Home> India
Advertisement

Kartarpur Sahib Corridor Re-Open: ಇಂದಿನಿಂದ ಭಕ್ತರಿಗಾಗಿ ಮತ್ತೆ ತೆರೆಯಲಿದೆ ಕರ್ತಾರ್‌ಪುರ ಸಾಹಿಬ್ ಕಾರಿಡಾರ್

Kartarpur Sahib Corridor Re-Open:  ಶ್ರೀ ಗುರುನಾನಕ್ ದೇವ್ ಜಿ ಅವರ ಪ್ರಕಾಶ್ ಪರ್ವ್‌ಗೆ ಮುನ್ನ ಕೇಂದ್ರ ಸರ್ಕಾರವು ಕರ್ತಾರ್‌ಪುರ ಕಾರಿಡಾರ್ ಅನ್ನು ಪುನರಾರಂಭಿಸಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

Kartarpur Sahib Corridor Re-Open: ಇಂದಿನಿಂದ ಭಕ್ತರಿಗಾಗಿ ಮತ್ತೆ ತೆರೆಯಲಿದೆ ಕರ್ತಾರ್‌ಪುರ ಸಾಹಿಬ್ ಕಾರಿಡಾರ್

Kartarpur Sahib Corridor Re-Open:  ಶ್ರೀ ಗುರುನಾನಕ್ ದೇವ್ ಜಿ ಅವರ ಪ್ರಕಾಶ್ ಪರ್ವ್‌ಗೆ  (Prakash Parv) ಮುನ್ನ ಕೇಂದ್ರ ಸರ್ಕಾರವು ಕರ್ತಾರ್‌ಪುರ ಕಾರಿಡಾರ್ ಅನ್ನು ಪುನರಾರಂಭಿಸಿದೆ (Kartarpur Sahib Corridor Re-Open). ಈ ಬಗ್ಗೆ ಸ್ವತಃ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), 'ನವೆಂಬರ್ 17 ರಿಂದ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅನ್ನು ಮತ್ತೆ ತೆರೆಯಲು ಪ್ರಧಾನಿ ನರೇಂದ್ರ ಮೋದಿ  (Narendra Modi) ಸರ್ಕಾರ ಅನುಮತಿ ನೀಡಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಈ ನಿರ್ಧಾರವು ಶ್ರೀ ಗುರುನಾನಕ್ ದೇವ್ ಜಿ ಮತ್ತು ನಮ್ಮ ಸಿಖ್ ಸಮುದಾಯದ ಬಗ್ಗೆ ಮೋದಿ ಸರ್ಕಾರದ ಅಪಾರ ಗೌರವವನ್ನು ತೋರಿಸುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಗುರುಪರ್ವ್ ನವೆಂಬರ್ 19 ರ ಶುಕ್ರವಾರದಂದು ಆರಂಭವಾಗಲಿದೆ. ಅದಕ್ಕೂ ಮೊದಲು ಪಂಜಾಬ್ ಬಿಜೆಪಿ ನಾಯಕರೊಬ್ಬರು ಕರ್ತಾರ್‌ಪುರ ಸಾಹಿಬ್ ಕಾರಿಡಾರ್ (Kartarpur Sahib Corridor) ಅನ್ನು ನವೆಂಬರ್ 18 ರಂದು ತೆರೆಯಬಹುದು ಎಂದು ಹೇಳಿದ್ದರು. ಆದರೆ, ಅದಕ್ಕಿಂತ ಒಂದು ದಿನ ಮುಂಚಿತವಾಗಿ ಅಂದರೆ ನವೆಂಬರ್ 17ರಂದು ಕರ್ತಾರ್‌ಪುರ ಕಾರಿಡಾರ್ ಅನ್ನು ಮತ್ತೆ ತೆರೆದಿರುವುದು ಭಕ್ತರಲ್ಲಿ ಹರ್ಷ ಮೂಡಿಸಿದೆ. ಮೊದಲ ಬ್ಯಾಚ್‌ನಲ್ಲಿ 250 ಭಕ್ತರು ಕರ್ತಾರ್‌ಪುರ ಗುರುದ್ವಾರಕ್ಕೆ ಹೋಗಬಹುದು ಎಂದು ಬಿಜೆಪಿ ಮುಖಂಡ ಹರ್ಜಿತ್ ಗ್ರೀವನ್ ಹೇಳಿದ್ದರು.

