Home> India
Advertisement

Labor Ministry: ಕಾರ್ಮಿಕರಿಗೆ ವಾರಕ್ಕೆ 4 ದಿನ ಕೆಲಸ, 3 ದಿನ ರಜೆ ಪದ್ಧತಿಗೆ ಸರ್ಕಾರ ಸಮ್ಮತಿ!

ವಾರಕ್ಕೆ ಗರಿಷ್ಠ 48 ಗಂಟೆಗಳ ಮಿತಿಯಲ್ಲಿ 4 ದಿನಗಳ ಕೆಲಸದ ಪದ್ಧತಿಯನ್ನು ಅಳವಡಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದಿಸಿದೆ.

Labor Ministry: ಕಾರ್ಮಿಕರಿಗೆ ವಾರಕ್ಕೆ 4 ದಿನ ಕೆಲಸ, 3 ದಿನ ರಜೆ ಪದ್ಧತಿಗೆ ಸರ್ಕಾರ ಸಮ್ಮತಿ!

ಹೊಸದಿಲ್ಲಿ: ಮುಂಬರುವ ದಿನಗಳಲ್ಲಿ ಐಟಿಯೇತರ ಕಂಪನಿಗಳಲ್ಲೂ ಉದ್ಯೋಗಿಗಳ ಕೆಲಸ ವೇಳೆ ಹಾಗೂ ದಿನಗಳಲ್ಲಿ ಅಗತ್ಯಾನುಸಾರ ಬದಲಾವಣೆಯಾಗಲಿದೆ. ಅಗತ್ಯ ಇದ್ದರೆ, ವಾರಕ್ಕೆ ಗರಿಷ್ಠ 48 ಗಂಟೆಗಳ ಮಿತಿಯಲ್ಲಿ 4 ದಿನಗಳ ಕೆಲಸದ ಪದ್ಧತಿಯನ್ನು ಅಳವಡಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದಿಸಿದೆ. ಈ ಬಗ್ಗೆ ಅಂತಿಮ ಅಧಿಸೂಚನೆ ಶೀಘ್ರ ಪ್ರಕಟವಾಗಲಿದೆ.

ಹೀಗಿದ್ದರೂ ಉಳಿದ ಮೂರು ದಿನಗಳ ರಜೆಗಳು ವೇತನ(Salary) ಸಹಿತವಾಗಿರಬೇಕು ಎಂದು ಸೂಚಿಸಿದೆ. ಈ ಪದ್ಧತಿಯಲ್ಲಿ ವಾರಕ್ಕೆ 48 ಗಂಟೆಗಳ ಗರಿಷ್ಠ ಮಿತಿ ಎಂದರೆ, ದಿನಕ್ಕೆ 12 ಗಂಟೆಗಳ ಕೆಲಸವಾಗಲಿದೆ. ಹಾಗೂ ಉದ್ಯೋಗಿಯ ಒಪ್ಪಿಗೆ ಪಡೆದು ಜಾರಿಗೊಳಿಸಬೇಕಾಗುತ್ತದೆ ಎಂದು ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.

Sasikala: ತಮಿಳುನಾಡಿಗೆ ಎಂಟ್ರಿಕೊಟ್ಟ ಚಿನ್ನಮ್ಮ: 'ನಾನು ಎಂದಿಗೂ ಗುಲಾಮಳಾಗುವುದಿಲ್ಲ'

ಹಾಲಿ ಪದ್ಧತಿ ಏನು? ಪ್ರಸ್ತುತ ಕಂಪನಿ(Company)ಗಳು ವಾರಕ್ಕೆ ಗರಿಷ್ಠ 48 ಗಂಟೆಗಳ ಮಿತಿಯಲ್ಲಿ, ವಾರಕ್ಕೆ 6 ದಿನಗಳ ಕೆಲಸ ಹಾಗೂ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ಹೊಂದಿರಬೇಕಾಗುತ್ತದೆ.

Land Unique Code - ಇನ್ಮುಂದೆ ನಿಮ್ಮ ಜಮೀನಿಗೂ ಸಿಗಲಿದೆ 'Aadhaar Card' ಮಾದರಿಯ ವಿಶಿಷ್ಟ ಸಂಖ್ಯೆ

ಇದುವರೆಗೆ ಐಟಿ ಕಂಪನಿಗಳಲ್ಲಿ ಮಾತ್ರ ದುಡಿಮೆಯ ಅವಧಿಗಳಲ್ಲಿ ಸಡಿಲ ನೀತಿ ಜಾರಿಯಲ್ಲಿತ್ತು. ಆದರೆ ಹೊಸ ಕಾರ್ಮಿಕ ನೀತಿಗಳ ಪ್ರಕಾರ ಇತರ ಉತ್ಪಾದಕ ವಲಯಗಳಲ್ಲೂ ಅವಶ್ಯಕತೆಯನ್ನು ಆಧರಿಸಿ ಕೆಲಸದ ಸಮಯವನ್ನು ನಿರ್ಧರಿಸಬಹುದು. ಇದರಿಂದ ಕಂಪನಿಗಳ ಉತ್ಪಾದಕತೆ ವೃದ್ಧಿಸಲು ಸಹಕಾರಿಯಾಗಲಿದೆ ಎನ್ನುತ್ತಾರೆ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಡಾ. ಜೆ. ಕ್ರಾಸ್ಟಾ.

Farmers Protest - Sachin, Kohli, Lata ಸೇರಿದಂತೆ ಹಲವು ಗಣ್ಯರ ಟ್ವೀಟ್ ಗಳ ತನಿಖೆಗೆ ಮಹಾ ಸರ್ಕಾರ ಆದೇಶ

ಉತ್ಪಾದಕ ವಲಯದ ಕೆಲ ಕಂಪನಿಗಳಿಗೆ ತುರ್ತಾಗಿ ಹೆಚ್ಚು ಅವಧಿಯ ಕೆಲಸದ ಅಗತ್ಯ ಇರುತ್ತದೆ. ಅಂಥ ಸಂದರ್ಭದಲ್ಲಿ ದಿನಕ್ಕೆ 12 ಗಂಟೆಗಳ ಕೆಲಸ ಉಪಯುಕ್ತವಾಗುತ್ತದೆ ಎನ್ನುತ್ತಾರೆ ಕ್ರಾಸ್ಟಾ.

PM Modi: 'ಮನಮೋಹನ್ ಸಿಂಗ್ ಹೇಳಿದ್ದನ್ನ ನಾನು ಮಾಡಿ ತೋರಿಸಿದ್ದೇನೆ'

ಚೀನಾದ ಕಾರ್ಖಾನೆಗಳಲ್ಲೂಈ ರೀತಿಯ ಪದ್ಧತಿ ಇದೆ. ಅಲ್ಲಿ ಕಾನೂನಿಗಿಂತಲೂ ಕಠಿಣ ಪರಿಸ್ಥಿತಿಯನ್ನು ಕಾರ್ಮಿಕರು ಎದುರಿಸುತ್ತಾರೆ ಎನ್ನುತ್ತಾರೆ ಅವರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More