Home> India
Advertisement

ಸ್ವತಂತ್ರ್ಯ ದಿನಾಚರಣೆ: ನಾಳಿನ ಕೆಂಪುಕೋಟೆ ಕಾರ್ಯಕ್ರಮದ ವಿವರ ಇಲ್ಲಿದೆ

ಸ್ವತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ (Red Fort)ಯ ಮೇಲೆ ರಾಷ್ಟ್ರ ಧ್ವಜ ಹಾರಿಸುವುದು ಈವರೆಗೆ ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ.

ಸ್ವತಂತ್ರ್ಯ ದಿನಾಚರಣೆ: ನಾಳಿನ ಕೆಂಪುಕೋಟೆ ಕಾರ್ಯಕ್ರಮದ ವಿವರ ಇಲ್ಲಿದೆ

ನವದೆಹಲಿ: COVID- 19 ಎಂಬ ಕರಿನೆರಳಿನ ನಡುವೆಯೂ 74ನೇ ಸ್ವತಂತ್ರ್ಯ ದಿನಾಚರಣೆಗೆ ಸಕಲ ತಯಾರಿಗಳಾಗಿವೆ. ಕೆಂಪು ಕೋಟೆ (Red Fort)ಯಲ್ಲಿ ನಡೆಯುವ ಸ್ವತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವಿವರಗಳು ಈ ರೀತಿ ಇವೆ.

ಸ್ವತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ (Red Fort)ಯ ಮೇಲೆ ರಾಷ್ಟ್ರ ಧ್ವಜ ಹಾರಿಸುವುದು ಈವರೆಗೆ ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ. ಹಾಗೆಯೇ ಇದಕ್ಕೂ ಮೊದಲು ಪ್ರಧಾನಿಯಾದವರು ರಾಜಘಾಟ್ (Rajghat)ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ನಮಿಸಿ ಬರುವುದು ಕೂಡ ಸತ್ಸಂಪ್ರದಾಯವೇ. ಇದೇ ರೀತಿ ಈ ಬಾರಿ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಮೊದಲಿಗೆ ಬೆಳಿಗ್ಗೆ 7 ಗಂಟೆಗೆ ರಾಜಘಾಟ್ ಗೆ ಭೇಟಿ ನೀಡಲಿದ್ದಾರೆ.

ಸುಮಾರು 8 ರಿಂದ10 ನಿಮಿಷ ರಾಜಘಾಟ್ ನಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಬಳಿಕ ರಾಜಘಾಟ್ ದಿಂದ ಕೆಂಪುಕೋಟೆಯತ್ತ ಪ್ರಯಾಣ ಬೆಳಸಲಿದ್ದಾರೆ. 7:18ಕ್ಕೆ ಕೆಂಪುಕೋಟೆಗೆ ಆಗಮಿಸುವ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಲಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಧ್ವಜವಂದನೆ ಸ್ವೀಕರಿಸಲಿದ್ದಾರೆ.

ಇದಾದ ಬಳಿಕ ಬೆಳಿಗ್ಗೆ 7:30ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರಿಂದ ಧ್ವಜಾರೋಹಣ ನೆರವೇರಲಿದೆ. ಬಳಿಕ 21 ಫಿರಂಗಿ ಗುಂಡುಗಳನ್ನು ಸಿಡಿಸಲಾಗುತ್ತದೆ. ಅದಾದ ಮೇಲೆ 7:32ಕ್ಕೆ ಅವರು ದೇಶವನ್ನು ಉದ್ದೇಶೀಸಿ ಭಾಷಣ ಮಾಡಲಿದ್ದಾರೆ.

ಧ್ವಜಾರೋಹಣದ ನಂತರ ಎನ್ ಸಿಸಿ ಬೆಟಾಲಿಯನ್ ಗಳಿಂದ ರಾಷ್ಟ್ರಗೀತೆ ಗಾಯನ ಇರಲಿದೆ. ರಾಷ್ಟ್ರಗೀತೆ ಬಳಿಕ‌ ಪ್ರಧಾನಿ ಮೋದಿ ಅವರನ್ನು ಕೆಂಪು ಕೋಟೆಯಿಂದ ಬೀಳ್ಕೊಡಲಾಗುತ್ತದೆ. ರಕ್ಷಣಾ ಸಚಿವ, ಸಿಡಿಎಸ್ ಮತ್ತು ಮೂರು ಸೇನೆಯ ಮುಖ್ಯಸ್ಥರು ಬೀಳ್ಕೊಡಲಿದ್ದಾರೆ.

Read More