Home> India
Advertisement

INX ಮೀಡಿಯಾ: ಸಿಬಿಐ ಪ್ರಕರಣದಲ್ಲಿ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ಇಂದು ಪಿ. ಚಿದಂಬರಂ

ಇಂದು, ಚಿದಂಬರಂ ಅವರ 4 ದಿನಗಳ ಹೆಚ್ಚುವರಿ ಸಿಬಿಐ ರಿಮಾಂಡ್ ಕೊನೆಗೊಳ್ಳುತ್ತಿದೆ.

INX ಮೀಡಿಯಾ: ಸಿಬಿಐ ಪ್ರಕರಣದಲ್ಲಿ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ಇಂದು ಪಿ. ಚಿದಂಬರಂ

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಇಂದು ರೋಸ್ ಅವೆನ್ಯೂ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಮಧ್ಯಾಹ್ನದ ನಂತರ, ಸಿಬಿಐ ನ್ಯಾಯಾಲಯದಲ್ಲಿ ಪಿ.ಚಿದಂಬರಂ ಅವರನ್ನು ಹಾಜರುಪಡಿಸುವ ಸಾಧ್ಯತೆ ಇದೆ. ವಾಸ್ತವವಾಗಿ, ಪಿ. ಚಿದಂಬರಂ ಅವರ 4 ದಿನಗಳ ಹೆಚ್ಚುವರಿ ಸಿಬಿಐ ರಿಮಾಂಡ್ ಇಂದು ಅಂತ್ಯಗೊಳ್ಳುತ್ತಿದೆ. 

ಗುರುವಾರ, ಇಡಿ ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದ್ದರು. ಸೆಪ್ಟೆಂಬರ್ 5 ರಂದು ನ್ಯಾಯಾಲಯ ತನ್ನ ತೀರ್ಪು ನೀಡಲಿದ್ದು, ಅಲ್ಲಿಯವರೆಗೆ ಚಿದಂಬರಂ ಅವರ ಬಂಧನದ ಮಧ್ಯಂತರ ತಡೆ ಮುಂದುವರಿಯಲಿದೆ. 3 ದಿನಗಳಲ್ಲಿ ಪ್ರತಿಲೇಖನವನ್ನು ಸಲ್ಲಿಸುವಂತೆ ನ್ಯಾಯಾಲಯ ಜಾರಿ ನಿರ್ದೇಶನಾಲಯವನ್ನು ಕೇಳಿದೆ.

ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ, ಇಡಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಚಿದಂಬರಂಗೆ ಮುಂಗಡ ಜಾಮೀನು ನೀಡಿದರೆ, ಅದು ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದರು. ಏಕೆಂದರೆ ಇದು ವಿಜಯ್ ಮಲ್ಯ, ಮೆಹುಲ್ ಚೌಕಿ, ನೀರವ್ ಮೋದಿ, ಶರದಾ ಚಿಟ್ ಫಂಡ್, ಟೆರರ್ ಫಂಡಿಂಗ್ ಪ್ರಕರಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ತನಿಖೆ ಹೇಗೆ ನಡೆಯಬೇಕು ಎಂಬುದಕ್ಕೆ ಪುರಾವೆಗಳನ್ನು ತೋರಿಸದೆ ಬಂಧನ ವಿಚಾರಣೆಯ ಬೇಡಿಕೆಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರೋಧಿಸಿದರು, ಅಲ್ಲದೆ ಆರೋಪಿಗಳಿಗೆ ಸಾಕ್ಷ್ಯವನ್ನು ತೋರಿಸಲು, ಉಳಿದ ಪುರಾವೆಗಳನ್ನು ಅಳಿಸಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದರು.

ತುಷಾರ್ ಮೆಹ್ತಾ ಅವರು ತನಿಖೆಯನ್ನು ಹೇಗೆ ಮುಂದುವರೆಸುವುದು ಎಂಬುದು ಸಂಪೂರ್ಣವಾಗಿ ಏಜೆನ್ಸಿಯ ಹಕ್ಕು ಎಂದು ಹೇಳಿದರು. ಪ್ರಕರಣದ ವಿಷಯದಲ್ಲಿ, ಯಾವ ಹಂತದಲ್ಲಿ ಪುರಾವೆಗಳನ್ನು ಬಹಿರಂಗಪಡಿಸಬೇಕು ಎಂಬುದನ್ನು  ಸಂಸ್ಥೆ ನಿರ್ಧರಿಸುತ್ತದೆ. ಎಲ್ಲಾ ಸಾಕ್ಷ್ಯಗಳು, ಸಾಕ್ಷಿಗಳನ್ನು ಬಂಧಿಸುವ ಮೊದಲು ಆರೋಪಿಗಳ ಮುಂದೆ ಇಡಲಾಗಿದ್ದರೆ, ಅದು ಆರೋಪಿಗಳಿಗೆ ಸಾಕ್ಷ್ಯಗಳನ್ನು ಹಾಳುಮಾಡಲು ಮತ್ತು ಹಣದ ಹಾದಿಯ ಮೂಲಕ ಅದನ್ನು ಕೊನೆಗೊಳಿಸಲು ಅನುವು ಮಾಡಿಕೊಡುತ್ತದೆ. ಪಿ.ಚಿದಂಬರಂ ಅವರ ವಕೀಲ ಕಪಿಲ್ ಸಿಬಲ್ ಹೇಳುತ್ತಾರೆ ಅಪರಾಧದ ತೀವ್ರತೆಯು 'ವ್ಯಕ್ತಿನಿಷ್ಠ ಪದ'. ಪಿಎಂಎಲ್‌ಎ ಅಡಿಯಲ್ಲಿರುವ ಪ್ರಕರಣಗಳು ಅವುಗಳ ವಿಷಯದಲ್ಲಿ ಗಂಭೀರವಾಗಿರುವುದಿಲ್ಲ, ಆದರೆ ವಾಸ್ತವವೆಂದರೆ ಈ ದೇಶದ ನ್ಯಾಯಾಲಯಗಳು ಆರ್ಥಿಕ ಅಪರಾಧವನ್ನು ಗಂಭೀರವಾಗಿ ಪರಿಗಣಿಸುತ್ತಿವೆ. 

ವಾಸ್ತವವಾಗಿ, ಸಿಆರ್ಪಿಸಿ ಪ್ರಕಾರ 7 ವರ್ಷಗಳಿಗಿಂತ ಕಡಿಮೆ ಶಿಕ್ಷೆ ವಿಧಿಸುವ ಅಪರಾಧವನ್ನು ಕಡಿಮೆ ಗಂಭೀರವೆಂದು ಪರಿಗಣಿಸಲಾಗಿದೆ ಎಂದು ಸಿಬಲ್ ಬುಧವಾರ ವಿಚಾರಣೆಯ ಸಮಯದಲ್ಲಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಅಪರಾಧವು ದೇಶದ ಆರ್ಥಿಕತೆಗೆ ವಿರುದ್ಧವಾಗಿದೆ ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ. ಅಂತಹ ಪ್ರಕರಣಗಳಲ್ಲಿ ಶಿಕ್ಷೆಯ ಅವಕಾಶ ಏನೇ ಇರಲಿ, ಸುಪ್ರೀಂ ಕೋರ್ಟ್ ಯಾವಾಗಲೂ ಆರ್ಥಿಕ ಅಪರಾಧವನ್ನು ಗಂಭೀರ ಅಪರಾಧವೆಂದು ಪರಿಗಣಿಸುತ್ತದೆ.
 

Read More