Home> India
Advertisement

'ಸರ್ಕಾರ ರಚಿಸುವುದು ನಮ್ಮ ಜವಾಬ್ದಾರಿ ಅಲ್ಲ'; ಶರದ್ ಪವಾರ್ ಭೇಟಿ ಬಳಿಕ ಸಂಜಯ್ ರೌತ್

ಮಹಾರಾಷ್ಟ್ರದ ರಾಜಕೀಯ ನಾಟಕ ಈಗ ದೆಹಲಿಗೆ ಸ್ಥಳಾಂತರಗೊಂಡಿದೆ. ಮೊದಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾದರು. ಇದಾದ ನಂತರ ಶಿವಸೇನೆ ಸಂಸದ ಸಂಜಯ್ ರೌತ್ ಅವರು ಎನ್‌ಸಿಪಿ ಮುಖ್ಯಸ್ಥರನ್ನು ಭೇಟಿ ಮಾಡಲು ಅವರ ನಿವಾಸವನ್ನು ತಲುಪಿದರು.

'ಸರ್ಕಾರ ರಚಿಸುವುದು ನಮ್ಮ ಜವಾಬ್ದಾರಿ ಅಲ್ಲ'; ಶರದ್ ಪವಾರ್ ಭೇಟಿ ಬಳಿಕ ಸಂಜಯ್ ರೌತ್

ನವದೆಹಲಿ: ಮಹಾರಾಷ್ಟ್ರದ ರಾಜಕೀಯ ನಾಟಕ ಈಗ ದೆಹಲಿಗೆ ಸ್ಥಳಾಂತರಗೊಂಡಿದೆ. ಮೊದಲ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾದರು, ಇದಾದ ನಂತರ ಶಿವಸೇನೆ ಸಂಸದ ಸಂಜಯ್ ರೌತ್ ಅವರು ಎನ್‌ಸಿಪಿ ಮುಖ್ಯಸ್ಥರನ್ನು ಭೇಟಿ ಮಾಡಲು ತಮ್ಮ ನಿವಾಸವನ್ನು ತಲುಪಿದರು. ಶರದ್ ಪವಾರ್ ಅವರನ್ನು ಭೇಟಿಯಾದ ನಂತರ ಸಂಜಯ್ ರೌತ್ ಅವರು ಸರ್ಕಾರ ರಚಿಸುವುದು ತಮ್ಮ ಜವಾಬ್ದಾರಿಯಲ್ಲ, ಈ ಜವಾಬ್ದಾರಿಯನ್ನು ಹೊಂದಿರುವ ಜನರು ಓಡಿಹೋಗುತ್ತಿದ್ದಾರೆ ಎಂದು ಹೇಳಿದರು. ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ರಚನೆಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ರೌತ್ ಹೇಳಿದ್ದಾರೆ.

ಸರ್ಕಾರ ರಚಿಸುವ ಬಗ್ಗೆ ಸೋನಿಯಾ ಗಾಂಧಿ ಜೊತೆ ಚರ್ಚಿಸಿಲ್ಲ: ಪವಾರ್

ಸಂಜಯ್ ರೌತ್ ಅವರ ಜೊತೆಗಿನ ಭೇಟಿಗೂ ಮೊದಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸೋನಿಯಾ ಗಾಂಧಿಯನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ವಿವರಿಸಿದರು. ಆದರೆ, ಈ ಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದೂ ಅವರು ಹೇಳಿದರು. ಅವರು ಬಿಜೆಪಿಯೊಂದಿಗಿದ್ದಾರೆಯೇ ಅಥವಾ ಶಿವಸೇನೆ ಜೊತೆ ಸರ್ಕಾರ ರಚಿಸುತ್ತಾರೆಯೇ ಎಂದು ಪವಾರ್ ಅವರನ್ನು ಕೇಳಲಾಯಿತು? ಇದಕ್ಕೆ ಪ್ರತಿಕ್ರಿಯಿಸಿದ ಪವಾರ್ ತಾವು ಎಲ್ಲರೊಂದಿಗೂ ಇರುವುದಾಗಿ ತಿಳಿಸಿದರು. ಶರದ್ ಪವಾರ್ ಅವರ ಈ ಹೇಳಿಕೆಯ ನಂತರ, ರಾಜಕೀಯ ಕಾರಿಡಾರ್‌ನಲ್ಲಿ ಊಹಾಪೋಹಗಳು ಹೆಚ್ಚಾಗಿವೆ.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಎನ್‌ಸಿಪಿಯನ್ನು ಶ್ಲಾಘಿಸಿದರು. ಈ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಲು ಶರದ್ ಪವಾರ್ ನಿರಾಕರಿಸಿದರು.

ಏತನ್ಮಧ್ಯೆ, ಸಂಜಯ್ ರೌತ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಹೇಳಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ ಅವರು 2 ವರ್ಷಗಳ ಶಿವಸೇನೆ ಮತ್ತು 3 ವರ್ಷಗಳ ಬಿಜೆಪಿಯ ಮುಖ್ಯಮಂತ್ರಿಯನ್ನು ಹೊಂದಲು ಪ್ರಸ್ತಾಪಿಸಿದ್ದಾರೆ. ಇದನ್ನು ಬಿಜೆಪಿ ಒಪ್ಪಿದರೆ, ಶಿವಸೇನೆ ಕೂಡ ಇದನ್ನು ಒಪ್ಪುವುದನ್ನು ಪರಿಗಣಿಸಬಹುದು ಎಂದು ಅಥಾವಾಲೆ ಹೇಳಿಕೊಂಡಿದ್ದಾರೆ.

Read More