Home> India
Advertisement

ಪುಲ್ವಾಮಾ ದಾಳಿ ವರದಿ ಮಾಡಿದ ಜೀ ನ್ಯೂಸ್, ಡಿಎನ್ಎ, ಸುಧೀರ್ ಚೌಧರಿ ಕುರಿತು ಪ್ರಸ್ತಾಪಿಸಿದ JeM ಮುಖವಾಣಿ

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾಧನೆ ಸಂಘಟನೆ ಜೈಶ್ ಇ ಮೊಹಮ್ಮದ್ ಸಂಘಟನೆ ಪಾತ್ರವಿರುವ ಬಗ್ಗೆ ವರದಿ ಮಾಡಿದ್ದಕ್ಕೆ ಆ ಸಂಘಟನೆ ತನ್ನ ಆನ್ ಲೈನ್ ಮುಖವಾಣಿ ಅಲ್ ಕಲಾಮ್ ನಲ್ಲಿ ಸುಧೀರ್ ಚೌಧರಿಯವರ ಡಿಎನ್ ಎ ಶೋ ಕುರಿತಾಗಿ ಪ್ರಸ್ತಾಪಿಸಿದೆ.

ಪುಲ್ವಾಮಾ ದಾಳಿ ವರದಿ ಮಾಡಿದ ಜೀ ನ್ಯೂಸ್, ಡಿಎನ್ಎ, ಸುಧೀರ್ ಚೌಧರಿ ಕುರಿತು ಪ್ರಸ್ತಾಪಿಸಿದ JeM ಮುಖವಾಣಿ

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾಧನೆ ಸಂಘಟನೆ ಜೈಶ್ ಇ ಮೊಹಮ್ಮದ್ ಸಂಘಟನೆ ಪಾತ್ರವಿರುವ ಬಗ್ಗೆ ವರದಿ ಮಾಡಿದ್ದಕ್ಕೆ ಆ ಸಂಘಟನೆ ತನ್ನ ಆನ್ ಲೈನ್ ಮುಖವಾಣಿ ಅಲ್ ಕಲಾಮ್ ನಲ್ಲಿ ಸುಧೀರ್ ಚೌಧರಿಯವರ ಡಿಎನ್ ಎ ಶೋ ಕುರಿತಾಗಿ ಪ್ರಸ್ತಾಪಿಸಿದೆ.

ಆನ್ಲೈನ್ ​​ಪತ್ರಿಕೆ ಅಲ್ ಖಲಾಮ್ ನಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ಈ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನದ ಕುರಿತಾದ ಸುಳ್ಳು ಮಾಹಿತಿಯನ್ನು ಹರಡಿರುವ ಕುರಿತಾಗಿ ಝೀ ನ್ಯೂಸ್ ಅನ್ನು ಟೀಕಿಸಿದೆ, ಭಾರತದ ಪ್ರೇಕ್ಷಕರ ಮುಂದೆ ಸುಳ್ಳು ಸುದ್ದಿಗಳನ್ನು ಬಿಂಬಿಸುವ ಮೂಲಕ ತಪ್ಪು ದಾರಿಗೆ ಎಳೆಯಲಾಗುತ್ತಿದೆ ಎಂದು ಅದು ಆರೋಪ ಮಾಡಿದೆ.

JeM ಮುಖವಾಣಿ ಈಗ ಜೀ ನ್ಯೂಸ್ ಹಾಗೂ ಡಿಎನ್ಎ ಶೋವನ್ನು ಉಲ್ಲೇಖಿಸಿರುವುದನ್ನು ನೋಡಿದಾಗ ಭಯೋತ್ಪಾದಕ ಸಂಘಟನೆ ಚಾನೆಲ್ ಮಾಡಿರುವ ರಾಷ್ಟ್ರೀಯತೆ ಮೂಲಕ ಮಾಡಿರುವ ಧೈರ್ಯಯುತ ವರದಿಯಿಂದಾಗಿ ಅದು ಒತ್ತಡಕ್ಕೆ ಒಳಗಾಗಿದೆ ಎನ್ನಲಾಗಿದೆ.

ಈ ಮೂಲಕ ಫೆಬ್ರುವರಿ 14 ರಂದು ಪುಲ್ವಾಮಾ ದಾಳಿಯ ಹೊಣೆಯ ಹೊತ್ತಿರುವ ಜೈಶ್ ಇ ಮೊಹಮ್ಮದ್ ನ ಮಸೂದ್ ಅಜರ್ ಅವರು ಜೀ ನ್ಯೂಸ್ ನ ವರದಿಗೆ ಹೆದರಿರುವುದೇಕೆ ಎನ್ನುವುದು ಈಗ ನಿಜಕ್ಕೂ ಪ್ರಶ್ನೆಯಾಗಿದೆ.

