Home> India
Advertisement

J&K encounter:ಪುಲ್ವಾಮಾ ದಾಳಿಯ ರೂವಾರಿ ಜಾಹಿದ್ ವಾನಿ ಸೇರಿದಂತೆ 5 ಉಗ್ರರು ಹತ

ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ, ಪುಲ್ವಾಮಾ ದಾಳಿಯ (Pulwama Attack) ರೂವಾರಿಯಾಗಿದ್ದ ಜೆಇಎಂನ ಉನ್ನತ ಕಮಾಂಡರ್ ಜಾಹಿದ್ ವಾನಿ ಸೇರಿದಂತೆ 4 ಜೆಇಎಂ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. 

J&K encounter:ಪುಲ್ವಾಮಾ ದಾಳಿಯ ರೂವಾರಿ ಜಾಹಿದ್ ವಾನಿ ಸೇರಿದಂತೆ 5 ಉಗ್ರರು ಹತ

ಶ್ರೀನಗರ: ಪುಲ್ವಾಮಾದ ನೈರಾ ಪ್ರದೇಶ ಮತ್ತು ಬುದ್ಗಾಮ್‌ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ (J&K encounter) 5 ಉಗ್ರರು ಹತರಾಗಿದ್ದಾರೆ.

ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ 2.34 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿ

ಪುಲ್ವಾಮಾದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಜೆಇಎಂ ಕಮಾಂಡರ್ ಭಯೋತ್ಪಾದಕ ಜಾಹಿದ್ ವಾನಿ ಸೇರಿದಂತೆ ಸಕ್ರಿಯ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೊಯ್ಬಾ (Let) ಮತ್ತು ಜೈಶ್-ಎ-ಮೊಹಮ್ಮದ್ (JeM) ನ ಐವರು ಭಯೋತ್ಪಾದಕರನ್ನು ರಾತ್ರೋರಾತ್ರಿ ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.

 

 

ಇದು ದೊಡ್ಡ ಯಶಸ್ಸು ಎಂದು ಕರೆದಿರುವ ಕಾಶ್ಮೀರ ಪೊಲೀಸರು (Kashmir Police) ಎನ್‌ಕೌಂಟರ್‌ಗಳ ಬಗ್ಗೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆಯಲ್ಲಿ ಕಳೆದ 12 ಗಂಟೆಗಳಲ್ಲಿ 5 ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

ಹತರಾದ ಉಗ್ರರಲ್ಲಿ ಜೆಇಎಂ ಕಮಾಂಡರ್ ಜಾಹಿದ್ ವಾನಿ ಮತ್ತು ಪಾಕಿಸ್ತಾನಿ ಭಯೋತ್ಪಾದಕರೂ (Terrorist) ಸೇರಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ. 

ಪುಲ್ವಾಮಾ ಜಿಲ್ಲೆಯ ನೈರಾ ಪ್ರದೇಶದಲ್ಲಿ ನಾಲ್ವರು ಭಯೋತ್ಪಾದಕರು ಮತ್ತು ಬದ್ಗಾಮ್‌ನ ಚ್ರಾರ್-ಇ-ಶರೀಫ್ ಪ್ರದೇಶದಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

ಜಾಹಿದ್ ಮಂಜೂರ್ ವಾನಿ:

ಜಾಹಿದ್ ಮಂಜೂರ್ ವಾನಿ ಹೆಸರಿನ ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಶ್ ಭಯೋತ್ಪಾದಕರ ಪೈಕಿ ಒಬ್ಬನಾಗಿದ್ದ. ದೇಶಕಂಡ ಘೋರ ಉಗ್ರ ದಾಳಿಗಳ ಸಾಲಿಗೆ ನಿಲ್ಲುವ ಪುಲ್ವಾಮಾ ದಾಳಿಯ ರೂವಾರಿ ಈ ಜಾಹಿದ್ ವಾನಿ (JEM commander Zahid Wani). ಫೆಬ್ರವರಿ 14, 2019 ರಂದು 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾದ ಲೆಟ್‌ಪುರ ಘಟನೆಯಲ್ಲಿ ಜಾಹಿದ್ ಭಾಗಿಯಾಗಿದ್ದ. 

ಇದನ್ನೂ ಓದಿ: ADR Report: ಶ್ರೀಮಂತ ಪಕ್ಷವಾಗುತ್ತಿರುವ ಬಿಜೆಪಿ; ಯಾವ ಪಕ್ಷಕ್ಕೆ ಎಷ್ಟು ಆಸ್ತಿ ಇದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More