Home> India
Advertisement

CJI NV Ramana: '48ನೇ ಮುಖ್ಯ ನ್ಯಾಯಮೂರ್ತಿಯಾಗಿ' ಆಗಿ ಎನ್.ವಿ.ರಮಣ ಪ್ರಮಾಣ ವಚನ ಸ್ವೀಕಾರ!

ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಅಧ್ಯಕ್ಷ ರಾಮನಾಥ್ ಕೋವಿಂದ್ ಅವರು ನ್ಯಾಯಮೂರ್ತಿ ರಮಣ ಅವರಿಗೆ ಪ್ರಮಾಣ ವಚನ

CJI NV Ramana: '48ನೇ ಮುಖ್ಯ ನ್ಯಾಯಮೂರ್ತಿಯಾಗಿ' ಆಗಿ ಎನ್.ವಿ.ರಮಣ ಪ್ರಮಾಣ ವಚನ ಸ್ವೀಕಾರ!

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೂತಲಪತಿ ವೆಂಕಟ ರಮಣ(ಎನ್.ವಿ.ರಮಣ) ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈಗ ಅವರು ಭಾರತದ 48 ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ)  ಆಗಿ ಆಯ್ಕೆ ಆಗಿದ್ದಾರೆ. ಇವರ ಮೊದಲು ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಸಿಜೆಐ ಆಗಿದ್ದರು. ಅವರು ನಿವೃತ್ತಿ ಹೊಂದಿದ ಬಳಿಕೆ ಆ ಸ್ಥಾನಕ್ಕೆ ಎನ್.ವಿ.ರಮಣ ಅವರನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi), ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಅಧ್ಯಕ್ಷ ರಾಮನಾಥ್ ಕೋವಿಂದ್ ಅವರು ನ್ಯಾಯಮೂರ್ತಿ ರಮಣ ಅವರಿಗೆ ಪ್ರಮಾಣ ವಚನ ಭೋದಿಸಿದರು.

ಇದನ್ನೂ ಓದಿ : Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ

ನ್ಯಾಯಮೂರ್ತಿ ರಮಣ(Justice NV Raman) ಅವರು ಆಗಸ್ಟ್ 26, 2022 ರಂದು ನಿವೃತ್ತರಾಗಲಿದ್ದಾರೆ. ಮಾರ್ಚ್ ನಲ್ಲಿ  ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ನ್ಯಾಯಮೂರ್ತಿ ರಮಣ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು. ಸಿಜೆಐ ಬೊಬ್ಡೆ ಏಪ್ರಿಲ್ 23 ರಂದು ನಿವೃತ್ತರಾಗಲಿದ್ದಾರೆ.

ಇದನ್ನೂ ಓದಿ : Bank Working Hour: ಕರೋನಾದಿಂದಾಗಿ ಬ್ಯಾಂಕುಗಳ ಕೆಲಸದ ಸಮಯದಲ್ಲಿ ಕಡಿತ!

ನ್ಯಾಯಮೂರ್ತಿ ರಮಣ ಅವರು ಆಗಸ್ಟ್ 27, 1957 ರಂದು ಆಂಧ್ರಪ್ರದೇಶ(Andra Pradesha)ದ ಕೃಷ್ಣ ಜಿಲ್ಲೆಯ ಪೊನ್ನವರಂ ಗ್ರಾಮದಲ್ಲಿ ಜನಿಸಿದರು. ಅವರು ಫೆಬ್ರವರಿ 10, 1983 ರಂದು ವಕೀಲರಾಗಿ ವೃತ್ತಿ ಆರಂಭಿಸಿದರು.

ಇದನ್ನೂ ಓದಿ : CBSE ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿ, ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಮಹತ್ವದ ಬದಲಾವಣೆ

ನ್ಯಾಯಮೂರ್ತಿ ರಮಣ ಅವರನ್ನು ಆಂಧ್ರಪ್ರದೇಶದ ಹೈಕೋರ್ಟ್‌(High Court)ನ ನ್ಯಾಯಾಧೀಶರಾಗಿ ಜೂನ್ 27, 2000 ರಂದು ನೇಮಿಸಲಾಯಿತು. 2013 ರ ಮಾರ್ಚ್ 10 ರಿಂದ 2013 ರ ಮೇ 20 ರವರೆಗೆ ಮುಖ್ಯ ನ್ಯಾಯಾಧೀಶರಾಗಿ ತಮ್ಮ ಕರ್ತವ್ಯ ನಿರ್ವಹಿಸಿದರು. ನ್ಯಾಯಮೂರ್ತಿ ರಮಣ ಅವರನ್ನು ಸೆಪ್ಟೆಂಬರ್ 2, 2013 ರಂದು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು, ನಂತರ ಫೆಬ್ರವರಿ 17, 2014 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More