Home> India
Advertisement

ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ; ಶೀಘ್ರದಲ್ಲೇ ಸಿಗಲಿದೆ ಈ ಸೇವೆ!

ಈಗಾಗಲೇ ಜಿಯೋ ಇನ್ಫೋಕಾಮ್ ವಿಮಾನಗಳಲ್ಲಿ ತನ್ನ ಡೇಟಾ ಸೇವೆಯನ್ನು ನೀಡಲು ಲೈಸನ್ಸ್ ಪಡೆಯಲು ಟೆಲಿಕಾಂ ಸಚಿವಾಲಯದಲ್ಲಿ ಅರ್ಜಿ ಸಲ್ಲಿಸಿದೆ. 

ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ; ಶೀಘ್ರದಲ್ಲೇ ಸಿಗಲಿದೆ ಈ ಸೇವೆ!

ನವದೆಹಲಿ: ಟೆಲಿಕಾಂ ಉದ್ಯಮದಲ್ಲಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಡೇಟಾ ಪ್ಯಾಕ್ ಮತ್ತು ಅನಿಯಮಿತ ಕರೆ ಸೌಲಭ್ಯಗಳನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಕಂಪನಿ ತನ್ನ ಗ್ರಾಹಕರಿಗೆ ಅಗ್ಗದ ಡೇಟಾ ಪ್ಯಾಕ್ ಮತ್ತು ಮುಕ್ತ ರಿಲಯನ್ಸ್ Jio ಬಳಕೆದಾರರಿಗೆ ಶೀಘ್ರದಲ್ಲೇ ಮತ್ತೊಂದು ಸೇವೆಯನ್ನು ಒದಗಿಸಲಿದೆ. 

ಈಗಾಗಲೇ ಜಿಯೋ ಇನ್ಫೋಕಾಮ್ ವಿಮಾನಗಳಲ್ಲಿ ತನ್ನ ಡೇಟಾ ಸೇವೆಯನ್ನು ನೀಡಲು ಲೈಸನ್ಸ್ ಪಡೆಯಲು ಟೆಲಿಕಾಂ ಸಚಿವಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಲೈಸನ್ಸ್ ಪಡೆದ ಬಳಿಕ ಭಾರತೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನಗಳಲ್ಲಿ ಜಿಯೋ ತನ್ನ ಸಂಪರ್ಕ ಮತ್ತು ಡೇಟಾ ಸೇವೆಯನ್ನು ಒದಗಿಸಲಿದೆ. ಇದರಿಂದಾಗಿ ನೀವು ವಿಮಾನದಲ್ಲಿಯೂ ಸಹ ನಿಮಂ ಫೇಸ್ಬುಕ್, ಟ್ವಿಟ್ಟರ್ ಖಾತೆಗಳನ್ನು ಬಳಕೆ ಮಾಡುವಂತಾಗಲಿದೆ.

ರಿಲಯನ್ಸ್ ಜಿಯೋದ 30 ಮಿಲಿಯನ್ ಚಂದಾದಾರು ಈ ಸೇವೆಯ ಪ್ರಯೋಜನ ಪಡೆಯಲಿದ್ದಾರೆ. ದೂರಸಂಪರ್ಕ ಇಲಾಖೆ ಪ್ರಕಾರ, ಜಿಯೋ ಅಷ್ಟೇ ಅಲ್ಲದೆ,  ಆರ್ಟಸ್(Ortus) ಕಮ್ಯುನಿಕೇಷನ್ಸ್, ಸ್ಟೇಷನ್ ಸ್ಯಾಟ್ಕಾಮ್ ಮತ್ತು ಕ್ಲೌಡ್ ಕಾಸ್ಟ್ ಡಿಜಿಟಲ್ ಕಂಪನಿಗಳೂ ಸಹ ಈ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಿವೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಜಿಯೋ ನಿರಾಕರಿಸಿದೆ.
 

Read More