ಅಲ್ಲದೆ ಈ ನಿಷೇಧಿತ ಉಗ್ರ ಸಂಘಟನೆ ಪಾಕಿಸ್ತಾನದ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಜೀ ನ್ಯೂಸ್ ನ್ನು ಆರೋಪಿಸಿದೆ.ಅದರಲ್ಲೂ ಫೆಬ್ರುವರಿ 14 ರಂದು ಸಂಭವಿಸಿದ ಪುಲ್ವಾಮಾ ದಾಳಿಯ ಕುರಿತಾಗಿ ಜೀ ನ್ಯೂಸ್ ಮಾಡಿರುವ ವರದಿ ಕುರಿತಾಗಿ ಅದು ಕೆಂಗಣ್ಣು ಬಿರಿದೆ.   

ತನ್ನ ಆನ್ ಲೈನ್  ಪತ್ರಿಕೆಯಲ್ಲಿ Negative and Condemnable Face of the Indian Media,ಎನ್ನುವ ಶೀರ್ಷಿಕೆಯಡಿಯಲ್ಲಿನ ಲೇಖನದಲ್ಲಿ ಜೀ ನ್ಯೂಸ್ ನಲ್ಲಿ ಸುದೀರ್ ಚೌದರಿ ನಡೆಸಿಕೊಡುವ ಡಿಎನ್ಎ ಶೋನಲ್ಲಿ ಯುದ್ಧವೊಂದೇ ಭಾರತ ಮತ್ತು ಪಾಕ್ ನಡುವಿನ ಪ್ರಕ್ಷುಬ್ಧತೆಯನ್ನು ಹೋಗಲಾಡಿಸುವ ಮಾರ್ಗ ಎಂದು ಹೇಳಿರುವುದನ್ನು ಅದು ಪ್ರಸ್ತಾಪಿಸಿದೆ.

ಝೀ ನ್ಯೂಸ್ ಸಂಪಾದಕ ಮುಖ್ಯಸ್ಥ ಸುಧೀರ್ ಚೌಧರಿ ತಮ್ಮ ಶೋನಲ್ಲಿ  ಭಾರತ ಬಾಂಗ್ಲಾದೇಶದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು, ಅಲ್ಲದೆ ಪಾಕಿಸ್ತಾನ ವಿರೋಧಿ ಚಳವಳಿಯನ್ನು ಬಲೂಚಿಸ್ತಾನದಲ್ಲಿ ಬೆಂಬಲಿಸಿದೆ ಎಂದು ತಿಳಿಸಿದ್ದರು. ಅಲ್ಲದೆ ಭಾರತೀಯ ಭದ್ರತಾ ಪಡೆಗಳಿಗೆ ಪಾಕ್ ನಲ್ಲಿ ತಮ್ಮ ಕಾರ್ಯಾಚರಣೆ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಆ ಮೂಲಕ ಅಲ್ಲಿನ ಶಕ್ತಿಗಳನ್ನು ವಿಚಿಧ್ರಗೊಳಿಸಲು ಹೇಳಿದ್ದರು ಎನ್ನುವುದನ್ನು ಅಲ್ ಕಲಾಮ್ ತನ್ನ ಲೇಖನದಲ್ಲಿ ಪ್ರಸ್ತಾಪಿಸಿದೆ.

ಇತರ ದೇಶಗಳಲ್ಲಿ ಸ್ಪೋಟಕ ಸುದ್ದಿಗಳನ್ನು ಪ್ರಸಾರ ಮಾಡುವಾಗ ತನ್ನ ವಿವೇಚನೆಯನ್ನು ಬಳಸುತ್ತವೆ. ಆದರೆ ಭಾರತೀಯ ಮಾಧ್ಯಮಗಳು ಅದರಲ್ಲೂ ಜೀ ನ್ಯೂಸ್ ಭಾರತೀಯ ಪ್ರೆಕ್ಷಕರಿಗೆ ಯುದ್ಧದ ಉನ್ಮಾದವನ್ನು ಹುಟ್ಟುಹಾಕಲು ಆಧಾರರಹಿತ ಸುದ್ದಿ ಮಾಡಿದೆ ಎಂದು ಅದು ಆರೋಪಿಸಿದೆ.

