Home> India
Advertisement

ಯಾವ ಶಾ, ಸುಲ್ತಾನ್ ಕೂಡ ದೇಶದ ವೈವಿಧ್ಯತೆ ಸಡಿಲಗೊಳಿಸಲು ಸಾಧ್ಯವಿಲ್ಲ: ಕಮಲ್ ಹಾಸನ್

ಹಿಂದಿ ಹೇರಿಕೆ ಬಗ್ಗೆ ಅಮಿತ್ ಷಾ ವಿರುದ್ಧ ಕಿಡಿ ಕಾರಿರುವ ನಟ, ರಾಜಕಾರಣಿ ಕಮಲ್ ಹಾಸನ್, ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, 'ಭಾಷೆಗಾಗಿ ಹೋರಾಟ' ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಯಾವ ಶಾ, ಸುಲ್ತಾನ್ ಕೂಡ ದೇಶದ ವೈವಿಧ್ಯತೆ ಸಡಿಲಗೊಳಿಸಲು ಸಾಧ್ಯವಿಲ್ಲ: ಕಮಲ್ ಹಾಸನ್

ನವದೆಹಲಿ: ದೇಶಾದ್ಯಂತ ಹಿಂದಿ ಸಾಮಾನ್ಯ ಮತ್ತು ಏಕೀಕೃತ ಭಾಷೆಯಾಗಬೇಕೆಂಬ ಅಗತ್ಯತೆಯ ಬಗ್ಗೆ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ನಟ, ರಾಜಕಾರಣಿ ಕಮಲ್ ಹಾಸನ್,  ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, 'ಭಾಷೆಗಾಗಿ ಹೋರಾಟ' ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಮಲ್ ಹಾಸನ್, ಭಾರತದಲ್ಲಿ ಜನಿಸಲು ಹಲವು ರಾಜರು ತಮ್ಮ ಸಾಮ್ರಾಜ್ಯವನ್ನೇ ಬಿಟ್ಟುಕೊಟ್ಟಿದ್ದಾರೆ. ಆದರೆ, ಬಹಳಷ್ಟು ಭಾರತೀಯರು ಮತ್ತು ರಾಜ್ಯಗಳು ತಮ್ಮ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ತ್ಯಜಿಸುವುದನ್ನು ತೀವ್ರವಾಗಿ ವಿರೋಧಿಸಿದರು. 1950 ರಲ್ಲಿ ಭಾರತವು ಸಾಂವಿಧಾನಿಕ ಗಣರಾಜ್ಯವಾದಾಗ, ಸರ್ಕಾರವೂ ಸಹ ಜನರಿಗೆ ಅದೇ ರೀತಿ ಭರವಸೆ ನೀಡಿತ್ತು. ಯಾವುದೇ ಶಾ ಅಥವಾ ಸುಲ್ತಾನ ಅಥವಾ ಸಾಮ್ರಾಟ ಇದನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಬುಲ್-ಟ್ಯಾಮಿಂಗ್ ಕ್ರೀಡೆಯ ನಡವಳಿಕೆಯನ್ನು ಕೋರಿ 2017ರ ಪ್ರತಿಭಟನೆಯ ಬಗ್ಗೆ ಪ್ರಸ್ತಾಪಿಸಿದ ಕಮಲ್, "ಜಲ್ಲಿಕಟ್ಟು ಕೇವಲ ಪ್ರತಿಭಟನೆಯಾಗಿತ್ತು, ನಮ್ಮ ಭಾಷೆಯ ಪರವಾದ ಯುದ್ಧ ಅದಕ್ಕಿಂತ ದೊಡ್ಡದಾಗಿರಲಿದೆ. ಭಾರತ ಅಥವಾ ತಮೀಜ್ ನಾಡಿಗೆ ಅಂತಹ ಯುದ್ಧ ಎದುರಿಸುವ ಅಗತ್ಯವಿಲ್ಲ" ಎಂದಿದ್ದಾರೆ.

"ಹೆಚ್ಚಿನ ರಾಷ್ಟ್ರಗಳು ತಮ್ಮ ರಾಷ್ಟ್ರಗೀತೆಯನ್ನು ಬಂಗಾಳಿಯಲ್ಲಿ ಹೆಮ್ಮೆಯಿಂದ ಹಾಡುತ್ತಾರೆ, ಹಾಗೇ ಅದನ್ನು ಮುಂದುವರಿಸಿದ್ದಾರೆ. ರಾಷ್ಟ್ರಗೀತೆ ಬರೆದ ಕವಿ ರಾಷ್ಟ್ರಗೀತೆಯೊಳಗಿನ ಎಲ್ಲಾ ಭಾಷೆ ಮತ್ತು ಸಂಸ್ಕೃತಿಗೆ ಸರಿಯಾದ ಗೌರವವನ್ನು ಸಲ್ಲಿಸಿದ್ದಾರೆ. ಹಾಗಾಗಿಯೇ ಅದು ನಮ್ಮ ರಾಷ್ಟ್ರ ಗೀತೆಯಾಯಿತು. ಅಂತರ್ಗತ ಭಾರತವನ್ನು ಪ್ರತ್ಯೇಕವಾಗಿ ಮಾಡಬೇಡಿ. ಅಂತಹ ದೂರದೃಷ್ಟಿಯ ಮೂರ್ಖತನದಿಂದಾಗಿ ಎಲ್ಲರಿಗೂ ಸಮಸ್ಯೆಯಾಗಲಿದೆ" ಎಂದು ಕಮಲ್ ಕಿಡಿ ಕಾರಿದ್ದಾರೆ.

Read More