Home> India
Advertisement

ಜೆಎನ್‌ಯು ದೇಶದ್ರೋಹ ಪ್ರಕರಣ: 7 ಆರೋಪಿಗಳಿಗೆ ಜಾಮೀನು

2016 ರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ದೇಶದ್ರೋಹ ಪ್ರಕರಣದ ಏಳು ಆರೋಪಿಗಳಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಸೋಮವಾರ (ಮಾರ್ಚ್ 15) ಜಾಮೀನು ನೀಡಿದೆ.

ಜೆಎನ್‌ಯು ದೇಶದ್ರೋಹ ಪ್ರಕರಣ: 7 ಆರೋಪಿಗಳಿಗೆ ಜಾಮೀನು

ನವದೆಹಲಿ: 2016 ರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ದೇಶದ್ರೋಹ ಪ್ರಕರಣದ ಏಳು ಆರೋಪಿಗಳಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಸೋಮವಾರ (ಮಾರ್ಚ್ 15) ಜಾಮೀನು ನೀಡಿದೆ.

ಜೆಎನ್‌ಯು (Jawaharlal Nehru University) ಪ್ರಕರಣದ ಎಲ್ಲ ಆರೋಪಿಗಳಿಗೆ ಚಾರ್ಜ್‌ಶೀಟ್ ಮತ್ತು ಇತರ ದಾಖಲೆಗಳ ಪ್ರತಿಯನ್ನು ಪೂರೈಸುವಂತೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ಕಾನೂನು ಕ್ರಮಕ್ಕೆ ಆದೇಶಿಸಿದರು.ಅಕ್ವಿಬ್ ಹುಸೇನ್, ಮುಜೀಬ್ ಹುಸೇನ್ ಗಟೂ, ಮುನೀಬ್ ಹುಸೇನ್ ಗಟೂ, ಉಮರ್ ಗುಲ್, ರಾಯ ರಸ್ಸೋಲ್, ಖಾಲಿದ್ ಬಶೀರ್ ಭಟ್ ಮತ್ತು ಬಶರತ್ ಅಲಿ ಅವರಿಗೆ 25 ಸಾವಿರ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ನ್ಯಾಯಾಲಯ ಜಾಮೀನು ನೀಡಿತು.

ಇದನ್ನೂ ಓದಿ: ಜೆಎನ್‌ಯು ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ ನಂತರ ತ್ವರಿತ ಕ್ರಮಕ್ಕೆ ಮುಂದಾದ ಕೇಂದ್ರ

'ಚಾರ್ಜ್‌ಶೀಟ್‌ಗಳನ್ನು ಪೂರೈಸಲು ನಾವು ಆದೇಶಿಸುತ್ತೇವೆ. ಇಂದು ಎಲ್ಲಾ ಆರೋಪಿಗಳಿಗೆ ಚಾರ್ಜ್‌ಶೀಟ್ ಪೂರೈಸಲಿ" ಎಂದು ಪಂಕಜ್ ಶರ್ಮಾ ಹೇಳಿದರು.ಈ ಪ್ರಕರಣದಲ್ಲಿ ಪ್ರಧಾನ ಆರೋಪಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರಿಗೆ ಈಗಾಗಲೇ ನ್ಯಾಯಾಲಯ ಜಾಮೀನು ನೀಡಿತ್ತು.

