Home> India
Advertisement

ರೈಲು ಪ್ರಯಾಣಿಕರೇ ಇನ್ಮುಂದೆ ನೀವು ಈ ಕೆಲಸಕ್ಕೂ ಶುಲ್ಕ ನೀಡಬೇಕು

ಒಂದು ವೇಳೆ ನೀವು ದೇಶದ ಈ ನಾಲ್ಕು ಸ್ಟೇಷನ್ ಗಳ ಮುಖಾಂತರ ಪ್ರಯಾಣ ಬೆಳೆಸುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ ಇನ್ಮುಂದೆ ಈ ಸ್ಟೇಷನ್ ಗಳಲ್ಲಿ ಟ್ರೈನ್ ಹಿಡಿಯಲು ಹಾಗೂ ಟ್ರೈನ್ ನಿಂದ ಇಳಿಯಲೂ ಕೂಡ ನೀವು ಶುಲ್ಕ ನೀಡಬೇಕಾಗಲಿದೆ.

ರೈಲು ಪ್ರಯಾಣಿಕರೇ ಇನ್ಮುಂದೆ ನೀವು ಈ ಕೆಲಸಕ್ಕೂ ಶುಲ್ಕ ನೀಡಬೇಕು

ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ಹೊಸವರ್ಷಕ್ಕೆ ಕಾಲಿಡಲಿದ್ದೇವೆ. ಆದರೆ, ಅದಕ್ಕೂ ಮುನ್ನವೇ ಕೇಂದ್ರ ರೇಲ್ವೆ ಇಲಾಖೆ ತನ್ನ ಗ್ರಾಹಕರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ. ರೇಲ್ವೆ ಇಲಾಖೆ ಜಾರಿಗೊಳಿಸಿರುವ ಹೊಸ ಸೂಚನೆಯ ಮೇರೆಗೆ ದೇಶದ ನಾಲ್ಕು ಪ್ರಮುಖ ಸ್ಟೇಷನ್ ಗಳಾದ ನಾಗ್ಪುರ್, ಅಮೃತ್ ಸರ್, ಗ್ವಾಲಿಯರ್ ಹಾಗೂ ಸಾಬರಮತಿ ಸ್ಟೇಷನ್ ಗಳಿಂದ ಟ್ರೈನ್ ಪ್ರಯಾಣ ಬೆಳೆಸುವ ಅಥವಾ ಈ ಸ್ಟೇಷನ್ ಗಳಲ್ಲಿ ಇಳಿಯುವ ಪ್ರವಾಸಿಗರು ಹೆಚ್ಚೂವರಿ ಶುಲ್ಕ ನೀಡಬೇಕಾಗಲಿದೆ.

ಗ್ವಾಲಿಯರ್, ಅಮೃತ್ ಸರ್, ನಾಗ್ಪುರ್ ಹಾಗೂ ಸಾಬರಮತಿ ಈ ನಾಲ್ಕೂ ಸ್ಟೇಷನ್ ಗಳನ್ನು ನವೀಕರಣ ಕಾರ್ಯ ನಡೆಸಲು ಕೇಂದ್ರ ಸರ್ಕಾರ ಮುಂದಾಗಿರುವ ಕಾರಣ ಈ ಹೆಚ್ಚುವರಿ ಶುಲ್ಕವನ್ನು ಪ್ರಯಾಣಿಕರ ಮೇಲೆ ವಿಧಿಸಲಾಗುತ್ತಿದೆ ಎನ್ನಲಾಗಿದೆ. ಪ್ರೈವೇಟ್ ಪಬ್ಲಿಕ್ ಪಾರ್ಟ್ನರ್ ಶಿಪ್ ಯೋಜನೆಯಡಿ ಈ ನಾಲ್ಕೂ ಸ್ಟೇಷನ್ ಗಳನ್ನು ನವೀಕರಿಸಲಾಗುತ್ತಿದ್ದು, ಬಳಿಕ ಇವುಗಳನ್ನು ಮಾಡರ್ನ್ ರೇಲ್ವೆ ಸ್ಟೇಷನ್ ಗಳನ್ನಾಗಿ ಮಾರ್ಪಡಿಸಲಾಗುತ್ತಿದೆ.

ಫೆಬ್ರುವರಿ 2020ರಲ್ಲಿ ಈ ಎಲ್ಲ ಸ್ಟೇಷನ್ ಗಳ ನವೀಕರಣಕ್ಕಾಗಿ ಟೆಂಡರ್ ಹೊರಡಿಸಲಾಗುತ್ತಿದೆ. ಈ ಎಲ್ಲ ಸ್ಟೇಷನ್ ಗಳ ನವೀಕರಣಕ್ಕಾಗಿ ಸುಮಾರು 1037 ಕೋಟಿ ರೂ.ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಈ ನವೀಕರಣ ಕಾರ್ಯ ಹಸ್ತಾಂತರಿಸಲು ಭಾರತೀಯ ರೇಲ್ವೆ ವಿಭಾಗ ಡಿಸೆಂಬರ್ 6 ರಂದು RQAFಗೆ ಬಿಡ್ಡಿಂಗ್ ಆಹ್ವಾನಿಸಿತ್ತು. ಈ ಬಿಡ್ಡಿಂಗ್ ಅನುಸಾರ ನಾಗ್ಪುರ್ ರೈಲು ನಿಲ್ದಾಣದ ನವೀಕರಣಕ್ಕಾಗಿ ಸುಮಾರು 3 72 ಕೋಟಿ ರೂ., ಗ್ವಾಲಿಯರ್ ಗಾಗಿ ಸುಮಾರು 240 ಕೋಟಿ ರೂ., ಅಮೃತ್ಸರ್ ಗಾಗಿ 300 ಕೋಟಿ ರೂ. ಹಾಗೂ ಸಾಬರಮತಿ ರೇಲ್ವೆ ನಿಲ್ದಾಣಕ್ಕೆ 125ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಭಾರತೀಯ ರೈಲು ಇಲಾಖೆ ದೇಶದ ಸುಮಾರು 50 ರೈಲು ನಿಲ್ದಾಣಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ಘೋಷಿಸಿತ್ತು.

Read More