Home> India
Advertisement

ಜಮ್ಮು-ಕಾಶ್ಮೀರದ ಈ ಕ್ಷೇತ್ರದಲ್ಲಿ 3 ಹಂತದಲ್ಲಿ ಮತದಾನ, ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲು!

ಭಾರತದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಲೋಕಸಭಾ ಕ್ಷೇತ್ರದ ಮತದಾನ ಮೂರು ಹಂತಗಳಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಭಾನುವಾರ ಪ್ರಕಟಿಸಿದೆ.

ಜಮ್ಮು-ಕಾಶ್ಮೀರದ ಈ ಕ್ಷೇತ್ರದಲ್ಲಿ 3 ಹಂತದಲ್ಲಿ ಮತದಾನ, ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲು!

ಶ್ರೀನಗರ: ಭಾರತದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಲೋಕಸಭಾ ಕ್ಷೇತ್ರದ ಮತದಾನ ಮೂರು ಹಂತಗಳಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಭಾನುವಾರ ಪ್ರಕಟಿಸಿದೆ.

ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಿಸಿದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಲೋಕಸಭೆ ಚುನಾವಣೆಯಲ್ಲಿ ಜರುಗುವುದಿಲ್ಲ ಎಂದು ಹೇಳಿದರು. "ಕೇವಲ ಒಂದು ಕ್ಷೇತ್ರಕ್ಕೆ ಅಂದರೆ ಅನಾಂತ್ನಾಗ್ ಲೋಕ ಸಭಾ ಕ್ಷೇತ್ರಕ್ಕೆ ನಾವು ಮೂರು ಹಂತದ ಚುನಾವಣೆ ನಡೆಸಬೇಕಿದೆ - ಹಾಗಾಗಿ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಎಷ್ಟು ಸೂಕ್ಷ್ಮವಾಗಿದೆ ಎಂದು ನೀವು ಊಹಿಸಬಹುದು" ಎಂದು ಅವರು ಹೇಳಿದರು.

ರಾಜ್ಯದ ಆರು ಲೋಕಸಭಾ ಸ್ಥಾನಗಳಿಗೆ ಐದು ಹಂತದಲ್ಲಿ ಮತದಾನ ನಡೆಯಲಿದೆ.

ಏಪ್ರಿಲ್ 11 ರಂದು ಮೊದಲ ಹಂತದಲ್ಲಿ ಬಾರಾಮುಲ್ಲಾ ಮತ್ತು ಜಮ್ಮು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 18 ರಂದು ಎರಡನೇ ಹಂತದಲ್ಲಿ ಶ್ರೀನಗರ ಮತ್ತು ಉಧಮ್ಪುರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅನಾಂತ್ನಾಗ್ನಲ್ಲಿ ಏಪ್ರಿಲ್ 23 ಮತ್ತು 29 ಮತ್ತು ಮೇ 6 ರಂದು ಮತದಾನ ನಡೆಯಲಿದೆ. ಮೇ 6 ರಂದು ಲಡಾಖ್ ನಲ್ಲೂ ಚುನಾವಣೆ ನಡೆಯಲಿದೆ. ಈ ಆರು ಕ್ಷೇತ್ರಗಳ ಮತ ಎಣಿಕೆ ಮೇ 23ರಂದು ನಡೆಯಲಿದೆ ಎಂದು ಆರೋರಾ ಮಾಹಿತಿ ನೀಡಿದರು.

ಏಳು ಹಂತದ ಲೋಕಸಭೆ ಚುನಾವಣೆ ವೇಳಾಪಟ್ಟಿಯನ್ನು ಭಾನುವಾರ ಪ್ರಕಟಿಸಿದಾಗ, ಚುನಾವಣಾ ಸಮಿತಿಯು ನಿರಂತರವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ವಿಧಾನಸಭಾ ಚುನಾವಣೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.

"ಕೇಂದ್ರ ಪಡೆಗಳು ಮತ್ತು ಇತರ ಅಗತ್ಯತೆಗಳ ಲಭ್ಯತೆಯ ನಿರ್ಬಂಧಗಳು, ಇತ್ತೀಚಿನ ಹಿಂಸಾಚಾರದ ಘಟನೆಗಳ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಭದ್ರತೆಗಾಗಿ ಕೇಂದ್ರೀಯ ದಳಗಳ ಅಗತ್ಯತೆ ಮತ್ತು ಇತರ ಎಲ್ಲಾ ಸವಾಲುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚುನಾವಣಾ ಆಯೋಗ ಈ ಹಂತದಲ್ಲಿ ಲೋಕಸಭಾ ಚುನಾವಣೆಯನ್ನು ಮಾತ್ರ ಘೋಷಿಸಲು ನಿರ್ಧರಿಸಿದೆ" ಎಂದು ಅರೋರಾ ಮಾಧ್ಯಮಗಳಿಗೆ ತಿಳಿಸಿದರು.

ಗೃಹ ಸಚಿವಾಲಯ, ರಾಜಕೀಯ ಪಕ್ಷಗಳು, ಕೇಂದ್ರೀಯ ಮತ್ತು ರಾಜ್ಯ ಏಜೆನ್ಸಿಗಳು ಮತ್ತು ಜಿಲ್ಲೆಯ ಆಡಳಿತಗಳು ಸೇರಿದಂತೆ ಎಲ್ಲರಿಂದ ಸಂಗ್ರಹಿಸಲಾದ ಮಾಹಿತಿ ಆಧಾರದ ಮೇಲೆ ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಎರಡೂ ಚುನಾವಣೆಗಳನ್ನು ನಡೆಸದೆ, ಕೇವಲ ಲೋಕಸಭಾ  ಚುನಾವಣೆಯನ್ನು ಮಾತ್ರ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅರೋರಾ ಹೇಳಿದರು.
 

Read More