Home> India
Advertisement

ಮುಂದಿನ 48 ಗಂಟೆಗಳಲ್ಲಿ ಈ ಭಾಗಗಳಲ್ಲಿ ಅಪ್ಪಳಿಸಲಿದೆ ಚಂಡಮಾರುತ: ಹವಾಮಾನ ಇಲಾಖೆ

ಹವಾಮಾನ ಇಲಾಖೆಯ ಪ್ರಕಾರ, ಅರೇಬಿಯನ್ ಸಮುದ್ರದಲ್ಲಿ ಉಂಟಾಗುವ ವಾಯುಭಾರ ಕುಸಿತದಿಂದ ಹಲವು ಭಾಗಗಳಲ್ಲಿ ಪ್ರಭಾವ ಬೀರಲಿದೆ ಎಂದು ತಿಳಿಸಿದೆ.

ಮುಂದಿನ 48 ಗಂಟೆಗಳಲ್ಲಿ ಈ ಭಾಗಗಳಲ್ಲಿ ಅಪ್ಪಳಿಸಲಿದೆ ಚಂಡಮಾರುತ: ಹವಾಮಾನ ಇಲಾಖೆ

ಅಹಮದಾಬಾದ್: ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಬಿರುಗಾಳಿಗಳ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಅರೇಬಿಯನ್ ಸಮುದ್ರದಲ್ಲಿ ಉಂಟಾಗುವ ವಾಯುಭಾರ ಕುಸಿತದಿಂದ ಹಲವು ಭಾಗಗಳಲ್ಲಿ ಪ್ರಭಾವ ಬೀರಲಿದೆ ಎಂದು ತಿಳಿಸಿದೆ. ಪ್ರತಿ ಗಂಟೆಗೆ ಗಾಳಿಯ ವೇಗ 75 ಕಿ.ಮೀ.ಗೆ ಗರಿಷ್ಠ 135 ಕಿಲೋಮೀಟರ್ ಇದೆ.

ಗುಜರಾತಿನ ಈ ಭಾಗಗಳಲ್ಲಿ ಮಳೆ ಸಾಧ್ಯತೆ:

ಸೈಕ್ಲೋನಿಕ್ ಚಂಡಮಾರುತವು ಜೂನ್ 12-13 ರಂದು ಸೌರಾಷ್ಟ್ರದ ಕರಾವಳಿ ಭಾಗದಲ್ಲಿ ಪ್ರಭಾವ ಬೀರಲಿದೆ. ಚಂಡಮಾರುತದ ಕಾರಣದಿಂದಾಗಿ, ವೆರಾವಲ್, ಭುಜ್ ಮತ್ತು ಸೂರತ್ ಕರಾವಳಿ ಪ್ರದೇಶಗಳಲ್ಲಿ ಅಹಮದಾಬಾದ್, ಗಾಂಧಿನಗರ ಮತ್ತು ರಾಜ್ಕೋಟ್ನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಗಾಳಿಯ ವೇಗವು ಪ್ರತಿ ಗಂಟೆಗೆ 90-100 ಕಿ.ಮೀ. ಆಗಿದ್ದು, ಈಶಾನ್ಯ ಪ್ರದೇಶದಲ್ಲಿ ಅರೇಬಿಯನ್ ಸಮುದ್ರದಿಂದ ಗಂಟೆಗೆ 115 ಕಿ.ಮೀ. ಇರಲಿದೆ.

fallbacks

ಅರೇಬಿಯನ್ ಸಮುದ್ರದ ಕಾರಣ ಭಾರೀ ಮಳೆ:
ಜೂನ್ 12 ರಂದು ದಕ್ಷಿಣ ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಮಾರುತಗಳು 50-60 ರಿಂದ 70 ಕಿ.ಮೀ.ವರೆಗೂ ವೇಗದಲ್ಲಿ ಗಾಳಿ ಬೀಸಲಿದೆ ಮತ್ತು ಜೂನ್ 13 ರಂದು ಅರೇಬಿಯನ್ ಸಮುದ್ರದ ಉತ್ತರ ಭಾಗದಲ್ಲಿ ಇದರ ವೇಗ 110-120 ಕಿ.ಮೀ.ದಿಂದ 135 ಕಿಲೋಮೀಟರ್ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೇ ಎನ್ನಲಾಗಿದೆ.

Read More