Home> India
Advertisement

ರಾಜ್ಯದ ಎಲ್ಲ ರೈಲ್ವೆ ಮಾರ್ಗಗಳನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಿದ್ದ ಜಾಫರ್ ಶರೀಫ್

ಮಾಜಿ ಕೇಂದ್ರ ಸಚಿವ ಹಿರಿಯ ಕಾಂಗ್ರೆಸಿಗ ಸಿಕೆ ಜಾಫರ್ ಶರೀಫ್(85) ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಾಜ್ಯದ ಎಲ್ಲ ರೈಲ್ವೆ ಮಾರ್ಗಗಳನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಿದ್ದ ಜಾಫರ್ ಶರೀಫ್

ನವದೆಹಲಿ: ಮಾಜಿ ಕೇಂದ್ರ ಸಚಿವ ಹಿರಿಯ ಕಾಂಗ್ರೆಸಿಗ ಸಿಕೆ ಜಾಫರ್ ಶರೀಫ್(85) ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನವಂಬರ್ 3 1933 ರಲ್ಲಿ ಚಿತ್ರದುರ್ಗದ ಚಳ್ಳಕೇರಿಯಲ್ಲಿ ಜನಿಸಿದ ಜಾಫರ್ ಶರೀಫ್, ಮುಂದೆ ನಿಜಲಿಂಗಪ್ಪನವರ ನಾಯತ್ವದಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ಜೀವನ ಪ್ರವೇಶಿಸಿದರು.ಆದರೆ ಕಾಂಗ್ರೆಸ್ ಪಕ್ಷ ಇಬ್ಬಾಗವಾದಾಗ ಇಂದಿರಾ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಪಾರ್ಲಿಮೆಂಟಿನ ಸಂಸದರಾಗಿ ಅವರು ಸಂಸದರ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು.1971 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿ ನಂತರ ಏಳು ಬಾರಿಗೆ ಸಂಸತ್ತಿಗೆ ಪ್ರವೇಶಿಸಿದರು.

ಜಾಫರ್ ಶರೀಫ್ ಕೇವಲ ಹೈಸ್ಕೂಲ್ ವರೆಗೆ ಓದಿದ್ದರು ಕೂಡ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. ಇಂದಿರಾ ಗಾಂಧಿ ಪ್ರಧಾನಿ(1980-84)ಯಾಗಿದ್ದ ವೇಳೆ ಕೇಂದ್ರ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು, ಇದಲ್ಲದೆ ಅವರು ನೀರಾವರಿ, ಕಲ್ಲಿದ್ದಲು ಖಾತೆಯಂತಹ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ರೈಲ್ವೆ ಮಂತ್ರಿಯಾಗಿ ರಾಜ್ಯದಲ್ಲಿನ ರೈಲ್ವೆ ಮಾರ್ಗಗಳೆಲ್ಲವನ್ನು ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬೆಂಗಳೂರಿನಲ್ಲಿನ ವೀಲ್ ಮತ್ತು ಆಕ್ಸಲ್ ಪ್ಲಾಂಟ್ ಸ್ಥಾಪನೆಯಲ್ಲಿಯೂ ಶರೀಫ್ ಅವರ ಸೇವೆ ಮಹತ್ವವಾದದ್ದು

ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬ್ದುಲ್ ಕಲಾಮ್ ಅಜಾದ್ ರವರ 'ಇಂಡಿಯಾ ವಿನ್ಸ್ ಫ್ರೀಡಂ' ಪುಸ್ತಕದ ಉರ್ದು ಅನುವಾದವನ್ನು ಮಾಡಿದ್ದರು. ಈ ಪುಸ್ತಕ ಈಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವಂಬರ್ 28 ರಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಅವರಿಂದ ಬಿಡುಗಡೆಯಾಗಬೇಕಾಗಿತ್ತು ಆದರೆ ಇದಕ್ಕೆ ಇನ್ನು ಮೂರು ದಿನಗಳು ಬಾಕಿ ಇರುವಾಗಲೇ ಅವರ ನಿಧನವಾಗಿದ್ದು ನಿಜಕ್ಕೂ ದುಃಖಕರ ಸಂಗತಿ. 

 

Read More