Home> India
Advertisement

Covid-19 Cases in India: ಕರೋನಾವೈರಸ್ ಹರಡುವಿಕೆಯಲ್ಲಿ ಅಮೇರಿಕಾ ವಿರುದ್ಧ ಭಾರತ ಹೊಸ ದಾಖಲೆ

ಭಾರತದಲ್ಲಿ ಕೋವಿಡ್ -19ರ ಹೊಸ ಪ್ರಕರಣಗಳು ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 3 ಲಕ್ಷ ದಾಟಿದೆ. ಇದು ಅಮೇರಿಕಾದ ದೈನಂದಿನ ದಾಖಲೆಗಳ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು ಜನವರಿ 8 ರಂದು ಅಮೇರಿಕಾದಲ್ಲಿ 3,07,581 ಹೊಸ ಪ್ರಕರಣಗಳು ದಾಖಲಾಗಿದ್ದವು.

Covid-19 Cases in India: ಕರೋನಾವೈರಸ್ ಹರಡುವಿಕೆಯಲ್ಲಿ ಅಮೇರಿಕಾ ವಿರುದ್ಧ ಭಾರತ ಹೊಸ ದಾಖಲೆ

ನವದೆಹಲಿ: ಭಾರತದಲ್ಲಿ ಕರೋನಾವೈರಸ್ (CoronaVirus) ಹೊಸ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಏತನ್ಮಧ್ಯೆ, ಭಾರತದಲ್ಲಿ ಕೋವಿಡ್ -19ರ (Covid -19) ಹೊಸ ಪ್ರಕರಣಗಳು ಎಲ್ಲಾ ದಾಖಲೆಗಳನ್ನು ಮುರಿದಿವೆ. ಮತ್ತು ಸುಮಾರು 3.16 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ವಿಶ್ವದಲ್ಲೇ ದೇಶವೊಂದರಲ್ಲಿ ಕಂಡುಬಂದ ಅತಿ ಹೆಚ್ಚು ಪ್ರಕರಣಗಳು ಎಂಬ ದಾಖಲೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3.16 ಹೊಸ ಕರೋನಾವೈರಸ್ (Coronavirus)  ಪೀಡಿತರ ಪ್ರಕರಣಗಳು ಮತ್ತು 2102 ಸಾವುಗಳು ಕಂಡುಬಂದಿವೆ. ವರ್ಲಡೋ ಮೀಟರ್ ವೆಬ್ ಸೈಟ್  ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,15,925 ಜನರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ.‌ ಇದೇ ವೇಳೆ 2102 ಜನರು ಸಾವನ್ನಪ್ಪಿದ್ದಾರೆ. ಇದರಿಂದ ಭಾರತದಲ್ಲಿ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 159 ಮಿಲಿಯನ್ ಮೀರಿದೆ. 1.84 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಕೋವಿಡ್ -19ರ ಸಕ್ರಿಯ ರೋಗಿಗಳ ಸಂಖ್ಯೆ 22.9 ಲಕ್ಷಕ್ಕೂ ಹೆಚ್ಚಾಗಿದೆ.

ಇದನ್ನೂ ಓದಿ -  Corona Vaccine- Covishield ಲಸಿಕೆಯ ದರ ನಿಗದಿಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್

ಕಳೆದ 24 ಗಂಟೆ ಭಾರತದಲ್ಲಿ ದಾಖಲಾಗಿರುವ ಕರೋನಾ ಸೋಂಕಿತರ ಹೊಸ ಪ್ರಕರಣಗಳು ಅಮೆರಿಕಾದ (America) ದಾಖಲೆಯನ್ನು ಮುರಿದಿವೆ.‌ ಇದಲ್ಲದೆ ಭಾರತದಲ್ಲಿ ಕೋವಿಡ್ -19ರ ಹೊಸ ಪ್ರಕರಣಗಳು ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 3 ಲಕ್ಷ ದಾಟಿದೆ. ಇದು ಅಮೇರಿಕಾದ ದೈನಂದಿನ ದಾಖಲೆಗಳ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು ಜನವರಿ 8 ರಂದು ಅಮೇರಿಕಾದಲ್ಲಿ 3,07,581 ಹೊಸ ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ - Oral Symptoms of Covid: ನಿಮ್ಮ ಬಾಯಿಯಲ್ಲಿ ಕಾಣುವ ಈ ಲಕ್ಷಣ ಕೋವಿಡ್ -19 ಸಂಕೇತವಾಗಿರಬಹುದು, ತಕ್ಷಣವೇ ಟೆಸ್ಟ್ ಮಾಡಿ!

ಅಮೆರಿಕಕ್ಕಿಂತ ಭಾರತದಲ್ಲಿ ವೇಗವಾಗಿ ಹರಡುತ್ತಿರುವ ಕರೋನಾ: 
ನಿನ್ನೆ ಮಾತ್ರವಲ್ಲ, ಅಥವಾ ಕಳೆದ‌ 24 ಗಂಟೆಯಲ್ಲಿ ಮಾತ್ರವಲ್ಲ,  ಇತ್ತೀಚಿಗೆ ಅಮೇರಿಕಾಕ್ಕಿಂತ ಭಾರತದಲ್ಲೇ ಕರೋನಾ ವೇಗವಾಗಿ ಹರಡುತ್ತಿದೆ. ದಿನವೊಂದರಲ್ಲಿ 1 ಲಕ್ಷ ಪ್ರಕರಣಗಳಿಂದ 3 ಲಕ್ಷ ಪ್ರಕರಣಗಳಾಗಲು ಭಾರತ ಕೇವಲ 17 ದಿನಗಳನ್ನು ತೆಗೆದುಕೊಂಡಿದೆ. ಈ ಅವಧಿಯಲ್ಲಿ, ದೈನಂದಿನ ಪ್ರಕರಣಗಳು ಶೇಕಡಾ 6.76 ರಷ್ಟು ಹೆಚ್ಚಾಗಿವೆ. 1 ಲಕ್ಷದಿಂದ 3 ಲಕ್ಷ ಪ್ರಕರಣಗಳು ಬರಲು ಅಮೇರಿಕಾ 67 ದಿನಗಳನ್ನು ತೆಗೆದುಕೊಂಡಿತ್ತು. ಮತ್ತು ಈ ಅವಧಿಯಲ್ಲಿ, ಪ್ರಕರಣಗಳಲ್ಲಿ ದೈನಂದಿನ ಹೆಚ್ಚಳದ ಪ್ರಮಾಣವು 1.58 ಪ್ರತಿಶತದಷ್ಟಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More