Home> India
Advertisement

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಆಡ್-ಈವ್ ವ್ಯವಸ್ಥೆ ಜಾರಿಗೆ ತರಲು ಕೇಜ್ರಿವಾಲ್ ಸರ್ಕಾರದ ನಿರ್ಧಾರ

ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಗ್ರಹಿಸಲು ಕೇಜ್ರಿವಾಲ್ ಸರ್ಕಾರ ಮತ್ತೆ ಆಡ್ ಈವ್ ಸ್ಕೀಮ್ ಜಾರಿಗೊಳಿಸುವುದಾಗಿ ಘೋಷಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಆಡ್-ಈವ್ ವ್ಯವಸ್ಥೆ ಜಾರಿಗೆ ತರಲು ಕೇಜ್ರಿವಾಲ್ ಸರ್ಕಾರದ ನಿರ್ಧಾರ

ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ತಡೆಯುವ ಸಲುವಾಗಿ, ಅರವಿಂದ ಕೇಜ್ರಿವಾಲ್ ಸರ್ಕಾರ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದು, ಮತ್ತೆ ಆಡ್ ಈವ್ ಸ್ಕೀಮ್ ಜಾರಿಗೆ ತರಲು ಘೋಷಿಸಿದೆ. ಇದರ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಆಡ್-ಈವ್ ವ್ಯವಸ್ಥೆಯನ್ನು 12 ದಿನಗಳವರೆಗೆ ಜಾರಿಗೆ ತರಲು ಕೇಜ್ರಿವಾಲ್ ಸರ್ಕಾರ ನಿರ್ಧರಿಸಿದೆ. ದೆಹಲಿಯಲ್ಲಿ, ಈ ವ್ಯವಸ್ಥೆ ನವೆಂಬರ್ 4 ರಿಂದ 15 ರವರೆಗೆ ಅನ್ವಯವಾಗಲಿದೆ. ಅಂದರೆ, ದೀಪಾವಳಿಯ ನಂತರ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಇದರೊಂದಿಗೆ ದೆಹಲಿ ಸರ್ಕಾರವು ಜನರನ್ನು ಮಾಲಿನ್ಯದಿಂದ ರಕ್ಷಿಸಲು ಮಾಸ್ಕ್ ಗಳನ್ನು ವಿತರಿಸಲಿದೆ. ಮಾಲಿನ್ಯ ದೂರುಗಳಿಗಾಗಿ ವಾರ್ ರೂಂ ಅನ್ನು ಸಹ ರಚಿಸಲಾಗುವುದು ಎಂದು ದೆಹಲಿ ಸರ್ಕಾರದ ವತಿಯಿಂದ ಮಾಹಿತಿ ನೀಡಲಾಗಿದೆ.

ದೆಹಲಿಯಲ್ಲಿ ಆಡ್-ಈವ್ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಟಾಕಿ ಸಿಡಿಸುವುದರಿಂದ ಉಂಟಾಗುವ ಮಾಲಿನ್ಯವು ಜನರಿಗೆ ಉಸಿರಾಡಲು ಕಷ್ಟವಾಗುತ್ತದೆ. ಹಾಗಾಗಿ ಪಟಾಕಿ ಸಿಡಿಸಬೇಡಿ ಎಂದು ದೆಹಲಿ ಜನತೆಗೆ ನಾವು ಮನವಿ ಮಾಡುತ್ತೇವೆ ಎಂದರು.

ದೀಪಾವಳಿಯ ದಿನ, ಇಡೀ ದೆಹಲಿಗೆ ಲೇಸರ್ ಪ್ರದರ್ಶನವನ್ನು ಆಯೋಜಿಸಲಾಗುವುದು, ಇದರಲ್ಲಿ ಪ್ರವೇಶ ಉಚಿತವಾಗಿರುತ್ತದೆ. ಜನರನ್ನು ಪಟಾಕಿಯಿಂದ ದೂರವಿಡುವುದು ಇದರ ಮುಖ್ಯ ಉದ್ದೇಶ. ಇದಲ್ಲದೆ ಪರಿಸರ ರಕ್ಷಣೆಗಾಗಿ ಗಿಡಗಳನ್ನು ನೆಡಲು ಜನರಿಗೆ ಪ್ರೋತ್ಸಾಹಿಸಲಾಗುತ್ತದೆ. ಜನರು ನಮ್ಮ ಸಂಖ್ಯೆಗೆ ಒಂದು ಮೆಸೇಜ್ ಕಳುಹಿಸಿದರೆ ಸಾಕು ಸಸ್ಯ ಅವರ ಮನೆ ಬಾಗಿಲಿಗೆ ತಲುಪಲಿದೆ ಎಂದು ಸಿಎಂ ಕೇಜ್ರಿವಾಲ್ ಭರವಸೆ ನೀಡಿದರು.

Read More