Home> India
Advertisement

ಮಾರ್ಚ್ 20ಕ್ಕೆ ಮಕ್ಕಳ್ ನೀದಿ ಮೈಯಂ ಪಕ್ಷದ ಅಭ್ಯರ್ಥಿಗಳ ಘೋಷಣೆ: ಕಮಲ್ ಹಾಸನ್

ಮಕ್ಕಳ್ ನೀದಿ ಮೈಯಂ ಪರವಾಗಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಮಾರ್ಚ್ 20ರಂದು ಬಹಿರಂಗಪಡಿಸಲಿದ್ದಾರೆ

ಮಾರ್ಚ್ 20ಕ್ಕೆ ಮಕ್ಕಳ್ ನೀದಿ ಮೈಯಂ ಪಕ್ಷದ ಅಭ್ಯರ್ಥಿಗಳ ಘೋಷಣೆ: ಕಮಲ್ ಹಾಸನ್

ಚೆನ್ನೈ: ಲೋಕಸಭಾ ಚುನಾವಣೆ ಹಾಗೂ ತಮಿಳುನಾಡು ವಿಧಾನಸಭೆ ಉಪಚುನಾವಣೆಗೆ ಮಾರ್ಚ್ 20ರಂದು ಮಕ್ಕಳ್ ನೀದಿ ಮೈಯಂ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ನಟ, ರಾಜಕಾರಣಿ ಕಮಲ್ ಹಾಸನ್ ಸೋಮವಾರ ತಿಳಿಸಿದ್ದಾರೆ.'

ಈ ಬಗ್ಗೆ ಪಕ್ಷ  ಪ್ರಕಟಣೆ ಹೊರಡಿಸಿದ್ದು, "2019 ರ ಲೋಕಸಭೆ ಮತ್ತು ತಮಿಳುನಾಡು ವಿಧಾನಸಭೆ ಉಪಚುನಾವಣೆಯಲ್ಲಿ ಮಕ್ಕಳ್ ನೀದಿ ಮೈಯಂ ಪರವಾಗಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ಕಮಲ್ ಹಾಸನ್ 20/03/2019 ರಂದು ಬಹಿರಂಗಪಡಿಸಲಿದ್ದಾರೆ" ಎಂದು ತಿಳಿಸಿದೆ.

ಇತ್ತೀಚೆಗಷ್ಟೇ ಚುನಾವಣಾ ಆಯೋಗವು ಕಮಲ್ ಹಾಸನ್ ಅವರ 'ಮಕ್ಕಳ್ ನೀದಿ ಮೈಯಂ' ಪಕ್ಷಕ್ಕೆ 'ಟಾರ್ಚ್ ಲೈಟ್' ಅನ್ನು ಪಕ್ಷದ ಚಿಹ್ನೆಯಾಗಿ ನಿಗದಿ ಮಾಡಿತ್ತು. ಚುನಾವಣಾ ಆಯೋಗ ನಿಗದಿಪಡಿಸಿದ ಚಿಹ್ನೆಯನ್ನು ಸ್ವಾಗತಿಸಿದ್ದ ಕಮಲ್ ಹಾಸನ್, "ಮಕ್ಕಳ್ ನೀದಿ ಮೈಯಂ ಪಕ್ಷಕ್ಕೆ ನೀಡಿರುವ ಈ ಚಿಹ್ನೆಯ ಮೂಲಕ ತಮಿಳುನಾಡು ಮತ್ತು ಭಾರತೀಯ ರಾಜಕೀಯದಲ್ಲಿ ಟಾರ್ಚ್ ಲೈಟ್ ನಂತೆ ಹೊಸ ಬೆಳಕನ್ನು ಹುಟ್ಟುಹಾಕಲು ಪಕ್ಷ ಪ್ರಯತ್ನಿಸಲಿದೆ" ಎಂದಿದ್ದರು. ಈ ಬೆನ್ನಲ್ಲೇ ಮಾರ್ಚ್ 20ರಂದು ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.

Read More