Home> India
Advertisement

ಬಿಹಾರದಲ್ಲಿ ರಾಮ್ ಮಂದಿರ ವಿಚಾರವಾಗಿ ಬಿಜೆಪಿ, ಜೆಡಿಯು ಕಾರ್ಯಕರ್ತರ ನಡುವೆ ಮಾರಾಮಾರಿ

ಬಿಹಾರದ ಹಾಜಿಪುರದಲ್ಲಿ ಬಿಜೆಪಿ ಮತ್ತು ಜೆಡಿಯು ಕಾರ್ಯಕರ್ತರ ಸಾರ್ವಜನಿಕ ಸಭೆಯಲ್ಲಿ ರಾಮ ಮಂದಿರದ ವಿಚಾರವಾಗಿ ಭಿನ್ನಾಭಿಪ್ರಾಯ ಭುಗಿಲೆದ್ದ ಹಿನ್ನಲೆಯಲ್ಲಿ ಪರಸ್ಪರ ಮಾರಾಮಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

 ಬಿಹಾರದಲ್ಲಿ ರಾಮ್ ಮಂದಿರ ವಿಚಾರವಾಗಿ ಬಿಜೆಪಿ, ಜೆಡಿಯು ಕಾರ್ಯಕರ್ತರ ನಡುವೆ ಮಾರಾಮಾರಿ

ನವದೆಹಲಿ: ಬಿಹಾರದ ಹಾಜಿಪುರದಲ್ಲಿ ಬಿಜೆಪಿ ಮತ್ತು ಜೆಡಿಯು ಕಾರ್ಯಕರ್ತರ ಸಾರ್ವಜನಿಕ ಸಭೆಯಲ್ಲಿ ರಾಮ ಮಂದಿರದ ವಿಚಾರವಾಗಿ ಭಿನ್ನಾಭಿಪ್ರಾಯ ಭುಗಿಲೆದ್ದ ಹಿನ್ನಲೆಯಲ್ಲಿ ಪರಸ್ಪರ ಮಾರಾಮಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಯು ಮತ್ತು ಬಿಜೆಪಿಯ ಈ ಜಂಟಿ ಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಅಭ್ಯರ್ಥಿ ಪಶುಪತಿ ಕುಮಾರ್ ಪರಾಸ್ ಅವರ ಕ್ಷೇತ್ರದ ಕುರಿತಾಗಿ ತಂತ್ರ ರೂಪಿಸುತ್ತಿದ್ದ ಸಂದರ್ಭದಲ್ಲಿ ರಾಮಮಂದಿರ ಪ್ರಚಾರದ ಮುಖ್ಯ ವಿಷಯವಾಗಬಾರದು ಎಂದು ಜೆಡಿಯು ನಾಯಕ  ಸಂಜಯ್ ವರ್ಮಾ ಹೇಳಿದರು.ಇದಾದ ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಕಾರ್ಯಕರ್ತರು ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕುರ್ಚಿಗಳನ್ನು ಎಸೆದಿದ್ದಾರೆ ಎನ್ನಲಾಗಿದೆ.

ಈ ಭಿನ್ನಾಭಿಪ್ರಾಯದ ವಿಚಾರವಾಗಿ ಮಾತನಾಡಿದ ಪಶುಪತಿ ಕುಮಾರ್ ಪರಾಸ್ " ಕೇವಲ ಮಾಧ್ಯಮಗಳು ಪಕ್ಷದ ಕಾರ್ಯಕರ್ತರು ಗದ್ದಲ ನಡೆಸಿದ್ದಾರೆ ಎಂದು ಬಿಂಬಿಸುತ್ತಿವೆ. ಆದರೆ ಸ್ಥಳಿಯ ಜನರಲ್ಲಿ ಈ ವಿಚಾರವಾಗಿ ಭಿನ್ನಾಭಿಪ್ರಾಯವಿಲ್ಲವೆಂದು ಹೇಳಿದರು.ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿ (ಯು) - ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಲ್ಜೆಪಿ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಭ್ಯರ್ಥಿಗಳನ್ನು ಕಣಕ್ಕೆ  ಇಳಿಸಿದೆ.ಈಗ ರಾಮ ಮಂದಿರ, ಕಲಂ 370 ಮತ್ತು ಕಲಂ 35 ಎ ನಂತಹ ಹಲವು ವಿವಾದಾಸ್ಪದ ವಿಷಯಗಳ ವಿಚಾರವಾಗಿ  ಬಿಜೆಪಿ ಮತ್ತು ಜೆಡಿ (ಯು) ನಡುವೆ ಒಮ್ಮತವಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈಗ ಸ್ಥಳೀಯ ಮಟ್ಟದಲ್ಲಿ ಈಗ ಇದು ಸಂಘರ್ಷಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

 

Read More