ಇದನ್ನೂ ಓದಿ- MParivahan App : ನಿಮ್ಮ ವಾಹನದ ಪೇಪರ್ ಇಲ್ಲದಿದ್ದರೂ ಓಡಿಸಬಹುದು! ಅದಕ್ಕೆ ನಿಮ್ಮ ಮೊಬೈಲ್ ಇದ್ದರೆ ಸಾಕು, ಹೇಗೆ? ಇಲ್ಲಿದೆ

ಈ ಹಿಂದೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್  (Capt. Amarinder Singh) ಕೂಡ ಕರ್ತಾರ್‌ಪುರ ಕಾರಿಡಾರ್ ಅನ್ನು ಪುನರಾರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಸಿಖ್ ಸಂಗತ್‌ನ ಭಾವನೆಗಳನ್ನು ಗೌರವಿಸಿ ನವೆಂಬರ್ 19 ರ ಮೊದಲು ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆಯುವಂತೆ ಅವರು ಪ್ರಧಾನಿ ಮೋದಿಯವರನ್ನು ಕೇಳಿದ್ದರು. ಪ್ರಧಾನಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಪಂಜಾಬ್ ಬಿಜೆಪಿ ನಾಯಕರು ಕೂಡ ಇದೇ ಬೇಡಿಕೆಯನ್ನು ಸಲ್ಲಿಸಿದ್ದರು.

fallbacks

ಕರ್ತಾರ್‌ಪುರ ಕಾರಿಡಾರ್ ಡೇರಾ ಬಾಬಾ ನಾನಕ್ ಭಾರತದ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿದೆ, ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ತಾನದ ಕರ್ತಾರ್‌ಪುರ ಪಟ್ಟಣದೊಂದಿಗೆ ಸಂಪರ್ಕ ಹೊಂದಿದೆ. ಸಿಖ್ಖರ ಪವಿತ್ರ ಯಾತ್ರಾಸ್ಥಳವಾದ ಶ್ರೀ ಕರ್ತಾರ್‌ಪುರ ಸಾಹಿಬ್ ಗುರುದ್ವಾರವು ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾವಿ ನದಿಯ ದಡದಲ್ಲಿದೆ. ಲಾಹೋರ್‌ನಿಂದ ಇದರ ದೂರ 120 ಕಿ.ಮೀ. ಗುರುನಾನಕ್ ಅವರ ಪೋಷಕರು ಈ ಸ್ಥಳದಲ್ಲಿ ನಿಧನರಾದರು. ಬಾಬಾ ನಾನಕ್ ಅವರು ತಮ್ಮ ಜೀವನದ ಕೊನೆಯ ಸಮಯವನ್ನು ಇಲ್ಲಿಯೇ ಕಳೆದರು. ಇಲ್ಲಿ 17 ವರ್ಷಕ್ಕೂ ಹೆಚ್ಚು ಕಾಲ ಸ್ವತಃ ಕೃಷಿ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Accident : ಸುಶಾಂತ್ ಸಿಂಗ್ ರಜಪೂತ್ ಕುಟುಂಬದ 5 ಜನ ಅಪಘಾತದಲ್ಲಿ ಸಾವು!

ಇಲ್ಲಿ ಭಾರತದಲ್ಲಿ, ಶ್ರೀ ಗುರುನಾನಕ್ ದೇವ್ ಜಿ ಅವರ ನೆನಪಿಗಾಗಿ ನಿರ್ಮಿಸಲಾದ ಡೇರಾ ಬಾಬಾ ನಾನಕ್, ರಾವಿ ನದಿಯ ದಡದಲ್ಲಿದೆ. ಡೇರಾ ಬಾಬಾ ನಾನಕ್ ಗುರುದಾಸ್‌ಪುರ ಜಿಲ್ಲೆಯಲ್ಲಿ ಬರುವ ಎರಡೂ ದೇಶಗಳ ಗಡಿ ರೇಖೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಬಾಬಾ ನಾನಕ್ 12 ವರ್ಷಗಳ ಕಾಲ ಇಲ್ಲಿ ತಂಗಿದ್ದರು ಎಂದು ನಂಬಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More