Home> India
Advertisement

'ಪ್ರಧಾನಿ ನರೇಂದ್ರ ಮೋದಿ ರಾಮನಾಗಿದ್ದರೆ, ಅಮಿತ್ ಶಾ ಹನುಮಾನ್ ಇದ್ದಂತೆ'...!

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನವನ್ನು ತಡೆಯಲು ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಬುಧವಾರ ಹೇಳಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆದರಿಕೆಗಳಿಗೆ ಹೆದರದ ಸಿಂಹ ಎಂದು ಬಣ್ಣಿಸಿದರು.

'ಪ್ರಧಾನಿ ನರೇಂದ್ರ ಮೋದಿ ರಾಮನಾಗಿದ್ದರೆ, ಅಮಿತ್ ಶಾ ಹನುಮಾನ್ ಇದ್ದಂತೆ'...!

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನವನ್ನು ತಡೆಯಲು ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಬುಧವಾರ ಹೇಳಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆದರಿಕೆಗಳಿಗೆ ಹೆದರದ ಸಿಂಹ ಎಂದು ಬಣ್ಣಿಸಿದರು.

“ವಿಶ್ವದ ಯಾವುದೇ ಶಕ್ತಿಯು ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ತಡೆಯಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರು ಬೆದರಿಕೆಗಳಿಗೆ ಹೆದರದ ಪ್ರಧಾನಿ. ಅವರು ಸಿಂಹ. ನರೇಂದ್ರ ಮೋದಿ ಭಗವಾನ್ ರಾಮ್ ಆಗಿದ್ದರೆ, ಅಮಿತ್ ಶಾ ಭಗವಾನ್ ಹನುಮಾನ್, ” ಎಂದು ಸಿಂಗ್ ಭೋಪಾಲ್‌ನಲ್ಲಿ ಹೇಳಿದರು. ಕಳೆದ ತಿಂಗಳು ಜೈಪುರದಲ್ಲಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಸಿಎಎ ಕಾಯ್ದೆ ಜಾರಿಗೆಗೆ ಚೌಹಾಣ್ ಮೋದಿಯನ್ನು ದೇವರಿಗೆ ಹೋಲಿಸಿದ್ದರು.

ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಸಿಎಎ ಜನವರಿ 10 ರಂದು ಜಾರಿಗೆ ಬಂದಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವಿರೋಧ ಪಕ್ಷಗಳು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗೆ ನಾಂದಿ ಹಾಡಿದೆ, ಪೌರತ್ವಕ್ಕೆ ಧರ್ಮವನ್ನು ಮಾನದಂಡವನ್ನಾಗಿ ಮಾಡಿದ ಹಿನ್ನಲೆಯಲ್ಲಿ ಈಗ ಅದು ವಿಭಜಕ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ದೇಶದಲ್ಲೆಡೆ ತೀವ್ರ ವಿರೋಧಕ್ಕೆ ಕಾರಣವಾಗಿದೆ.ಈಗ ಬಿಜೆಪಿಯೇತರ ನಾಲ್ಕು ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಕೇರಳ ಮತ್ತು ಪಂಜಾಬ್ ಪೌರತ್ವ ಕಾಯ್ದೆಯ ವಿರುದ್ಧ ತಮ್ಮ ಶಾಸಕಾಂಗ ಸಭೆಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸಿದೆ. ಕೇರಳ ಈ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಾಸನವನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಒತ್ತಾಯಿಸುವುದರೊಂದಿಗೆ ಸರ್ಕಾರವು ಸಿಎಎ ಬಗ್ಗೆ ಕಠಿಣ ಕ್ರಮವನ್ನು ಅಳವಡಿಸಿಕೊಂಡಿದೆ. ಸಿಎಎ ಬಗ್ಗೆ ವಿರೋಧ ಪಕ್ಷಗಳು ಸಾರ್ವಜನಿಕರನ್ನು ದಾರಿತಪ್ಪಿಸುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.

ಮಂಗಳವಾರದಂದು ಯುರೋಪಿಯನ್ ಪಾರ್ಲಿಮೆಂಟ್ ಕರಡು ನಿರ್ಣಯದಲ್ಲಿ ಸಿಎಎ ಕಾಯ್ದೆ ಸ್ವಭಾವದಲ್ಲಿ ತಾರತಮ್ಯ ಮತ್ತು ಅಪಾಯಕಾರಿಯಾಗಿ ವಿಭಜನೆಯಾಗಿದೆ ಎಂದು ಹೇಳಿದೆ ಮತ್ತು ಈ ತಾರತಮ್ಯದ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಕೋರಿತು.

Read More