Home> India
Advertisement

ಈ 5 ಹಂತಗಳನ್ನು ಅನುಸರಿಸಿ ನಿಮ್ಮ ಆಧಾರ್ ಮಾಹಿತಿ Lock ಮಾಡಿ!

ನಿಮ್ಮ ಆಧಾರ್ ಮಾಹಿತಿಯನ್ನು ಇನ್ನೂ ಹೆಚ್ಚು ಸುರಕ್ಷಿತವಾಗಿಡಲು ಯುಐಡಿಎಐ ಲಾಕ್ / ಅನ್ಲಾಕ್ ಸೌಲಭ್ಯವನ್ನು ಪ್ರಾರಂಭಿಸಿದೆ.
 

ಈ 5 ಹಂತಗಳನ್ನು ಅನುಸರಿಸಿ ನಿಮ್ಮ ಆಧಾರ್ ಮಾಹಿತಿ Lock ಮಾಡಿ!

ನವದೆಹಲಿ: ಆಧಾರ್(Aadhaar) ಕಾರ್ಡ್ ಅನ್ನು ಹಲವು ಕೆಲಸಗಳಿಗೆ ಬಳಸಲಾಗುತ್ತದೆ. ಯಾವುದೇ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಎಷ್ಟು ಮುಖ್ಯವಾದುದು ಎಂಬುದು ಎಲ್ಲರಿಗೂ ತಿಳಿದಿದೆ. ಇದಲ್ಲದೆ, ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. ಸೆಪ್ಟೆಂಬರ್ ನಂತರ, ನಿಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ಅದನ್ನು  ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಆಧಾರ್ ಸುರಕ್ಷತೆಯ ಬಗ್ಗೆ ಹತ್ತು ಹಲವು ಅನುಮಾನ ಉಂಟಾಗಿದ್ದವು. ಆಧಾರ್ ಮಾಹಿತಿ ರಕ್ಷಿಸುವುದು ಸರ್ಕಾರದ ಜವಾಬ್ದಾರಿಯ ಜೊತೆಗೆ   ನಿಮ್ಮ ಜವಾಬ್ದಾರಿ ಕೂಡಾ. ನಿಮ್ಮ ಆಧಾರ್ ಮಾಹಿತಿಯನ್ನು ಇನ್ನೂ ಹೆಚ್ಚು ಸುರಕ್ಷಿತವಾಗಿಡಲು ಯುಐಡಿಎಐ ಲಾಕ್ / ಅನ್ಲಾಕ್ ಸೌಲಭ್ಯವನ್ನು ಪ್ರಾರಂಭಿಸಿದೆ. ಇದರ ಸಹಾಯದಿಂದ ನಿಮ್ಮ ಆಧಾರ್ ಮಾಹಿತಿಯನ್ನು ಹೆಚ್ಚು ಸುರಕ್ಷಿತವಾಗಿರಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

ಆಧಾರ್ ಮಾಹಿತಿಯನ್ನು ಎರಡು ರೀತಿ ಲಾಕ್ ಮಾಡಬಹುದು. ನೀವು ಇಂಟರ್ನೆಟ್ ಬಳಸುತ್ತಿದ್ದರೆ ಯುಐಡಿಎಐ ವೆಬ್ಸೈಟ್ uidai.gov.in ಗೆ ಭೇಟಿ ನೀಡುವುದರ ಮೂಲಕ ನೀಬು ನಿಮ್ಮ ಆಧಾರ್ ಅನ್ನು ಲಾಕ್ ಮಾಡಬಹುದು. ಇನ್ನು ಎರಡನೆಯದಾಗಿ  1947 ಸಂಖ್ಯೆಗೆ ಸಂದೇಶ(ಎಸ್ಎಂಎಸ್) ಕಳುಹಿಸುವ ಮೂಲಕ ನಿಮ್ಮ ಆಧಾರ್ ಅನ್ನು ಸುರಕ್ಷಿತವಾಗಿರಿಸಬಹುದು.

ಆನ್ಲೈನ್ನಲ್ಲಿ ಲಾಕ್ ಮಾಡುವುದು ಹೇಗೆ?
1. ಮೊದಲಿಗೆ ಆಧಾರ್ ಅಧಿಕೃತ ವೆಬ್ಸೈಟ್ www.uidai.gov.in ಭೇಟಿ ನೀಡಿ.
2. ಮೇಲಿನ ಎಡಭಾಗದಲ್ಲಿ ಮೈ ಆಧಾರ್(My Aadhaar) ಆಯ್ಕೆ ಕಾಣಿಸಿಕೊಳ್ಳುತ್ತದೆ.
3. My Aadhaar ಮೇಲೆ ಕರ್ಸರ್ನ ಇಡುವುದರಿಂದ ಹಲವು ಆಯ್ಕೆಗಳು ನಿಮಗೆ ಮುಂದೆ ತೆರೆಯುತ್ತವೆ.
4. ಆಧಾರ್ ಲಾಕ್ / ಅನ್ಲಾಕ್ ಆಯ್ಕೆಯು ಆಧಾರ್ ಸರ್ವೀಸ್ ಆಯ್ಕೆಗಳ ಕೊನೆಯ (ಕೊನೆಯಿಂದ ಎರಡನೆಯದು) ಆಯ್ಕೆಯಲ್ಲಿ ಕಾಣಿಸಿಕೊಳ್ಳುತ್ತದೆ.
5. ಈ ಆಯ್ಕೆಯನ್ನು ತೆರೆಯಬೇಕು.

ನಿಮ್ಮ ಆಧಾರ್ ಅನ್ನು ಲಾಕ್ ಮಾಡಲು, ನೀವು UID ಸಂಖ್ಯೆ, ಪೂರ್ಣ ಹೆಸರು, ಪಿನ್ ಕೋಡ್ ಅನ್ನು ನಮೂದಿಸಬೇಕು. OTP ಮೊಬೈಲ್ನಲ್ಲಿ ಬರುತ್ತವೆ, ಒಟಿಪಿ ನಮೂದಿಸಿ ಅದನ್ನು ಸಬ್ಮಿಟ್ ಮಾಡಿದ ತಕ್ಷಣವೇ ನಿಮ್ಮ ಆಧಾರ್ ಅನ್ನು ಲಾಕ್ ಮಾಡುತ್ತದೆ. ಅನ್ಲಾಕ್ ಮಾಡಲು ವರ್ಚ್ಯುಯಲ್ ID ಮತ್ತು ಸೆಕ್ಯೂರಿಟಿ ಕೋಡ್ ಅನ್ನು ಸೇರಿಸುವ ಅಗತ್ಯವಿದೆ OTP ಸೇರಿಸಿದ ನಂತರ ಅದನ್ನು ಅನ್ಲಾಕ್ ಮಾಡಲಾಗುತ್ತದೆ.

Read More