ಇದನ್ನೂ ಓದಿ: ಐಶೆ ಘೋಷ್ ಒಡೆದಿರುವ ತಲೆಯೊಂದಿಗೆ ಜೆಎನ್‌ಯು ಹೋರಾಟ ಮುನ್ನಡೆಸುತ್ತಿದ್ದಾರೆ- ಸಿಎಂ ಪಿಣರಾಯಿ ವಿಜಯನ್

ಈ ಹಿಂದೆ ಪೊಲೀಸರು ಸಲ್ಲಿಸಿದ್ದ ವಿವರವಾದ ಚಾರ್ಜ್‌ಶೀಟ್ ಅನ್ನು ಕಳೆದ ತಿಂಗಳು ನ್ಯಾಯಾಲಯ ಅಧ್ಯಯನ ಮಾಡಿದ್ದು, ಇದರಲ್ಲಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಇತರ ಎಂಟು ಮಂದಿ ಆರೋಪಿಗಳಾಗಿದ್ದಾರೆ.ಈ ಪ್ರಕರಣವು ಫೆಬ್ರವರಿ 9, 2016 ರಲ್ಲಿ ನಡೆದಿತ್ತು. ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಅವರ ಮೇಲೆ ಈ ಪ್ರಕರಣ ದಾಖಲಿಸಲಾಗಿತ್ತು 

124 ಎ (ದೇಶದ್ರೋಹ), 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು), 465 (ಖೋಟಾ), 471 (ಖೋಟಾ ದಾಖಲೆ ಬಳಕೆ), 143 (ಕಾನೂನುಬಾಹಿರವಾಗಿ ಸೇರುವುದಕ್ಕೆ ಶಿಕ್ಷೆ), 149 ( ಕಾನೂನುಬಾಹಿರ ಸಭೆ), 147 (ಗಲಭೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ವಿವಿಧ ಕಲಂಗಳ ಅಡಿಯಲ್ಲಿ ಈಗ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಜೆಎನ್‌ಯು ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ ನಂತರ ತ್ವರಿತ ಕ್ರಮಕ್ಕೆ ಮುಂದಾದ ಕೇಂದ್ರ

"ಚಾರ್ಜ್‌ಶೀಟ್‌ನ ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಮತ್ತು ವಿಷಯವನ್ನು ಪರಿಗಣಿಸಿದ ನಂತರ, ಇಲ್ಲಿ ಉಲ್ಲೇಖಿಸಲಾದ ಎಲ್ಲ ಆರೋಪಿಗಳನ್ನು ಅಪರಾಧದ ವಿಚಾರಣೆಯನ್ನು ಎದುರಿಸಲು ಕರೆಸಿಕೊಳ್ಳಲಾಗುತ್ತದೆ. ಆರೋಪಿತರಿಗೆ 15.03.2021 ಕ್ಕೆ ಸಮನ್ಸ್ ನೀಡಲಾಗುವುದು  ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸುಮಾರು 1,200 ಪುಟಗಳಿದ್ದು, ಈ ಆರೋಪಿಗಳ ಹೆಸರನ್ನು ಒಳಗೊಂಡಿದೆ. ಜೆಎನ್‌ಯು ಕ್ಯಾಂಪಸ್‌ನ ಸಬರಮತಿ ಧಾಬಾಗೆ ಬರಲು ಉಮರ್ ಖಾಲಿದ್ ಅವರು ಕನ್ಹಯ್ಯ ಕುಮಾರ್‌ಗೆ ಕಳುಹಿಸಿದ ಎಸ್‌ಎಂಎಸ್ ಪ್ರಾಥಮಿಕ ಸಾಕ್ಷ್ಯಗಳಲ್ಲಿ ಒಂದಾಗಿದೆ, ಇದನ್ನು ಪ್ರಾದೇಶಿಕ ವಿಧಿ ವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಆರ್‌ಎಫ್‌ಎಸ್ಎಲ್) ವಶಪಡಿಸಿಕೊಂಡಿದೆ. ಪ್ರತಿಭಟನೆಗೆ ಅನುಮತಿಯನ್ನು ವಿಶ್ವವಿದ್ಯಾಲಯ ಆಡಳಿತ ರದ್ದುಪಡಿಸಿದೆ ಮತ್ತು ಹೊಸ ಸ್ಥಳದ ವಿವರಗಳನ್ನು ಹೊಂದಿದೆ ಎಂದು ಎಸ್‌ಎಂಎಸ್ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Read More