Home> India
Advertisement

Indian Air Force Recruitment 2021: ವಾಯುಸೇನೆಯಲ್ಲಿ 10, 12 ನೇ ತರಗತಿ ಪಾಸ್ ಆದವರಿಗೆ Job ಅವಕಾಶ

Indian Air Force Recruitment 2021: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಎಲ್ಲಾ ವಿಶೇಷ ವಿಷಯಗಳನ್ನು ಎಚ್ಚರಿಕೆಯಿಂದ ಓದಬೇಕು.

Indian Air Force Recruitment 2021: ವಾಯುಸೇನೆಯಲ್ಲಿ 10, 12 ನೇ ತರಗತಿ ಪಾಸ್ ಆದವರಿಗೆ Job ಅವಕಾಶ

Indian Air Force Recruitment 2021: ನಾಳೆ ಮಾರ್ಚ್ 13, ಭಾರತೀಯ ವಾಯುಸೇನೆಯಲ್ಲಿ ಗ್ರೂಪ್ ಸಿ ಹುದ್ದೆಗಳಿಗೆ (Indian Air Force Recruitment 2021) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (Indian Air Force Recruitment 2021) ಭಾರತೀಯ ವಾಯುಪಡೆಯ ಅಧಿಕೃತ ವೆಬ್‌ಸೈಟ್, airmenselection.cdac.in ಗೆ ಭೇಟಿ ನೀಡಿ ಶೀಘ್ರದಲ್ಲೇ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ (Indian Air Force Recruitment 2021) ಪ್ರಕ್ರಿಯೆಯಡಿ 255 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದಲ್ಲದೆ, ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ಅರ್ಜಿಯನ್ನು ಡೌನ್‌ಲೋಡ್ ಮಾಡಬಹುದು http://www.davp.nic.in/WriteReadData/ADS/eng_10801_19_2021b.pdf. ಅಲ್ಲದೆ, https://airmenselection.cdac.in/CASB/# ಈ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಗಳನ್ನು ಸಹ ನೀವು ನೋಡಬಹುದು. ಐಎಎಫ್ (IAF) ಪ್ರಧಾನ ಕಚೇರಿ ಸೌತ್ ವೆಸ್ಟರ್ನ್ ಏರ್ ಕಮಾಂಡ್ ಐಎಎಫ್ ಎಒಆರ್ ಅಡಿಯಲ್ಲಿ ಗ್ರೂಪ್ ಸಿ ನಾಗರಿಕ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸುತ್ತದೆ.

ಇದನ್ನೂ ಓದಿ - Railway Recruitment 2021: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ

ಭಾರತೀಯ ವಾಯುಪಡೆಯ ನೇಮಕಾತಿ 2021 ರ ಪ್ರಮುಖ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: 12 ಫೆಬ್ರವರಿ 2021
  • ಅರ್ಜಿಯ ಕೊನೆಯ ದಿನಾಂಕ: 13 ಮಾರ್ಚ್ 2021 (ಉದ್ಯೋಗ ಸುದ್ದಿಗಳಲ್ಲಿ ಜಾಹೀರಾತು ಪ್ರಕಟವಾದ ದಿನಾಂಕದಿಂದ 30 ದಿನಗಳಲ್ಲಿ).

ಭಾರತೀಯ ವಾಯುಪಡೆಯ ನೇಮಕಾತಿಗೆ ಅರ್ಹತಾ ಮಾನದಂಡ 2021 :
ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಅಭ್ಯರ್ಥಿಗಳು 10 ನೇ ತರಗತಿ, 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಭಾರತೀಯ ವಾಯುಪಡೆಯ ನೇಮಕಾತಿ 2021 ರ ವಯಸ್ಸಿನ ಮಿತಿ:
ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 25 ವರ್ಷದೊಳಗಿರಬೇಕು.

ಇದನ್ನೂ ಓದಿ - HAL Recruitment 2021: HALನಲ್ಲಿ ಬಂಪರ್ ಉದ್ಯೋಗಾವಕಾಶ, ಶೀಘ್ರದಲ್ಲೇ ಅಪ್ಲೈ ಮಾಡಿ

ಭಾರತೀಯ ವಾಯುಪಡೆಯ ನೇಮಕಾತಿ 2021 ರ ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಬೇಕಾಗುತ್ತದೆ. ಲಿಖಿತ ಪರೀಕ್ಷೆಯು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿರುತ್ತದೆ.

ಭಾರತೀಯ ವಾಯುಪಡೆಯ ನೇಮಕಾತಿ 2021 ಗೆ ಹೇಗೆ ಅರ್ಜಿ ಸಲ್ಲಿಸಬೇಕು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು  (Indian Air Force Recruitment 2021) ಅರ್ಜಿಯನ್ನು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋದೊಂದಿಗೆ ಅಧಿಸೂಚನೆಯಲ್ಲಿ ನಮೂದಿಸಿದ ನಮೂನೆಯಲ್ಲಿ ಕಳುಹಿಸಬೇಕು. ಇದರೊಂದಿಗೆ ಶಿಕ್ಷಣದ ಅರ್ಹತೆ, ವಯಸ್ಸು, ನಿವಾಸ ಪ್ರಮಾಣಪತ್ರ, ಅನುಭವ ಮತ್ತು ಜಾತಿ ಪ್ರಮಾಣಪತ್ರ ಇತ್ಯಾದಿ ಎಲ್ಲ ದಾಖಲೆಗಳನ್ನು ಸರಿಯಾಗಿ ಸ್ವಯಂ ದೃಢೀಕರಿಸಿ ಅದನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More