ಜಮಾವಣೆಯ ಮೇಲೂ ಕೂಡ ನಿರ್ಬಂಧನೆ ಮುಂದುವರೆಯಲಿದೆ.

ಕೆಲ ಷರತ್ತುಗಳ ಆಧಾರದ ಮೇಲೆ ಈ ಕೆಳಗಿನ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ
- ಇಂಟರ್ ಸ್ಟೇಟ್ ಬಸ್ ಹಾಗೂ ವಾಹನಗಳ ಸೇವೆಗೆ ಷರತ್ತುಬದ್ಧ ಅನುಮತಿ.(ಎರಡು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಪರಸ್ಪರ ಸಮ್ಮತಿ ಅಗತ್ಯ)
- ಇಂಟ್ರಾ-ಸ್ಟೇಟ್ ಟ್ಯಾಕ್ಸಿ, ಕ್ಯಾಬ್  ಮತ್ತು ಬಸ್ ಸೇವೆಗಳಿಗೆ ಷರತ್ತುಬದ್ಧ ಅನುಮತಿ (ಆಯಾ ರಾಜ್ಯ /ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಅನುಮತಿ ನೀಡಿದರೆ ಮಾತ್ರ)
- ಈ ಮೊದಲು ಅಸ್ತಿತ್ವದಲ್ಲಿರುವ ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳು ಮುಂದುವರೆಯಲಿವೆ.
- ಆರೋಗ್ಯ ಇಲಾಖೆಯ ಮಾನದಂಡಗಳನ್ನು ಆಧರಿಸಿ ಯಾವ ಯಾವ ಜೋನ್ ಗಳು ರೆಡ್, ಗ್ರೀನ್, ಆರೆಂಜ್, ಕಂಟೆನ್ ಮೆಂಟ್, ಬಫರ್ ಇತ್ಯಾದಿಗಲಾಗಿರಲಿವೆ ಎಂಬುದನ್ನು ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಜಿಲ್ಲಾಡಳಿತಗಳು ತೀರ್ಮಾನ ಕೈಗೊಳ್ಳಲಿವೆ.
- ಯಾವ ರಾಜ್ಯಗಳಲ್ಲಿ ಯಾವ ಅಂಗಡಿ-ಮುಂಗಟ್ಟುಗಳು ತೆರೆಯಲಿವೆ ಅಥವಾ ಬಂದ್ ಇರಲಿವೆ ಎಂಬುದರ ಕುರಿತು ರಾಜ್ಯ ಸರ್ಕಾರಗಳೇ ತೀರ್ಮಾನಿಸಲಿವೆ.
- ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ.

Read More