ಪುಲ್ವಾಮಾ ದಾಳಿಯ ತಪ್ಪು ವರದಿ ಮತ್ತು ಅದರ ನಂತರದ ಬೆಳವಣಿಗೆಗಳ ಬಗ್ಗೆ ಭಾರತೀಯ ಮಾಧ್ಯಮ ವ್ಯಾಪಕವಾದ ಟೀಕೆಗಳು ಬಂದಿವೆ ಎಂದು  ಅಲ್ ಖಲಾಮ್ ಲೇಖನ ಹೇಳಿದೆ.

ಈಗ ಜೈಶ್ ಈ ಮೊಹಮದ್ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸುವ ವಿಚಾರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಬುಧವಾರದಂದು ಇದೆ.ಈ ಹಿನ್ನಲೆಯಲ್ಲಿ ಈಗ ಅದರ ಹೇಳಿಕೆ ಬಂದಿದೆ. ಈ ಹಿಂದೆ ಈ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸುವುದಕ್ಕೆ ಚೀನಾ ಅಡ್ಡಗಾಲು ಹಾಕಿದೆ.

ಜೈಶ್ ಇ ಮೊಹಮ್ಮದ್ ನ ಈ ಆನ್ ಲೈನ್ ಪತ್ರಿಕೆಯಲ್ಲಿ 250ಕ್ಕೂ ಅಧಿಕ  ಲೇಖನಗಳು ಇವೆ. ಇವುಗಳನ್ನು ಉಗ್ರ ಮಸೂದ್ ಅಜರ್ ಸಾದಿ ಎನ್ನುವ ಹೆಸರಿನಲ್ಲಿ ಬರೆಯುತ್ತಾನೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯವಾದಿ ನಿಲುವುಗಳಿಗಾಗಿ ಜೀ ನ್ಯೂಸ್ ಮೇಲೆ ಉಗ್ರ ಸಂಘಟನೆಗಳು ದಾಳಿ ನಡೆಸುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆ 2016 ರಲ್ಲಿ ಸರ್ಜಿಕಲ್ ಸ್ಟ್ರೈಕ್ ಲಷ್ಕರ್ ಎ ತೊಯ್ಬಾ ಮತ್ತು ಜಮಾತ್ ಉದ ದವಾ ಮುಖ್ಯಸ್ಥ ಹಫಿಜ್ ಸಹಿದ್  ಜೀ ನ್ಯೂಸ್ ಗೆ ಬೆದರಿಕೆಯನ್ನು ಒಡ್ಡಿದ್ದರು. 

ಆಗ ವೈರಲ್ ಆಗಿದ್ದ ವಿಡಿಯೋದಲ್ಲಿ  ಉಗ್ರ ಹಫಿಜ್ ಸಯಿದ್ ಜೀ ನ್ಯೂಸ್ ಗೆ ಸರ್ಜಿಕಲ್ ವಿಚಾರವಾಗಿ ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಬೆದರಿಕೆಯನ್ನು ಒಡ್ಡಿದ್ದರು.ಆಗ ಸರ್ಜಿಕಲ್ ಸ್ಟ್ರೈಕ್ ನ್ನು ಅವರು ನಾಟಕ ಎಂದು ಕರೆದಿದ್ದಲ್ಲದೆ ಉರಿ ದಾಳಿಯಲ್ಲಿ 19 ಸೈನಿಕರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಪ್ರಧಾನಿ ಮೇಲೆ ಒತ್ತಡವಿದ್ದ ಕಾರಣ ಈ ಸರ್ಜಿಕಲ್ ದಾಳಿಯನ್ನು ಮಾಡಲಾಗಿತ್ತು ಎಂದು ಅವರು ಹೇಳಿದ್ದರು.

ಈ ದಾಳಿಯ ಕುರಿತಾಗಿ ಹೇಗೆ ಸರ್ಜಿಕಲ್ ದಾಳಿ ಪಾಕ್ ನೆಲೆಗಳ ಮೇಲೆ ನಡೆಯಿತು ಎನ್ನುವ ವಿಚಾರವಾಗಿ ಸಿನಿಮಾವೊಂದನ್ನು ಹಿಂದಿಯಲ್ಲಿ ತಯಾರಿಸಲಾಗಿತ್ತು, ಇದು ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಭರ್ಜರಿ ಯಶಸ್ಸು ಕಂಡಿತ್ತು. 

 

Read More