Home> India
Advertisement

ಸಿಕ್ಕಿಂನಲ್ಲಿ ಭಾರೀ ಹಿಮಪಾತ; 2,500 ಜನರ ರಕ್ಷಣೆ

ಸಿಕ್ಕಿಂನಲ್ಲಿ ಭಾರೀ ಹಿಮಪಾತದಿಂದಾಗಿ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಸಿಲುಕಿದ್ದ 2,500 ಜನರನ್ನು ರಕ್ಷಣಾ ಪಡೆ ರಕ್ಷಿಸಿದೆ.

ಸಿಕ್ಕಿಂನಲ್ಲಿ ಭಾರೀ ಹಿಮಪಾತ; 2,500 ಜನರ ರಕ್ಷಣೆ

ನವದೆಹಲಿ: ಸಿಕ್ಕಿಂನ ಗ್ಯಾಂಗ್ಟಕ್ ಬಳಿಯ ನಾಥು ಲಾ ಪ್ರದೇಶದಲ್ಲಿ ಕಳೆದ ರಾತ್ರಿ ಬಿದ್ದ ಭಾರೀ ಹಿಮಪಾತದಿಂದಾಗಿ 400ಕ್ಕೂ ಹೆಚ್ಚು ವಾಹನಗಳಲ್ಲಿ ಸಿಲುಕಿದ್ದ 2,500ಕ್ಕೂ ಹೆಚ್ಚು ಮಂದಿಯನ್ನು ಭಾರತೀಯ ಸೇನಾ ಪಡೆ ರಕ್ಷಿಸಿದೆ. 

ಈ ಬಗ್ಗೆ ಭಾರತೀಯ ಸೇನಾ ಪಡೆ ಟ್ವೀಟ್ ಮಾಡಿದ್ದು, "ಭಾರೀ ಹಿಮಪಾತದಿಂದಾಗಿ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಸಿಲುಕಿದ್ದ 2,500 ಜನರನ್ನು ರಕ್ಷಣಾ ಪಡೆ ರಕ್ಷಿಸಿದೆ. ಅವರಿಗೆ ಅವರಿಗೆ ಆಹಾರ, ವಸತಿ ಮತ್ತು ವೈದ್ಯಕೀಯ ನೆರವನ್ನೂ ಒದಗಿಸಲಾಗಿದೆ" ಎಂದು ತಿಳಿಸಿದೆ. 

ಪೂರ್ವ ಸಿಕ್ಕಿಂ ಜಿಲ್ಲೆಯ ನಾಥು ಲಾ ಒಂದು ಪರ್ವತ ಮಾರ್ಗವಾಗಿದ್ದು, ಸಮುದ್ರ ಮಟ್ಟಕ್ಕಿಂತ ಸರಾಸರಿ 4,310 ಮೀ (14,140 ಅಡಿ) ಎತ್ತರದಲ್ಲಿದೆ. ಗ್ಯಾಂಗ್ಟಕ್ನಲ್ಲಿ ಪರವಾನಗಿ ಪಡೆದ ಬಳಿಕ ಈ ಪ್ರದೇಶಕ್ಕೆ ಭಾರತೀಯರು ಮಾತ್ರ ಪ್ರವೇಶಿಸಬಹುದು. 

ಸಾಮಾನ್ಯವಾಗಿ ಸಿಕ್ಕಿಂನಲ್ಲಿ ಜನವರಿಯಲ್ಲಿ ಹಿಮಪಾತವಾಗುತ್ತದೆ. ಆದರೆ ಈ ಬಾರಿ ಡಿಸೆಂಬರ್'ನಲ್ಲಿಯೇ ಆಗಿರುವುದು ಪ್ರವಾಸಿಗರು ಪರದಾಡುವಂತೆ ಮಾಡಿದೆ. 

Read More