Home> India
Advertisement

ವಿವಾಹದ ಬಳಿಕ 450 ಕೋಟಿ ರೂ. ಮೌಲ್ಯದ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ ಈ ನವ ಜೋಡಿ

ವರ್ಲಿಯಲ್ಲಿರುವ ಈ ಕಟ್ಟಡವು ಸುಮಾರು 50,000 ಚದುರ ಅಡಿಗಳಷ್ಟು ವಿಸ್ತಾರವಾಗಿದೆ. 2012 ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಿರಮಲ್ ಈ ಕಟ್ಟಡವನ್ನು ಖರೀದಿಸಿದರು.

ವಿವಾಹದ ಬಳಿಕ 450 ಕೋಟಿ ರೂ. ಮೌಲ್ಯದ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ ಈ ನವ ಜೋಡಿ

ನವದೆಹಲಿ: ಇಟಲಿಯ ಲೇಕ್ ಕೊಮೊದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮುಂದಿನ ತಿಂಗಳು ಮುಂಬೈನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ಡಿಸೆಂಬರ್ 12 ರಂದು ಮುಂಬೈನಲ್ಲಿ ಮದುವೆಯಾಗಲಿದ್ದಾರೆ. ಮದುವೆಯ ನಂತರ, ಇಶಾ ಮತ್ತು ಆನಂದ್ ಅವರು ಮುಂಬೈಯಲ್ಲಿ ಒಂದು ಐಶಾರಾಮಿ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ ಎಂದು ವರದಿಯಾಗಿದೆ. ಮದುವೆಯ ನಂತರ ಈ ಹೊಸ ಜೋಡಿ ಮುಂಬೈನ ಪ್ರಸಿದ್ಧ ಗುಲಾಟಿ ಕಟ್ಟಡದಲ್ಲಿ ವಾಸಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

fallbacks

450 ಕೋಟಿ ರೂ.ಗೆ 'ಗುಲಾಟಿ' ಕಟ್ಟಡ ಖರೀದಿಸಿದ್ದ ಪಿರಮಲ್:
ಅಂಬಾನಿ ಮತ್ತು ಪಿರಾಮಾಲ್ ಕುಟುಂಬ ಮದುವೆಯ ಮುಂಚಿನ ಶಾಸ್ತ್ರಗಳನ್ನು  ಉದಯಪುರದಲ್ಲಿ ಮಾಡಲಿದ್ದಾರೆ. ಇಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸೇರಿಸಲು ಕಲಾವಿದರು ಮತ್ತು ಕುಶಲಕರ್ಮಿಗಳೊಂದಿಗೆ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಇಂಡಿಯಾ ಟುಡೇ ಸುದ್ದಿ ಪ್ರಕಾರ, ಮುಂಬೈಯ ವರ್ಲಿಯಲ್ಲಿರುವ ಈ ಕಟ್ಟಡದ ಹರಾಜು 2012 ರಲ್ಲಿ ನಡೆಯಿತು ಮತ್ತು ಆ ಸಮಯದಲ್ಲಿ ಪಿರಮಲ್ ಬೃಹತ್ ಪ್ರಮಾಣದ 450 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದರು. ಸ್ವಾತಿ ಮತ್ತು ಅಜಯ್ ಪಿರಮಲ್ ಈ ಕಟ್ಟಡವನ್ನು ಆನಂದ ಮತ್ತು ಇಶಾರವರ ಮದುವೆಯ ಉಡುಗೊರೆಯಾಗಿ ಕೊಡಲಿದ್ದಾರೆ ಎಂದು ವರದಿಯಾಗಿದೆ. ಈ ವರ್ಷದ ಸೆಪ್ಟೆಂಬರ್ನಲ್ಲಿ ಬಿಎಂಸಿ ಈ ಆಸ್ತಿಗೆ ಎಲ್ಲಾ ಕ್ಲಿಯರೆನ್ಸ್ ನೀಡಿದೆ.

fallbacks

'ಗುಲಾಟಿ' ಕಟ್ಟಡದ ವಿಶೇಷತೆ:
ವರ್ಲಿಯಲ್ಲಿರುವ ಈ ಕಟ್ಟಡವು ಸುಮಾರು 50,000 ಚದುರ ಅಡಿಗಳಷ್ಟು ವಿಸ್ತಾರವಾಗಿದೆ. ಕಟ್ಟಡವು ನೆಲಮಾಳಿಗೆಯಲ್ಲಿ ಹುಲ್ಲುಹಾಸು ಮತ್ತು ವಿವಿಧೋದ್ದೇಶ ಕೊಠಡಿಗಳನ್ನು ಹೊಂದಿದೆ. ಈ ಮನೆಯ ಇತರ ಮಹಡಿಗಳಲ್ಲಿ ಊಟದ ಕೋಣೆಗಳು, ಮಲಗುವ ಕೋಣೆಗಳು, ವೃತ್ತಾಕಾರದ ಅಧ್ಯಯನ ಕೊಠಡಿ ಮತ್ತು ಇತರ ಕೊಠಡಿಗಳಿವೆ. ಜೊತೆ ಒಂದು ಸೇವಕ ಕ್ವಾರ್ಟಸ್ ಸಹ ಇದೆ. ಮಾಹಿತಿಯ ಪ್ರಕಾರ, ಡಿಸೆಂಬರ್ 1 ರಂದು ಈ ಮನೆಯಲ್ಲಿ ಒಂದು ಪೂಜೆ ನಡೆಯಲಿದೆ. ಮದುವೆಯ ನಂತರ, ಆನಂದ್ ಮತ್ತು ಇಶಾ ಈ ಮನೆಗೆ ಹೋಗುತ್ತಾರೆ. ಸದ್ಯ ಕಟ್ಟಡದಲ್ಲಿ ಇಂಟೀರಿಯರ್ ಕೆಲಸ ನಡೆಯುತ್ತಿದೆ. ಈ ಬಂಗಲೆಯಿಂದ ಅರಬ್ಬೀ ಸಮುದ್ರವು ಸ್ಪಷ್ಟವಾಗಿ ಗೋಚರಿಸುತ್ತದೆ.

Read More